Posts

ಭಕ್ತಿಯಲ್ಲಿ ಭಾವ

ಭಕ್ತಿಯೋಗದಲ್ಲಿ ಶಾಂತಭಾವ, ಮಧುರಭಾವ, ವಾತ್ಸಲ್ಯಭಾವ, ದಾಸ್ಯಭಾವ ಮತ್ತು ಸಖ್ಯಭಾವ ಎಂದು ಐದು ವಿಧವಾದ ಭಾವಗಳಿವೆ. ಮಧುರ ಭಾವವನ್ನು ಕಾಂತಾಭಾವವೆಂದು ಹೇಳುವರು ಮತ್ತು ಸಖ್ಯಭಾವವು ಮಧುರ ಭಾವದ ಗುಂಪಿಗೆ ಸೇರಿದುದು. ನಿಮ್ಮ ಅಭಿರುಚಿ ಮತ್ತು ಸ್ವಭಾವಕ್ಕೆ ಹೊಂದುವ ಯಾವುದಾದರು ಒಂದು ಭಾವವನ್ನು ಆರಿಸಿಕೊಳ್ಳಿ ಮತ್ತು ಭಕ್ತಿಯನ್ನು ಪರಮಾವಧಿ ಮಟ್ಟಕ್ಕೆ ಬೆಳೆಸಿರಿ.   ಸನ್ಯಾಸಿ ಭಕ್ತರು ಶಾಂತಭಾವವನ್ನು ಹೊಂದಿರುವರು. ಶಾಂತಭಾವದ ಭಕ್ತನು ಉದ್ವಿಗ್ನತೆಗಳಿಗೆ ಒಳಪಡುವುದಿಲ್ಲ ಮತ್ತು ಹೊರಪಡಿಸುವುದಿಲ್ಲ. ಅವನು ನರ್ತಿಸಲಾರ, ಅಳಲಾರ, ಆದರೂ ಅವನ ಹೃದಯವು ಶ್ರದ್ಧಾಭಕ್ತಿ ಪೂರ್ಣವಾಗಿರುವುದು. ಶ್ರೀ ಅರವಿಂದ ಮಹಾರಾಜರು ಈ ವಿಧದ ಭಾವವನ್ನು ಮೆಚ್ಚಿರುವುದಲ್ಲದೆ ನರ್ತನ ಮತ್ತು ರೋದನವನ್ನು ಮಾನಸಿಕ ದೌರ್ಬಲ್ಯದ ಸ್ಥಿತಿಯೆಂದು ಪರಿಗಣಿಸಿದ್ದಾರೆ.   ಮಧುರಭಾವದಲ್ಲಿ ಭಕ್ತನು ಪ್ರೇಮಿ ಮತ್ತು ಪ್ರಿಯತಮ ಎಂಬ ಭಾವನೆಯನ್ನು ಆಹ್ವಾನಿಸುವನು. ತಾನು ರಾಮ ಅಥವ ಕೃಷ್ಣನ ಪತ್ನಿಯೆಂದು ಭಾವಿಸುವನು. ಮಹಮ್ಮದೀಯ ಸೂಫಿಗಳು ಈ ಮನೋ ಧರ್ಮವನ್ನು ಪುರಸ್ಕರಿಸುವರು. ಬೃಂದಾವನ, ಮಥುರಾ ಮತ್ತು ನಾಡಿಯಾದಲ್ಲಿ ಮಧುರ ಭಾವದ ಭಕ್ತರನ್ನು ಹೆಚ್ಚು ಸಂಖ್ಯೆಯಲ್ಲಿ ಕಾಣಬಹುದು. ಅವರು ಸ್ತ್ರೀಯರಂತೆಯೆ ವೇಷಭೂಷಣಗಳನ್ನು ತೊಡುವುದಲ್ಲದೆ ಅವರಂತೆಯೇ ಸಂಭಾಷಿಸುವರು ಮತ್ತು ವರ್ತಿಸುವರು. ತಮಗೆ ಮೂರ್ಛಾವಸ್ಥೆಯುಂಟಾಗುವವರೆಗೂ (swoon) ಬಹುವಾಗಿ ನರ್ತಿಸಿ ಬಹಳ ಬಳಲಿ ಬೀಳುವರು.   ಸಖೀಭಾ

ಅವಧೂತನ ಅಂಗಿ

ಅಂದು ಮಂಗಳವಾರದ ಮಟ ಮಟ ಮದ್ಯಾಹ್ನ ಅವಧೂತರು ಸ್ನಾನ ಮಾಡಿ, ಅಂಗಿಯನ್ನು ಒಗೆದು ಒಣ ಹಾಕಿ ಮರದ ಕೆಳಗೆ ವಿಶ್ರಮಿಸಿಕೊಳ್ಳುತಿದ್ದರು. ಹಿತವಾದ ತಂಗಾಳಿಗೆ ಮೈಯೊಡ್ಡಿ, ಹಕ್ಕಿಗಳ ದನಿ ಕೇಳುತ್ತಾ ತನ್ನನ್ನೇ ತಾನು ಮರೆತಿದ್ದರು. ಎಲ್ಲಿಂದಲೋ ಬೀಸಿ ಬಂದ ಬಿರುಗಾಳಿ, ಅವಧೂತರ ಅಂಗಿಯನ್ನು ಮುಳ್ಳು ಕಲ್ಲುಗಳ ನಡುವೆ ಒತ್ತೊಯ್ದು ಚಿಂದಿ ಚಿಂದಿ ಮಾಡಿತು. ಇದನ್ನು ಗಮನಿಸಿದ ಅವಧೂತರು ಸಂತಸದಿಂದ ಕುಣಿಯುವುದಕ್ಕೆ ಶುರು ಮಾಡಿದರು. ಅವರ ಪ್ರತಿಕ್ರಿಯೆಯನ್ನು ನೋಡಿದ ದಾರಿಹೋಕರಿಗೆ ಸುಮ್ಮನಿರಲಾಗಲಿಲ್ಲ, ಪ್ರಶ್ನಿಸಿದರು…? “ಸ್ವಾಮಿ, ನಿಮ್ಮ ಅಷ್ಟು ಒಳ್ಳೆಯ ಅಂಗಿ ಚಿಂದಿಯಾದರು, ಸಂತಸದಿಂದ ಕುಣಿಯುತ್ತಿರುವೆಯಲ್ಲ…ಏನಾಗಿದೆ ನಿನಗೆ?” ಅವಧೂತರು ಕುಣಿಯುತ್ತಲೇ ಉತ್ತರಿಸಿದರು...  “ಅದೃಷ್ಟಕ್ಕೆ, ನಾನು ಅಂಗಿಯನ್ನು ಬಿಚ್ಚಿಟ್ಟ ಮೇಲೆ ಬಿರುಗಾಳಿ ಒತ್ತೊಯ್ದು ಅದನ್ನು ಚಿಂದಿ ಮಾಡಿತು. ಒಂದು ವೇಳೆ, ನಾನು ಅಂಗಿಯನ್ನು ಧರಿಸಿದ್ದಾಗ ಈ ರೀತಿ ಆಗಿದ್ದರೆ ನನ್ನ ಗತಿ ಏನಾಗುತ್ತಿತ್ತು ಎಂಬುದನ್ನು ನೆನದು, ನಾನು ಚಿಂದಿಯಾಗಲಿಲ್ಲವಲ್ಲ ಎಂಬ ಖುಷಿಯಿಂದ ಕುಣಿಯುತ್ತಿದ್ದೇನೆ.” ಎಂದು ಹೇಳಿ ಕುಣಿತವನ್ನು ಮುಂದುವರೆಸಿದರು.  ಈ ಕಥೆ ತುಂಬಾ ಸರಳ…ಆದರೆ ಇದು ನನ್ನನ್ನು ಪದೇ ಪದೇ ಕಾಡುತ್ತದೆ. ಇದು ಕೇವಲ ಕಥೆಯಾಗಿದ್ದರೆ ಓದಿದ ನಂತರ ಮರೆತುಹೋಗುತ್ತಿತ್ತು. ಆದರೆ ಇದು ಹೊಮ್ಮಿಸುವ ಅರ್ಥ ಈ ಜೀವನಕ್ಕೆ ಸಾಕಾಗುವಷ್ಟು ಉತ್ತರಗಳನ್ನು ನಮ್ಮೆಲ್ಲಾ ಪ್ರಶ್ನೆಗಳಿಗೆ ಒದಗಿಸುತ್ತದೆ.

ನಾವು ಸಂಪಾದಿಸಬೇಕಾದ ಧನ

ನಾವು ಸಂಪಾದಿಸಬೇಕಾದ ಧನ (ಸರ್ವತಂತ್ರಸ್ವತಂತ್ರ ಶ್ರೀವೇದಾಂತದೇಶಿಕರ ಕೃತಿ) ಶಿಲಂ ಕಿಮನಲಂ ಭವೇದನಲಮೌದರಂ ಬಾಧಿತುಂ ಪಯಃ ಪ್ರಸೃತಿಪೂರಕಂ ಕಿಮು ನ ಧಾರಕಂ ಸಾರಸಮ್ | ಆಯತ್ನಮಲಮಲ್ಪಕಂ ಪಥಿ ಪಟಚ್ಚರಂ ಕಚ್ಚರಂ ಭಜನ್ತಿ ವಿಬುಧಾ ಮುಧಾ ಅಹಹ ಕುಕ್ಷಿತಃ ಕುಕ್ಷಿತಃ ! ||1|| ಹೊಟ್ಟೆಯ ಹಸಿವೆಂಬ ಕಿಚ್ಚನ್ನು ಹೋಗಲಾಡಿಸುವದಕ್ಕೆ ಉಂಭ ವೃತ್ತಿಯೇ ಸಾಲದೆ? ಕೆರೆಯ ನೀರಿನ ಒಂದು ಬೊಗಸೆಯಾದರೆ ಬಾಯಾರಿಕೆಯನ್ನು ಇಂಗಿಸಿ ಕೊಂಡು ಪ್ರಾಣವನ್ನು ಧರಿಸಿರುವದಕ್ಕೆ ಆಗಲಾರದೆ? ಯಾವ ಆಯಾಸವು ಇಲ್ಲದೆ ದೊರಕುವ ದಾರಿಯಲ್ಲಿ ಬಿದ್ದಿರುವ ಅರಿವೆಯ ತುಂಡೇ ಮಾನವನ್ನು ಮುಚ್ಚಿಕೊಳ್ಳುವದಕ್ಕೆ ಸಾಲದೆ ಹೀಗಿದ್ದರೂ ಕುತ್ಸಿತನಾದವನನ್ನು ತಿಳಿದವರು ಕೂಡ ಸುಮ್ಮಸುಮ್ಮನೆ ಸೇವಿಸುತ್ತಾರಲ್ಲ! ಆಹಹ ! ಇದು ಹೊಟ್ಟೆಯ ಪಾಡಿಗಾಗಿ, ಹೊಟ್ಟೆಯ ಪಾಡಿಗಾಗಿ! ದುರೀಶ್ವರದ್ವಾರಬಹಿರ್ವಿತರ್ದಿಕಾ ದುರಾಸಿಕಾಯೈ ರಚಿತೋsಯಮಞ್ಜಲಿಃ | ಯದಞ್ಜನಾಭಂ ನಿರಪಾಯಮಸ್ತಿ ನೋ ಧನಞ್ಜಯಸ್ಯನ್ದನಭೂಷಣಂ ಧನಮ್ ||2|| ಕೆಟ್ಟ ಧಣಿಗಳ ಹೊರಜಗಲಿಯ ಮೇಲೆ ಕೂರುವ ಕೆಟ್ಟಕೆಲಸಕ್ಕೆ ಇಗೋ, ಕೈಮುಗಿದೆವು; ಏಕೆಂದರೆ ಧನಂಜಯನ (ಅರ್ಜುನನ) ರಥಕ್ಕೆ ಅಲಂಕರವಾಗಿ ಅಂಜನ ಪರ್ವತದಂತೆ ಹೊಳೆಯುವ ಶ್ರೀಕೃಷ್ಣನೆಂಬ ಅಪಾಯವಿಲ್ಲದ ಧನವು ನಮಗಿರುತ್ತದೆ. ಕಾಚಾಯ ನೀಚಂ ಕಮನೀಯವಾಚಾ ಮೋಚಾಫಲಸ್ವಾದುಮುಚಾ ನ ಯಾಚೇ | ದಯಾಕುಚೇಲೇ ಧನವತ್ಕು ಚೇಲೇ ಸ್ಥಿತೇsಕುಚೇಲೇ ಶ್ರಿತಮಾಕುಚೇಲೇ ||3|| ದಯಾನಿಧಿ

ಲಕ್ಷ್ಮೀವಾಕ್ಯ (ಲಕ್ಷ್ಮೀ ಹಾಡು)

ಗೃಹಿಣಿಯ ದಿನಚರಿಗೆ ದಾರಿದೀಪವಾಗುವಂತಹ ಅನೇಕ ಸಂಪ್ರದಾಯದ ಹಾಡುಗಳನ್ನು ಹೆಂಗಳೆಯರು ಹಾಡುವುದನ್ನು ಕಾಣುತ್ತೇವೆ. "ಲಕ್ಷ್ಮೀವಾಕ್ಯ" ಎಂಬ ಹಾಡಿನಲ್ಲಿ ಲಕ್ಷ್ಮೀದೇವಿ ತನ್ನ ಭಕ್ತನಿಗೆ ಅಷ್ಟೈಶ್ವರ್ಯವನ್ನಿತ್ತು, ತಾನು ಎಂತಹ ಮನೆಯಲ್ಲಿ ನೆಲೆಸುತ್ತೇನೆ ಎನ್ನುವುದನ್ನು ಅರುಹುತ್ತಾಳೆ. ಬಡಬ್ರಾಹ್ಮಣನೊಬ್ಬ ತನ್ನ ಪತ್ನಿಯೊಡನೆ ಆಚಾರವಂತನಾಗಿ ಬಾಳುತ್ತಿದ್ದ. ಒಂದು ದಿನ ಹಣ್ಣು ಹಂಪಲನ್ನು ತರಲು ಆತ ತೋಟಕ್ಕೆ ಹೋದ. ಲಕ್ಷ್ಮೀದೇವಿ ಆತನನ್ನು ಪರೀಕ್ಷಿಸುವ ಸಲುವಾಗಿ ಮುಪ್ಪಿನ ಮುತ್ತೈದೆಯಾಗಿ ಅವನೆದುರಿಗೆ ಕಾಣಿಸಿಕೊಳ್ಳುತ್ತಾಳೆ. ಬ್ರಾಹ್ಮಣ ಆಕೆಯ ಪಾದಗಳಿಗೆ ವಂದಿಸಿ, ನಿಮ್ಮ ಇರವೆಲ್ಲಿ ಎಂದು ಕೇಳಲು ಆಕೆ ತಾನು ದಿಕ್ಕಿಲ್ಲದವಳು ಎನ್ನುತ್ತಾಳೆ. "ಉತ್ತುಮರಾಗಿಹ ಮುತ್ತವ್ವರ್ ಕೇಳಿರಿ ವಿಪ್ರರು ನೀವು ಇರುವೆಲ್ಲಿ ಎಂದರೆ ವಿಪ್ರ ಕೇಳೆನಗೆ ಪಿತರಿಲ್ಲ | ಮತಿವಂತ ಕೇಳಯ್ಯ ಪತಿಸುತಾದಿಗಳಿಲ್ಲ ದ್ವಿಜಬೃಂದದಿಂದೊಪ್ಪಿಹ ತನಯರಿಲ್ಲ ಮತಿಯ ನೀ ನೋಡು ಮನದಲ್ಲಿ ||" ಮುದುಕಿಯ ಈ ಮಾತನ್ನು ಕೇಳಿ ಬ್ರಾಹ್ಮಣನ ಮನಸ್ಸು ಕರಗಿ ನೀರಾಗುತ್ತದೆ. ತಾನು ಕಿತ್ತಿದ್ದ ನೆಲ್ಲಿಕಾಯಿಯನ್ನು ಹೆಗಲಿಗೇರಿಸಿಕೊಂಡು ಮುದುಕಿಯನ್ನೂ ಕರೆದುಕೊಂಡು ಮನೆಕಡೆ ನಡೆಯುತ್ತಾನೆ. ತನಗೇ ತಿನ್ನಲು ಗತಿಯಲ್ಲದಿದ್ದರೂ ಹಿಂದು ಮುಂದು ಯೋಚಿಸದೆ ಗತಿವಿಹೀನಳಾದ ಮುದುಕಿಯನ್ನು ಮನೆಗೆ ಕರೆದೊಯ್ಯುವ ಬ್ರಾಹ್ಮಣನ ಹೃದಯ ವೈಶಾಲ್ಯಕ್

ಗಂಗಾಸ್ತುತೀ ಗಂಗಾದಶಹರಾಸ್ತೋತ್ರಮ್

ಶ್ರೀಗಣೇಶಾಯ ನಮಃ ॥ ಬ್ರಹ್ಮೋವಾಚ -- ನಮಃ ಶಿವಾಯೈ ಗಂಗಾಯೈ ಶಿವದಾಯೈ ನಮೋ ನಮಃ । ನಮಸ್ತೇ ರುದ್ರರೂಪಿಣ್ಯೈ ಶಾಂಕರ್ಯೈ ತೇ ನಮೋ ನಮಃ ॥ 1॥ ನಮಸ್ತೇ ವಿಶ್ವರೂಪಿಣ್ಯೈ ಬ್ರಹ್ಮಾಮೂರ್ತ್ಯೈ ನಮೋ ನಮಃ । ಸರ್ವದೇವಸ್ವರೂಪಿಣ್ಯೈ ನಮೋ ಭೇಷಜಮೂರ್ತಯೇ ॥ 2॥ ಸರ್ವಸ್ಯ ಸರ್ವವ್ಯಾಧೀನಾಂ ಭಿಷಕ್ಷ್ರೇಷ್ಠ್ಯೈ ನಮೋಽಸ್ತು ತೇ । ಸ್ಥಾಣುಜಂಗಮಸಮ್ಭೂತವಿಷಹನ್ತ್ರ್ಯೈ ನಮೋ ನಮಃ ॥ 3॥ ಭೋಗೋಪಭೋಗದಾಯಿನ್ಯೈ ಭೋಗವತ್ಯೈ ನಮೋ ನಮಃ । ಮನ್ದಾಕಿನ್ಯೈ ನಮಸ್ತೇಽಸ್ತು ಸ್ವರ್ಗದಾಯೈ ನಮೋ ನಮಃ ॥ 4॥ ನಮಸ್ತ್ರೈಲೋಕ್ಯಭೂಷಾಯೈ ಜಗದ್ಧಾತ್ರ್ಯೈ ನಮೋ ನಮಃ । ನಮಸ್ತ್ರಿಶುಕ್ಲಸಂಸ್ಥಾಯೈ ತೇಜೋವತ್ಯೈ ನಮೋ ನಮಃ ॥ 5॥ ನನ್ದಾಯೈ ಲಿಂಗಧಾರಿಣ್ಯೈ ನಾರಾಯಣ್ಯೈ ನಮೋ ನಮಃ । ನಮಸ್ತೇ ವಿಶ್ವಮುಖ್ಯಾಯೈ ರೇವತ್ಯೈ ತೇ ನಮೋ ನಮಃ ॥ 6॥ ಬೃಹತ್ಯೈ ತೇ ನಮಸ್ತೇಽಸ್ತು ಲೋಕಧಾತ್ರ್ಯೈ ನಮೋ ನಮಃ । ನಮಸ್ತೇ ವಿಶ್ವಮಿತ್ರಾಯೈ ನನ್ದಿನ್ಯೈ ತೇ ನಮೋ ನಮಃ ॥ 7॥ ಪೃಥ್ವ್ಯೈ ಶಿವಾಮೃತಾಯೈ ಚ ಸುವೃಷಾಯೈ ನಮೋ ನಮಃ । ಶಾನ್ತಾಯೈ ಚ ವರಿಷ್ಠಾಯೈ ವರದಾಯೈ ನಮೋ ನಮಃ ॥ 8॥ ಉಸ್ರಾಯೈ ಸುಖದೋಗ್ಧ್ರ್ಯೈ ಚ ಸಂಜೀವಿನ್ಯೈ ನಮೋ ನಮಃ । ಬ್ರಹ್ಮಿಷ್ಠಾಯೈ ಬ್ರಹ್ಮದಾಯೈ ದುರಿತಘ್ನ್ಯೈ ನಮೋ ನಮಃ । ಪ್ರಣತಾರ್ತಿಪ್ರಭಂಜಿನ್ಯೈ ಜಗನ್ಮಾತ್ರೇ ನಮೋಽಸ್ತು ತೇ ॥ 9॥ ಸರ್ವಾಪತ್ಪ್ರತಿಪಕ್ಷಾಯೈ ಮಂಗಲಾಯೈ ನಮೋ ನಮಃ ॥ 10॥ ಶರಣಾಗತದೀನಾರ್ತಪರಿತ್ರಾಣಪರಾಯಣೇ । ಸರ್ವಸ್ಯಾರ್

ಲಲಿತಾ ತ್ರಿಶತೀ ಭಾಷ್ಯಂ

ವಂದೇ ವಿಘ್ನೇಶ್ವರಂ ದೇವಂ ಸರ್ವಸಿದ್ಧಿಪ್ರದಾಯಿನಮ್ | ವಾಮಾಂಕಾರೂಢವಾಮಾಕ್ಷೀಕರಪಲ್ಲವಪೂಜಿತಮ್ ||1|| ಶ್ರೀಮಚ್ಛಂಕರ ಭಗವತ್ಪೂಜ್ಯಪಾದರು ಸ್ವೋಪಾಸ್ಯಪರದೇವತೆಯಾದ ಶ್ರೀ ಲಲಿತಾಂಬಿಕೆಯ ನಾಮತ್ರಿಶತೀ ಭಾಷ್ಯದ ಆದಿಯಲ್ಲಿ ಉಪಕ್ರಮಿಸಿದ ಗ್ರಂಥರಚನೆಯು ನಿರ್ವಿಘ್ನವಾಗಿ ಕೊನೆಗಾಣುವುದಕ್ಕೋಸ್ಕ್ರ ಶಿಷ್ಟಸಂಪ್ರದಾಯವನ್ನು ಅನುಸರಿಸಿ ಮಂಗಲ ಪದ್ಯವನ್ನು ಪಠಿಸುತ್ತಾರೆ. ಭಕ್ತರಿಗೆ ಸಕಲ ಇಷ್ಟಸಿದ್ಧಿಯನ್ನು ಉಂಟುಮಾಡುವವನೂ, ವಾಮಭಾಗದ ಅಂಕದಲ್ಲಿ ಕುಳಿತಿರುವ ಸುಂದರಿಯಾದ ಸತಿಯ ಹಸ್ತವೆಂಬ ಕಮಲದಿಂದ ಸತ್ಕರಿಸಲ್ಪಟ್ಟವನೂ ಮತ್ತು ಸರ್ವ ಕಾರ್ಯಗಳಲ್ಲಿ ಉಂಟಾಗುವ ವಿಘ್ನಗಳನ್ನು ದೂರಮಾಡುವ ವಿಶಿಷ್ಟ ಫಲದಾನಶಕ್ತಿಯುಳ್ಳವನೂ ಆದ ಗಣೇಶದೇವನನ್ನು ನಮಸ್ಕರಿಸುತ್ತೇನೆ. ಪಾಶಾಂಕುಶೇಕ್ಷುಸುಮರಾಜಿತಪಂಚಶಾಖಾಂ ಪಾಟಲ್ಯಶಾಲಿಸುಷಮಾಂಚಿತಗಾತ್ರವಲ್ಲೀಮ್ | ಪ್ರಾಚೀನವಾಕ್ಸ್ತುತಪದಾಂ ಪರದೇವತಾಂ ತ್ವಾಂ ಪಂಚಾಯುಧಾರ್ಚಿತಪದಾಂ ಪ್ರಣಮಾಮಿ ದೇವೀಮ್ ||2|| ವಿಘ್ನೇಶ್ವರನನ್ನು ನಮಸ್ಕರಿಸಿದ ತರುವಾಯ ತಮ್ಮ ಉಪಾಸ್ಯಳಾದ ದೇವಿಯ ವಂದನಪರವಾಗಿ ದ್ವಿತೀಯ ಮಂಗಳಪದ್ಯವನ್ನು ಪಠಿಸಿರುವರು. ಪಾಶ, ಅಂಕುಶ, ಇಕ್ಷುದಂಡ, ಕಮಲಪುಷ್ಪಗಳಿಂದ ಅಲಂಕರಿಸಲ್ಪಟ್ಟ ಹಸ್ತಗಳುಳ್ಳ, ರಕ್ತವರ್ಣಮಯವಾದ ಕಾಂತಿಯಿಂದ ಶ್ಲಾಘ್ಯವಾಗಿರುವ ಲತೆಯಂತೆ ಕೋಮಲ ಮತ್ತು ಕೃಶವಾದ ದೇಹವುಳ್ಳ, ಅನಾದಿಯಾಗಿರುವ ವೇದವಾಕ್ಯಗಳಿಂದ ಸ್ತುತಿಸಲ್ಪಟ್ಟ ಚರಣಗಳುಳ್ಳ, ಕಾಮದೇವನಿಂದ ಪೂಜಿಸಲ್ಟ್ಟ ಪಾದಗ

ಉಡುಪೀಗೆ ಆ ಹೆಸರು ಬರಲು ಕಾರಣ ಚಂದ್ರೇಶ್ವರ

ತಪಸಾಸ್ತುತಿಭಿಶ್ಚಾಸ್ಯ ಪ್ರಸನ್ನಶ್ಚಂದ್ರಶೇಖರ | ಚಂದ್ರಾಯಾದಾತ್ ಕಲಾಪೂರ್ತಿಂ ಸ ಲಬ್ಧಾಥೋ ದಿವಂ ಯಯೌ || ತದಾಪ್ರಭೃತಿ ವಿಪ್ರೇಂದ್ರ ಚಂದ್ರಕ್ಷೇತ್ರಮಿದಂ ಜಗುಃ | ದಕ್ಷಪ್ರಜಾಪತಿಯ ಶಾಪದಿಂದ ಕಲಾರಹಿತನೂ, ಅಪರಿಶುದ್ಧನೂ ಆದ ಚಂದ್ರನು ಈ ಕ್ಷೇತ್ರದಲ್ಲಿ ಕಡೆಕೊಪ್ಪಲವೆಂದು ಪ್ರಸಿದ್ಧವಾದ ತೆಂಕಬೀದಿಯ ಕೊನೆಯಲ್ಲಿರುವ ಅರಣ್ಯದಲ್ಲಿ ತಪೋನಿರತನಾಗಿರು, ಶ್ರೀಮದನಂತೇಶ್ವರ ಪ್ರಾದುರ್ಭಾವದ ಮೊದಲೇ ಚಂದ್ರಮೌಳೀಶ್ವರ ನಾಮಕನಾದ ಶ್ರೀರುದ್ರದೇವನು ಚಂದ್ರನ ತಪಸ್ಸಿಗೆ ಮೆಚ್ಚಿ, ಒಂದು ಸರೋವರದಲ್ಲಿ ಲಿಂಗಾಕಾರದಿಂದ ಪ್ರತ್ಯಕ್ಷನಾಗಿ ಚಂದ್ರನಿಗೆ ಮೆಚ್ಚಿ, ಒಂದು ಸರೋವರದಲ್ಲಿ ಲಿಂಗಾಕಾರದಿಂದ ಪ್ರತ್ಯಕ್ಷನಾಗಿ ಚಂದ್ರನಿಗೆ ಕಾಂತಿಯನ್ನೂ ಶುದ್ಧಿಯನ್ನೂ ಕೊಟ್ಟು, ಶ್ರೀಮದನಂತೇಶ್ವರನ ಪ್ರಾದುರ್ಭಾವವನ್ನಿದಿರು ನೋಡುತ್ತಾ ಈ ಕ್ಷೇತ್ರಾಲಂಕಾರಭೂತನಾದನು. ಅಂದಿನಿಂದ ಚಂದ್ರನ ತಪಸ್ಥಾನವಾದ ಈ ಭಾರ್ಗವ ಕ್ಷೇತ್ರವು "ಉಡೂನ್ ಪಾತೀತಿ ಉಡುಪಃ, ಉಡುಪೋsಸ್ಮಿನ್ನಸ್ತೀತಿ ಉಡುಪೀ" ಉಡುಪನೆಂದರೆ ನಕ್ಷತ್ರಸ್ವಾಮಿಯಾದ ಚಂದ್ರನು ಅವನ ಕ್ಷೇತ್ರವು ಉಡುಪಿಯೆಂದು ಪ್ರಸಿದ್ಧವಾಯಿತು. ಇದಕ್ಕೆ ದೃಷ್ಟಾಂತವಾಗಿ ಆ ಚಂದ್ರೇಶ್ವರ ದೇವಾಲಯವು ಹಳ್ಳದಲ್ಲಿದ್ದು ಪೂರ್ವದ ಕೆರೆಯ ಆಕಾರವನ್ನು ಸೂಚಿಸುತ್ತದೆ.