Posts

Showing posts from March, 2016

ರಾಮರಕ್ಷಾ ಸ್ತೋತ್ರದ ಕಾವ್ಯಸೌಂದರ್ಯ

ಸಾಂಪ್ರದಾಯಕ ರಕ್ಷಾಸ್ತೋತ್ರಗಳಲ್ಲಿ ‘ರಾಮರಕ್ಷಾ ಸ್ತೋತ್ರ’ವು ಅನೇಕ ಭಕ್ತರು ಪಠಿಸುತ್ತಿರುವ ಮಹತ್ವದ ಸ್ತೋತ್ರವಾಗಿದೆ. ಬುಧಕೌಶಿಕ ಋಷಿಗಳು ಈ ಸ್ತೋತ್ರದ ದೃಷ್ಟಾರರು. (ತನ್ನ ಕನಸಿನಲ್ಲಿ ಭಗವಾನ್ ಶಂಕರನು ತನಗೆ ಈ ಸ್ತೋತ್ರವನ್ನು ನೀಡಿದನು ಎಂದು ಬುಧಕೌಶಿಕ ಋಷಿಗಳು ಹೇಳಿದ್ದಾರೆ.) ಅವರ ಈ ರಚನೆಯಲ್ಲಿಯ ಮುಖ್ಯ ಭಾಗವನ್ನು, ಸಾಹಿತ್ಯದ ದೃಷ್ಟಿಯಿಂದ ಗಮನಿಸೋಣ. ಆ ಭಾಗ ಹೀಗಿದೆ: ಶಿರೋಮೇ ರಾಘವಃ ಪಾತು ಭಾಲಂ ದಶರಥಾತ್ಮಜಃ ಕೌಸಲ್ಯೇಯೋ ದೃಶೌ ಪಾತು ವಿಶ್ವಾಮಿತ್ರಪ್ರಿಯ: ಶ್ರುತಿ: ಘ್ರಾಣಂ ಪಾತು ಮಖತ್ರಾತಾ ಮುಖಂ ಸೌಮಿತ್ರಿವತ್ಸಲಃ ಜಿಹ್ವಾ ವಿದ್ಯಾನಿಧಿಃ ಪಾತು ಕಂಠಂ ಭರತವಂದಿತಃ ಸ್ಕಂಧೌ ದಿವ್ಯಾಯುಧಃ ಪಾತು ಭುಜೌ ಭಗ್ನೇಶಕಾರ್ಮುಕ: ಕರೌ ಸೀತಾಪತಿಃ ಪಾತು ಹೃದಯಂ ಜಾಮದಗ್ನ್ಯಜಿತ್ ಮಧ್ಯಂ ಪಾತು ಖರಧ್ವಂಸೀ ನಾಭಿಂ ಜಾಂಬವದಾಶ್ರಯಃ ಸುಗ್ರೀವೇಶಃ ಕಟೀ ಪಾತು ಸಕ್ಥಿನೀ ಹನುಮತ್ಪ್ರಭುಃ ಉರೂ ರಘೂತ್ತಮಃ ಪಾತು ರಕ್ಷಃಕುಲವಿನಾಶಕೃತ್ ಜಾನುನೀ ಸೇತುಕೃತ್ಪಾತು ಜಂಘೇ ದಶಮುಖಾಂತಕ: ಪಾದೌ ವಿಭೀಷಣಶ್ರೀದಃ ಪಾತು ರಾಮೋsಖಿಲಂ ವಪು:            ಈ ಸ್ತೋತ್ರದಲ್ಲಿ ತನ್ನ ಶರೀರದ ವಿವಿಧ ಬಾಗಗಳನ್ನು ಶ್ರೀ ರಾಮಚಂದ್ರನು ರಕ್ಷಿಸಲಿ ಎಂದು ಪ್ರಾರ್ಥಿಸಲಾಗಿದೆ. ಮೊದಲಿಗೆ ಪ್ರಾರಂಭವಾಗುವದು ಶಿರಸ್ಸು, ತನ್ನಂತರ ಹಣೆ, ಕಣ್ಣುಗಳು, ಕಿವಿಗಳು. ಇದೇ ರೀತಿಯಾಗಿ ಪಾದಗಳವರೆಗೆ ಈ ಪ್ರಾರ್ಥನೆ ಸಾಗಿದೆ. ಅನೇಕ ಸಂಸ್ಕೃತ ಶ್ಲೋಕಗಳಲ್ಲಿ ಈ

ಗೋದಾಸ್ತುತಿಃ (ಸಂಗ್ರಹ) - 18

ಚೂಡಾಪದೇನ ಪರಿಗೃಹ್ಯ ತವೋತ್ತರೀಯಂ ಮಾಲಾಮಪಿ ತ್ವದಳಕೈರಧಿವಾಸ್ಯ ದತ್ತಾಮ್ | ಪ್ರಾಯೇಣ ರಂಗಪತಿರೇಷ ಬಿಭರ್ತಿ ಗೋದೇ ಸೌಭಾಗ್ಯ ಸಂಪದಭಿಷೇಕ ಮಹಾಧಿಕಾರಮ್ ||18|| ಗೋದೇ = ಎಲೈ! ಗೋದಾದೇವಿಯೇ, ಏಷಃ ರಂಗಪತಿಃ = ಈ ರಂಗನಾಥನಾದರೋ, ತವ = ನಿನ್ನ, ಉತ್ತರೀಯಂ = ಮೇಲ್ವಸ್ತ್ರವನ್ನೂ, ತ್ವದಳಕೈಃ =ನಿನ್ನ ಮುಂಗುರುಳುಗಳೊಡನೆ, ಅಧಿವಾಸ್ಯ = ಕೆಲಕಾಲವಿದ್ದು, ದತ್ತಾಂ = ಕೊಡಲ್ಪಟ್ಟ, ಮಾಲಾಮಪಿ = ಮಾಲಿಕೆಯನ್ನೂ, ಚೂಡಾಪದೇನ = ತನ್ನ ತಲೆಯಿಂದ, ಪರಿಗೃಹ್ಯ = ಸ್ವೀಕರಿಸಿ, ಪ್ರಾಯೇಣ = ಬಹುಶಃ, ಸೌಭಾಗ್ಯ ಸಂಪದಭಿಷೇಕ = ತನ್ನ ಸೌಭಾಗ್ಯವೆಂಬ ಐಶ್ವರ್ಯ ಸಾಮ್ರಾಜ್ಯದಲ್ಲಿ ಅಭಿಷಿಕ್ತನಾಗಿರುವ, ಮಹಾಧಿಕಾರಂ = ಅತಿದೊಡ್ಡದಾದ ಅಧಿಕಾರವನ್ನು, ಭಿಭರ್ತಿ = ಹೊಂದಿದವನಾದನು ||18||     ಎಲೈ! ಗೋದಾದೇವಿಯೇ! ಈ ರಂಗನಾಥನಾದರೋ, ನಿನ್ನ ವಿವಾಹ ಕಾಲದಲ್ಲಿ ಮಾಲಿಕಾರೋಪಣ ಸಮಯದಲ್ಲಿ ನಿನ್ನ ಕೈಯಿಂದ ಮಾಲಿಕೆ ಹಾಕುವಾಗ, (ಬೀಸುತ್ತಿದ್ದ ಗಾಳಿಯಿಂದ ಆಕಸ್ಮಾತ್ತಾಗಿ) ಅವನ ತಲೆಯಮೇಲೆ ಬಿದ್ದ ನಿನ್ನ ಮೇಲ್ವಸ್ತ್ರ ಅಥವಾ ಸೀರೆಯ ಸೆರಗನ್ನೂ ಮತ್ತು ನಿನ್ನ ಮುಂಗುರುಳುಗಳೊಡನೆ ಕೆಲಕಾಲ ಸಂಪರ್ಕವನ್ನು ಪಡೆದ, ನಿನ್ನಿಂದ ಕೊಡಲ್ಪಟ್ಟ ಮಾಲಿಕಗಳನ್ನೂ ತನ್ನ ತಲೆಯಿಂದ ಸ್ವೀಕರಿಸಿ (ಅಂದರೆ, ನಿನ್ನ ಉತ್ತರೀಯವನ್ನು ಅಧಿಕಾರದ ಗೌರವಾರ್ಥವಾಗಿ ಶಿರಸ್ಸಿನಲ್ಲಿ ಕಟ್ಟಿದ ಪರಿವಟ್ಟವಾಗಿಯೂ, ಪುಷ್ಪಮಾಲಿಕೆಯನ್ನು ಗೌರವಾರ್ಥವಾಗಿ ಹಾಕಿದ ಮಾಲಿಕೆಯಂತೆಯೂ ಧರಿಸಿ) ಬಹುಶಃ ನಿನ್ನೊಡನೆ ಕೂಡಿ ನಿ

ಸ್ಕಂದಪುರಾಣ ಅಧ್ಯಾಯ 18

ಸನತ್ಕುಮಾರ ಉವಾಚ | ತತಃ ಸ ರಾಜಾ ಸ್ವಂ ರಾಜ್ಯಮುತ್ಸೃಜ್ಯ ಸಹ ಭಾರ್ಯಯಾ | ವನಂ ವಿವೇಶ ತತ್ರಾಭೂತ್ಪುರುಷಾದೋ ಮಹಾಬಲಃ || ಸೋಭಕ್ಷಯತ ತತ್ರಾಗ್ರೇ ಶಕ್ತಿಮೇವ ಮಹಾಮುನಿಮ್ | ತತೋ ಭ್ರಾತೃಶತಂ ತಸ್ಯ ವಸಿಷ್ಠಸ್ಯೈವ ಪಶ್ಯತಃ || ತತಃ ಪುತ್ರವಧಂ ಘೋರಂ ದೃಷ್ಟ್ವಾ ಬ್ರಹ್ಮಸುತಃ ಪ್ರಭುಃ | ಸೋತ್ಸಸರ್ಜ ತದಾ ಕ್ರೋಧಂ ವಸಿಷ್ಠಃ ಕೌಶಿಕಂ ಪ್ರತಿ | ಪುತ್ರಶೋಕೇನ ಮಹತಾ ಭೃಶಮೇವಾನ್ವಕೀರ್ಯತ || ಸ ಬದ್ಧ್ವಾ ಮಹತೀಂ ಕಂಠೇ ಶಿಲಾಂ ಬ್ರಹ್ಮಸುತಃ ಪ್ರಭುಃ | ನದ್ಯಾಮಾತ್ಮಾನಮುತ್ಸೃಜ್ಯ ಶತಧಾ ಸಾದ್ರವದ್ಭಯಾತ್ | ಶತದ್ರೂರಿತಿ ತಾಂ ಪ್ರಾಹುರ್ಮುನಯಃ ಸಂಶಿತವ್ರತಾಃ || ಪುನಃ ಪಾಶೈರ್ದೃಢೈರ್ಬದ್ಧ್ವಾ ಅನ್ಯಸ್ಯಾಮಸೃಜದ್ವಶೀ | ತಸ್ಯಾಂ ವಿಪಾಶಃ ಸಂವೃತ್ತೋ ವಿಪಾಶಾ ಸಾಭವತ್ತತಃ || ತತೋಟವೀಂ ಸಮಾಸಾದ್ಯ ನಿರಾಹಾರೋ ಜಿತೇಂದ್ರಿಯಃ | ವಾಯುಭಕ್ಷಸ್ತದಾ ತಸ್ಥೌ ಸ್ವಂ ದೇಹಂ ಪರಿತಾಪಯನ್ || ಅಥ ಶುತ್ರಾವ ವೇದಾನಾಂ ಧ್ವನಿಮೇಕಸ್ಯ ಸುಸ್ವರಮ್ | ಅಧೀಯಾನಸ್ಯ ತತ್ರಾಶು ಧ್ಯಾನಮೇವಾನ್ವಪದ್ಯತ || ಅಥೈನಂ ಚಾರುಸರ್ವಾಶ್ಣ್ಗೀ ಪೀನೋನ್ನತಪಯೋಧರಾ | ಉಪತಸ್ಥೇಗ್ರತಃ ಪತ್ನೀ ಶಕ್ತೇರ್ದೀನಾನನೇಕ್ಷಣಾ || ತಾಮುವಾಚ ಕುತಸ್ತ್ವಂ ವೈ ಕಸ್ಯೈಷ ಶ್ರೂಯತೇ ಧ್ವನೀ | ಸೋವಾಚ ದೀನಯಾ ವಾಜಾ ರುದತೀ ಶ್ವಶುರಂ ತದಾ || ಅದೃಶ್ಯಂತ್ಯುವಾಚ | ಯದೈವ ಸುತದುಃಖೇನ ನಿರ್ಗತೋಸ್ಯಾಶ್ರಮಾದ್ಗುರೋ | ತದಾಪ್ರಭೃತ್ಯೇವಾದೃಶ್ಯಾ ಭಗವಂತಮನುವ್ರತಾ || ಅಧೀಯಾನಸ್ಯ ಜೈವಾಯಂ ಧ್ವನಿಃ ಪುತ್ರಸ್ಯ ತೇ ವಿಭೋ | ಉದರಸ್

ಗೋದಾಸ್ತುತಿಃ (ಸಂಗ್ರಹ) - 17

ವಿಶ್ವಾಯಮಾನರಜಸಾ ಕಮಲೇನ ನಾಭೌ ವಕ್ಷಃಸ್ಥಲೇ ಚ ಕಮಲಾಸ್ತನ ಚಂದನೇನ | ಆಮೋದಿತೋಪಿ ನಿಗಮೈರ್ವಿಭುರಂಘ್ರಿಯುಗ್ಮೇ ಧತ್ತೇ ನತೇನ ಶಿರಸಾ ತವ ಮಾಳಿಮಾಲಾಮ್ ||17|| ವಿಭುಃ = ವಿಭುತ್ವವುಳ್ಳ ಶ್ರೀರಂಗನಾಥನು, ವಿಶ್ವಾಯಮಾನರಜಸಾ = ಇಡೀ ಪ್ರಪಂಚವನ್ನೇ ತನ್ನ ಪರಾಗಗಳಾಗಿವುಳ್ಳ, ಕಮಲೇನ = ಕಮಲದ ಹೂವಿನಿಂದ, ನಾಭೌ = ಹೊಕ್ಕಳು ಪ್ರದೇಶದಲ್ಲಿಯೂ, ವಕ್ಷಃಸ್ಥಲೇ = ಎದೆಯಲ್ಲಿ, ಕಮಲಾಸ್ತನಚಂದನೇನ = ಮಹಾಲಕ್ಷ್ಮಿಯ ಸ್ತನಕಲಷಗಳ ಮೇಲಿನ ಶ್ರೀಗಂಧದಿಂದ, ಅಂಘ್ರಿಯುಗ್ಮೆ = ಪಾದಗಳೆರಡರಲ್ಲಿಯೂ, ನಿಗಮೈಃ = ವೇದಗಳಿಂದಲೂ, ಆಮೋದಿತೋಪಿ = ಪರಿಮಳಗೊಂಡಿದ್ದರೂ, ತವ = ನಿನ್ನ, ಮೌಳಿಮಾಲಾಂ = ತಲೆಯಲ್ಲಿ ಮುಡಿದ ಮಾಲೆಯನ್ನು, ನತೇನ = ಬಗ್ಗಿದ, ಶಿರಸಾ = ತಲೆಯಿಂದ, ಧತ್ತೆ = ಧರಿಸುತ್ತಾನೆ. ||17||     ಎಲೈ! ಗೋದಾದೇವಿಯೇ!, ವಿಭುವಾದ ಶ್ರೀರಂಗನಾಥನು, ಇಡೀ ವಿಶ್ವವನ್ನೇ ತನ್ನ ಪರಾಗಗಳಾಗಿವುಳ್ಳ ಕಮಲದಿಂದ ತನ್ನ ನಾಭಿದೇಶದಲ್ಲಿಯೂ, ವಕ್ಷಸ್ಥಲದಲ್ಲಿ ಮಹಾಲಕ್ಷ್ಮಿಯನ್ನು ಆಲಿಂಗನ ಮಾಡಿಕೊಂಡಾಗ, ಅವಳ ಸ್ತನಕಲಷಗಳ ಮೇಲೆ ಲೇಪನ ಮಾಡಿಕೊಂಡಿದ್ದ ಶ್ರೀಗಂಧವು ಅಂಟಿಕೊಂಡಿರುವುದರಿಂದಲೂ, ಎರಡು ಅಡಿದಾವರೆಗಳಲ್ಲಿಯೂ ನಿರಂತರವಾಗಿ ವೇದಮಾತೆಯು ಬಂದು ಸೇವೆ ಮಾಡುವುದರಿಂದಲೂ ಪರಿಮಳಗೊಂಡಿದ್ದರೂ, ನಿನ್ನ ವಿವಾಹ ಸಂಬಂಧವಾದ ಮಾಲಿಕಾರೋಪಣ ಮಹೋತ್ಸವದ ಸಮಯದಲ್ಲಿ ನಿನ್ನ ತಲೆಯಲ್ಲಿ ಮುಡಿದ ಮಾಲೆಯನ್ನು ಅವನ ಕತ್ತಿನಲ್ಲಿ ಹಾಕುವ ಸಮಯದಲ್ಲಿ, ಅದನ್ನು ಅತ್ಯಾದರದಿಂದ ತಲೆಭಾಗಿ ಧರಿಸಿದ

ಪರಿಷೇಚನ - ಉತ್ತರಾಪೋಶನ

    ಪರಿಷೇಚನ- ಎಂದರೆ ನೀರಿನಿಂದ ಸುತ್ತುಗಟ್ಟುವದು-ಎಂದರ್ಥ. ನಾವು ತೆಗೆದುಕೊಳ್ಳುವ ಆಹಾರವನ್ನೆಲ್ಲ ಒಳಗಿರುವ ಜಠರಾಗ್ನಿಗೆ ಆಹುತಿಯೆಂತ ಭಾವಿಸಬೇಕು. ಈ ಅಭಿಪ್ರಾಯದಲ್ಲಿ ಊಟವೂ ಒಂದು ಯಜ್ಞವಾಗಿದೆ. ವೈದಿಕಕರ್ಮಗಳಲ್ಲಿ ಅಗ್ನಿಗೆ ಅಹುತಿಯನ್ನರ್ಪಿಸುವ ಮುಂಚೆ ಹೇಗೆ ಪರಿಷೇಚನ ಮಾಡುವರೋ ಹಾಗೆಯೇ ಇಲ್ಲಿಯೂ ಜಠರಾಗ್ನಿಯಲ್ಲಿ ಹೋಮಮಾಡುವ ಮುಂಚೆ ಕರ್ಮಾಂಗವಾದ ಪರಿಷೇಚನವನ್ನು ಮಾಡಬೇಕಾಗಿದೆ. ಈ ಪರಿಷೇಚನಕ್ಕೆ ಹಗಲು ಹಾಗೂ ರಾತ್ರಿಗಳಲ್ಲಿ ಬೇರೆಬೇರೆಯಾಗಿ ಉಪಯೋಗಿಸುವ ಮಂತ್ರಗಳ ಅರ್ಥವು ಹೀಗೆದೆ : "ಅಗ್ನಿಯನ್ನು ಋತ ಎಂದರೆ ಮಾನಸಿಕವಾದ ನಿಜವೆನ್ನುವರು. ಆದಿತ್ಯನು ಸತ್ಯ (ಬಾಯಲ್ಲಿ ಆಡುವ ನಿಜ)ನೆನಿಸುವನು. ನಿಜವನ್ನು ವಾಚಿಕವಾಗಿಯೂ ಮಾನಸಿಕವಾಗಿಯೂ ಒಂದರೊಡನೊಂದನ್ನು ಜೋಡಿಸಬೇಕು ಅದರ ಸಂಕೇತವಾಗಿ ಪರಿಷೇಚನೆಯನ್ನು ವಿಧಿಸಲಾಗಿದೆ. ಅಗ್ನಿ-ಆದಿತ್ಯರೆಂಬವರೇ ಈ ಪ್ರಪಂಚದ ಸಾರಭೂತರಾದ ದೇವತೆಗಳು. ಅನ್ನವು ಬೆಳೆಯುವದಕ್ಕೂ ಹೊಟ್ಟೆಯಲ್ಲಿ ಕರಗುವದಕ್ಕೂ ಇವರಿಬ್ಬರೂ ಕಾರಣರು. ಆದ್ದರಿಂದ ಇವರಿಬ್ಬರನ್ನೂ ಸೇಚನಮಾಡಿದರೆ ಎಂದರೆ ಹಗಲೂ ರಾತ್ರೆಯೂ ಜಲದಿಂದ ಸುತ್ತುಗಟ್ಟಿದರೆ ಅಷ್ಟುಕಾಲವೂ ಸಾಧಕನು(ರೈತನು) ದುಃಖವಿಲ್ಲದೆ, ಕಷ್ಟವಿಲ್ಲದೆ, ವಿಷಾದವಿಲ್ಲದೆ, ದೈನ್ಯವಿಲ್ಲದೆ ಬದುಕುವನು. ಹಾಗೂ ಕಡಿವಡೆಯದ ವಿಭವ (ಐಶ್ವರ್ಯ)ವುಳ್ಳವನಾಗಿ ಚಿರಕಾಲ ಬಾಳುವನು; ಈ ಜಠರಾಗ್ನಿ ಹೋತ್ರವನ್ನು ಈ ರೀತಿ ಅರಿತು ಮಾಡುವವನಿಗೆ ಇಂಥ ಫಲಗಳಾಗುವವು" ಎಂದು ತೈತ್ತಿರೀಯ

ದೇವಿಮಹಾತ್ಮ್ಯ - ಮೂರನೆಯ ಅಧ್ಯಾಯ

ಧ್ಯಾನಮ್ - ಉದ್ಯದ್ಬಾನುಸಹಸ್ರಕಾಂತಿಮರುಣಕ್ಷೌಮಾಂ ಶಿರೋಮಾಲಿಕಾಂ ರಕ್ತಾಲಿಪ್ತ ಪಯೋಧರಾಂ ಜಪವಟೀಂ ವಿದ್ಯಾಮಭೀತಿಂ ವರಮ್ | ಹಸ್ತಾಬ್ಜೈರ್ದಧತೀಂ ತ್ರಿನೇತ್ರ ವಿಲಸದ್ವಕ್ತ್ರಾರವಿಂದಶ್ರಿಯಂ ದೇವೀಂ ಬದ್ಧಹಿಮಾಂಶುರತ್ನಮಕುಟಾಂ ವಂದೇರವಿಂದಸ್ಥಿತಾಮ್ || 1. ಉದಯಿಸುತ್ತಿರುವ ಸಾವರಿ ಸೂರ್ಯರ ಕಾಂತಿಗೆ ಸಮಾನವಾದ ಕೆಂಪುರೇಷ್ಮೆಯ ವಸ್ತ್ರವನ್ನುಟ್ಟಿರುವ, (ರಾಕ್ಷಸರ) ಶಿರಸ್ಸುಗಳನ್ನೇ ಮಾಲೆಯಾಗಿ ಧರಿಸಿದ್ದರಿಂದ ಕೆಂಪಾದ ಸ್ತನಗಳುಳ್ಳವಳಾದ, ಜಪಮಾಲೆ, ವಿದ್ಯಾಮುದ್ರೆ, ಅಭಯಮುದ್ರೆ, ವರದಾನಮುದ್ರೆಗಳನ್ನು ಕಮಲದಂತಿರುವ ಕೈಗಳಿಂದ ಧರಿಸಿರುವ, ಮೂರುಕಣ್ಣುಗಳಿಂದ ಅಲಂಕೃತವಾದ ಮುಖಾರವಿಂದದ ಕಾಂತಿಯುಳ್ಳ, ಚಂದ್ರನೊಡಗೂಡಿದ ರತ್ನಕಿರೀಟಧಾರಣೆಯಾದ ಕಮಲದಲ್ಲಿ ಕುಳಿತಿರುವಳಾದ ದೇವಿಯನ್ನು ನಮಸ್ಕರಿಸುತ್ತೇನೆ. ಓಂ ಋಷಿರುವಾಚ - ನಿಹನ್ಯಮಾನಂ ತತ್ಸೈನ್ಯಮವಲೋಕ್ಯ ಮಹಾಸುರಃ | ಸೇನಾನೀಶ್ಚಿಕ್ಷುರಃ ಕೋಪಾದ್ ಯಯೌ ಯೋದ್ಧುಮಥಾಂಬಿಕಾಮ್ ||1|| ಸ ದೇವೀಂ ಶರವರ್ಣೇಣ ವವರ್ಷ ಸಮರೇಸುರಃ ಯಥಾ ಮೇರುಗಿರೇಃ ಶೃಂಗಂ ತೋಯವರ್ಷೇಣ ತೋಯದಃ ||2||     ಋಷಿಯಿಂತೆಂದನು : ಮಹಾಸುರನೂ ಸೇನಾಪತಿಯೂ ಆದ ಚಿಕ್ಷುರನು ಕೊಲ್ಲಲ್ಪಡುತ್ತಿರುವ ಆ ಸೈನ್ಯವನ್ನು ನೋಡಿ ಕೋಪದಿಂದ ದೇವಿಯೊಡನೆ ಯುದ್ಧಮಾಡಲು ಹೊರಟನು ಆ ಯುದ್ಧದಲ್ಲಿ ಬಾಣಗಳ ಮಳೆಯಿಂದ ಅವನು ಹೇಗೆ ದೊಡ್ಡ ಮೇಘವು ಧಾರಾಕಾರವಾದ ಮಳೆಯಿಂದ ಮೇರುಗಿರಿಯನ್ನು ತೋಯಿಸುವುದೋ ಹಾಗೆ-ಮಳೆಗರೆದನು. ತಸ್ಯ ಚ್ಛಿತ್ವಾ ತತೋ ದೇವೀ ಲೀಲಯೈವ ಶರ

ಸ್ಕಂದಪುರಾಣ ಅಧ್ಯಾಯ 17

ವ್ಯಾಸ ಉವಾಚ | ಕಸ್ಮಾತ್ಸ ರಾಜಾ ತಮೃಷಿಂ ಚಖಾದ ತಪಸಾನ್ವಿತಮ್ | ರಕ್ಷಸಾ ಸ ಕಿಮರ್ಥಂ ಚ ಹೃತಚೇತಾಭವನ್ನೃಪಃ || ಸನತ್ಕುಮಾರ ಉವಾಚ | ವಸಿಷ್ಠಯಾಜ್ಯೋ ರಾಜಾಸೀನ್ನಾಮ್ನಾ ಮಿತ್ರಸಹಃ ಪ್ರಭುಃ | ಸುದಾಸಪುತ್ರೋ ಬಲವಾನಿಂದ್ರಚಂದ್ರಸಮದ್ಯುತಿಃ || ತಮಾಗಮ್ಯೋಚಿವಾಂಛಕ್ತಿಶ್ಚರಿಷ್ಯೇ ದೀಕ್ಷಿತೋ ವ್ರತಮ್ | ತತ್ರ ಮೇ ನಿಶಿ ರಾಜೇಂದ್ರ ಸದೈವ ಪಿಶಿತಾಶನಮ್ || ಇಹಾಗತಸ್ಯ ಯಚ್ಛಸ್ವ ಶುಚಿ ಸರ್ವಗುಣಾನ್ವಿತಮ್ | ಅಪ್ರತಿಕಾರಸಂಯುಕ್ತಮೇಕದೈಕಾಂತ ಏವ ಚ || ಏವಮಸ್ತ್ವಿತಿ ತೇನೋಕ್ತೋ ಜಗಾಮ ಸ ಮಹಾಮನಾಃ | ಅಥಾಸ್ಯಾಂತರ್ಹಿತಂ ರಕ್ಷೋ ನೃಪತೇರಭವತ್ತದಾ | ನಾಜ್ಞಾಪಯತ್ತದಾ ಸೂದಂ ತಸ್ಯಾರ್ಥೇ ಮುನಿಸತ್ತಮ || ಗತೇಥ ದಿವಸೇ ತಾತ ಸಂಸ್ಮೃತ್ಯ ಪ್ರಯತಾತ್ಮವಾನ್ | ಸೂದಮಾಹೂಯ ಚೋವಾಚ ಆರ್ತವತ್ಸ ನರಾಧಿಪಃ || ಸೌದಾಸ ಉವಾಚ | ಮಯಾಮೃತವಸೋ ಪ್ರಾತರ್ಗುರುಪುತ್ರಸ್ಯ ಧೀಮತಃ | ಪಿಶಿತಂ ಸಂಪ್ರತಿಜ್ಞಾತಂ ಭೋಜನಂ ನಿಶಿ ಸಂಸ್ಕೃತಮ್ | ತತ್ಕುರುಷ್ವ ತಥಾ ಕ್ಷಿಪ್ರಂ ಕಾಲೋ ನೋ ನಾತ್ಯಗಾದ್ಯಥಾ || ಸ ಏವಮುಕ್ತಃ ಪ್ರೋವಾಚ ಸೂದೋಮೃತವಸುಸ್ತದಾ | ರಾಜಂಸ್ತ್ವಯಾ ನೋ ನಾಖ್ಯಾತಂ ಪ್ರಾಗೇವ ನರಪುಂಗವ | ಸಾಂಪ್ರತಂ ನಾಸ್ತಿ ಪಿಶಿತಂ ಸ್ತೋಕಮಪ್ಯಭಿಕಾಶ್ ಣ್ಕ್ಷಿತಮ್ || ಪಿಶಿತಸ್ಯೈವ ಚಾಲ್ಪತ್ವಾದ್ಬಹೂನಾಂ ಚೈವ ತದ್ಭುಜಾಮ್ | ಅಮಿತಸ್ಯ ಪ್ರದಾನಾಶ್ಚ ನ ಕಿಂಚಿದವಶಿಷ್ಯತೇ || ರಾಜೋವಾಚ | ಜಾನೇ ಸರ್ವೋಪಯೋಗಂ ಚ ಜಾನೇ ಚಾದುಷ್ಟತಾಂ ತವ | ಜಾನೇ ಸ್ತೋಕಂ ಚ ಪಿಶಿತಂ ಕಾರ್ಯಂ ಚೇದಂ ತಥಾವಿಧಮ್ |

ಏಕಾಕ್ಷರ ಶ್ಲೋಕ

ಇಂದು ಬೆಳಗ್ಗೆ ನನ್ನ ಮುಖಪುಟದಲ್ಲಿ ಹಾಕಿದ ಸ್ಟೇಟಸ್ (ಅಮಂತ್ರಂ ಅಕ್ಷರಂ - ಮಂತ್ರವಾಗದ ಅಕ್ಷರವಿಲ್ಲ)ನ್ನು ನೋಡಿ ಚಿಕ್ಕಮಂಗಳೂರಿನ ಹಿರಿಯರೊಬ್ಬರು ಫೋನ್ ಮಾಡಿ ಅವರ ತಾತ ಅವರಿಗೆ ಹೇಳಿದ ಒಂದು ಕತೆಯನ್ನು(ನಿಜವಾಗಿ ನೆಡೆದ) ಹೇಳಿದರು ಅದನ್ನು ಯತಾವತ್ತಾಗಿ ನೀಡಲು ಪ್ರಯತ್ನಿಸಿದ್ದೇನೆ.     ಪಂಡಿತ ತ್ರಿಣೇತ್ರಶಾಸ್ತ್ರಿಗಳವರು ಕಪಿಲಾನದಿಯಲ್ಲಿ ಸ್ನಾನವನ್ನು ಮಾಡಿ ಶ್ರೀಕಂಠೇಶ್ವರನ ದರ್ಶನವನ್ನು ಮಾಡಿಕೊಂಡದ್ದಾಯಿತು. ಊರಲ್ಲಿ ಯಾವಯಾವ ಘನಪಂಡಿತರು ಇದ್ದಾರೆಂದು ವಿಚಾರಿಸಿಕೊಂಡರು. ನಂಜನಗೂಡಿಗೆ ಬಂದಮೇಲೆ ಅದ್ವೈತಸಭೆಯವರೊಂದಿಗೆ ಮಾತನಾಡದೆ ಹೋದರೆ ತಮ್ಮ ಘನತೆಗೆ ಕುಂದು ಬಂದೀತು ಎಂದುಕೊಂಡು ಈ ದಿವಸಕ್ಕೆ ಇಲ್ಲಿಯೇ ಇರಬೇಕೆಂದು ನಿರ್ಣಯಿಸಿಕೊಂಡರು.     ಇಷ್ಟರಲ್ಲಿ ಊರಿನಲ್ಲಿ ಒಬ್ಬ ದೊಡ್ಡ ಸಂನ್ಯಾಸಿಗಳು ಬಂದಿದ್ದಾರೆಂದು ಅವರೂ ಸಂಸ್ಕೃತದಲ್ಲಿ ಒಳ್ಳೆಯ ವಿದ್ವಾಂಸರೆಂದೂ ಶಿಷ್ಯರುಗಳಿಗೆ ಭಾಷ್ಯಪಾಠವನ್ನು ಹೇಳುತ್ತಿರುವರೆಂದೂ ತಿಳಿಯಬಂತು. ಸರಿ ಹಾಗಾದರೆ, ಅಲ್ಲಿಗೆ ಈಗಲೇ ಹೋಗಬೇಕು ಎಂದು ತಮ್ಮ ಜರತಾರಿಶಾಲನ್ನು ತೆಗೆದು ಸರಿಯಾಗಿ ನೀವಿ ಹೊದ್ದು ಕೊಂಡು ಒಂದು ತೆಂಗಿನಕಾಯನ್ನು ತೆಗೆದುಕೊಂಡು ಹೊರಟರು.     ಶ್ರೀಮದದ್ವೈತಾನಂದಸರಸ್ವತಿಗಳವರು ಎರಡು ಮೂರು ಜನ ಸಂನ್ಯಾಸಿ ಶಿಷ್ಯರೊಡನೆ ಯಾವದೋ ವೇದಾಂತಕಾಲಕ್ಷೇಪವನ್ನು ಮಾಡುತ್ತಿದ್ದಾರೆ. ಒಬ್ಬ ಭವ್ಯಮೂರ್ತಿಯ ಪಂಡಿತರು ದಿಡೀರನೆ ಕದವನ್ನು ಹಾರಹೊಡೆದುಕೊಂಡು ಒಳಕ್ಕೆ ನುಗ್ಗಿ "ವೇದಾನ್ತವಿಜ

ಗೋದಾಸ್ತುತಿಃ (ಸಂಗ್ರಹ) - 16

ತ್ವನ್ಮೌಳಿದಾಮನಿ ವಿಭೋಃ ಶಿರಸಾ ಗೃಹೀತೇ ಸ್ವಚ್ಛಂದಕಲ್ಪಿತ ಸಪೀತಿರಸಪ್ರಮೋದಾಃ | ಮಂಜಸ್ವನಾ ಮಧುಲಿಹೋ ವಿದಧುಃ ಸ್ವಯಂತೇ ಸ್ವಾಯಂವರಂ ಕಮಪಿ ಮಂಗಳತೂರ್ಯ ಘೋಷಮ್ ||16|| (ಎಲೈ! ಗೋದಾದೇವಿಯೇ) ವಿಭೋಃ = ವಿಭುವಾದ ನಿನ್ನ ಪತಿಯ ಶಿರಸಾ = ತಲೆಯಿಂದ, ಗೃಹೀತೇ = ಧರಿಸಲ್ಪಟ್ಟಿರುವ, ತ್ವತ್ = ನಿನ್ನ, ಮೌಳಿದಮನಿ = ಮುಡಿಯಲ್ಲಿ ಧರಿಸಿದ್ದ ಮಾಲಿಕೆಗಳಲ್ಲಿ, ಸ್ವಚ್ಛಂದಕಲ್ಪಿತ = ತನ್ನ ಇಷ್ಟಬಂದಂತೆ ಕಲ್ಪಿಸಿಕೊಂಡು, ಸಪೀತಿರಸಪ್ರಮೋದಾಃ = ಮಧುಪಾನ ಮಾಡಿರುವುದರಿಂದ ಸಂತುಷ್ಟಗೊಂಡಿರುವ, ಮಧುಲಿಹಃ = ದುಂಬಿಗಳಾದರೋ, ಮಂಜುಸ್ವನಾಃ = ಇಂಪಾಗಿ ಧ್ವನಿಗೈಯುತ್ತಾ, ತೇ = ನಿನ್ನ, ಸ್ವಾಯಂವರಂ = ಸ್ವಯಂವರ ಮಹೋತ್ಸವದ ಸಮಯದಲ್ಲಿ, ಕಮಪಿ = ವರ್ಣಿಸಲಸದಳವಾದ ಆದ್ವಿತೀಯವಾದ, ಮಂಗಳತೂರ್ಯ ಘೋಷಮ್ = ಮಂಗಳವಾದ್ಯ ಘೋಷವನ್ನು, ಸ್ವಯಂ = ತಾವಾಗಿಯೇ, ವಿದಧುಃ = ಮಾಡಿದುವು. ಎಲೈ! ಗೋದಾದೇವಿಯೇ, ವಿಭುವಾದ ಪರಮಾತ್ಮನು, ನೀನು ಮುಡಿದುಕೊಟ್ಟ ಮಾಲಿಕೆಯಲ್ಲಿ ಅತಿಯಾದ ಆಸೆಯುಳ್ಳವನಾಗಿ, ನಿನ್ನ ತಂದೆಗೆ, ಅದನ್ನು ತಂದುಕೊಡಬೇಕೆಂದು ಅಜ್ಞಾಪಿಸಿದನು. ಅಂತೆಯೇ ನಿನ್ನ ತಂದೆಯು ಆ ಮಾಲಿಕೆಗಳನ್ನು ತರಲು, (ಭಾವಿ ಮಾವನಾಗುವ) ಅವರಲ್ಲಿ ವಿಶೇಷವಾದ ಗೌರವದಿಂದ ತಲೆಬಾಗಿ, ಅವರಿಂದ ಆ ಮಾಲಿಕೆಗಳನ್ನು ಪಡೆದು ತನ್ನ ಶಿರಸ್ಸಿನಲ್ಲಿ ಧರಸಿಕೊಂಡನು. ಬಳಿಕ ನಿನ್ನನ್ನು ವಿವಾಹವಾಗಲು ನಿನ್ನ ಬಳಿಗೆ ಗೋದೆಯನ್ನು ಕರೆತರಲು ಅರಸನ ಮುಖಾಂತರ ಆಳ್ವಾರರಿಗೂ ಅಜ್ಞಾಪ

ಹರಕೆ ಸಲ್ಲಿಸುವದು

    ನಾವು ನಮ್ಮ ಕಷ್ಟನಿವಾರಣೆಗಾಗಿ ಅಥವಾ ಇಷ್ಟಪ್ರಾಪ್ತಿಗಾಗಿ ಭಗವಂತನನ್ನು ಬೇಡಿಕೊಂಡು ಹರಕೆ ಸಲ್ಲಿಸುವದು ರೂಢಿಯಲ್ಲಿದೆ. ಉದಾಹರಣೆಗೆ 1) ಮಕ್ಕಳಿಲ್ಲದವರು ಸುಬ್ರಹ್ಮಣ್ಯಸ್ವಾಮಿಗೆ ಹರಕೆಮಾಡಿಕೊಂಡು ಆ ಕ್ಷೇತ್ರಕ್ಕೆ ಹೋಗಿ ನಾಗರಪ್ರತಿಷ್ಠೆ ಮಾಡಿ ಮಕ್ಕಳನ್ನು ಪಡೆಯುತ್ತಾರೆ. (2) ಹೆಣ್ಣು ಮಕ್ಕಳಿಗೆ ಮದುವೆಯಾಗಲೆಂದು ವೆಂಕಟರಮಣನಿಗೆ ಹರಕೆಹೊತ್ತು ಕಲ್ಯಾಣೋತ್ಸವಸೇವೆಮಾಡಿಸಿ ತಮ್ಮ ಕೋರಿಕೆಯನ್ನು ನೆರವೇರಿಸಿಕೊಳ್ಳುತ್ತಾರೆ. (3) ಕೆಲವು ಸಾಂಸಾರಿಕ ಕಷ್ಟ ನಿವಾರಣೆಗಾಗಿ ರಾಮಾಯಣ ಸುಂದರಕಾಂಡ ಪಾರಾಯಣಮಾಡಿ ಕೃತಾರ್ಥರಾದವರಿದ್ದಾರೆ.     ಇತ್ತೀಚೆಗೆ ವಿಚಾರವಾದಿಗಳೆನಿಸಿಕೊಂಡ ಕೆಲವರು ಹರಕೆಮಾಡಿಕೊಳ್ಳುವದು ದೇವರಿಗೆ ಲಂಚಕೊಟ್ಟು ಕೆಲಸವನ್ನು ಸಾಧಿಸಿಕೊಳ್ಳುವ ಕ್ರಮವೆಂದು ತೆಗಳುವದೂ ಉಂಟು. ಒಂದು ರೀತಿಯಲ್ಲಿ ಇದು ಸರಿ. ಏಕೆಂದರೆ ಫಲಾಪೇಕ್ಷೆಯಿಂದ ಭಗವಂತನನ್ನು ಬಳಿಸಾರುವವರನ್ನು 'ಕೃಪಾಣ'ರೆಂದು ಗೀತೆಯಲ್ಲಿಯೇ ಕರೆದಿದೆ ಆದ್ದರಿಂದ ವಿಚಾರವಾದಿಗಳು ತಾವೇ ಗಟ್ಟಿಗರೆಂದೇನೂ ಹೆಮ್ಮೆಪಡಬೇಕಾಗಿಲ್ಲ ಅವರ ವಾದವು ಈಗಾಗಲೆ ಶಾಸ್ತ್ರದಲ್ಲೇ ಪ್ರಸ್ತಾಪಿಸಲ್ಪಟ್ಟಿದೆ. ಹೀಗೆ ಹೇಳುವವರು ಶ್ರದ್ಧೆಯುಳ್ಳವರ ಮನಸ್ಸನ್ನು ಕೆಡಿಸಬಲ್ಲರೇ ಹೊರತು ಮತ್ತೇನೂ ಉಪಕಾರ ಮಾಡಲಾರರು.     ಆದರೆ ಶಾಸ್ತ್ರವು ಫಲಾಪೇಕ್ಷಿಗಳನ್ನು ಹೀಗೆಯೇ ಕೈಬಿಡುವದಿಲ್ಲ. ಫಲವನ್ನು ಬಯಸಿ ದೇವರನ್ನು ಬಳಿಸಾರುವದಕ್ಕಿಂತಲೂ ಎಲ್ಲಾ ಕರ್ಮಗಳಿಗೂ ಫಲಗಳಿಗೂ ಭಗವಂತನೇ ಒಡೆಯನೆಂದು

ರುದ್ರಭಾಷ್ಯಪ್ರಕಾಶ - 7ನೇ ಅನುವಾಕ (ಸಂಪೂರ್ಣ)

ನಮಃ ಸ್ರುತ್ಯಾಯ ಚ ಪಥ್ಯಾಯ ಚ     ರುದ್ರಾಧ್ಯಾಯದ ಏಳನೆಯ ಅನುವಾಕದ ಉತ್ತರಭಾಗವನ್ನು ಈಗ ವಿಚಾರಮಾಡೋಣ : ನಮಃ ಸ್ರುತ್ಯಾಯ ಚ ಪಥ್ಯಾಯ ಚ ನಮಃ ಕಾಟ್ಯಾಯ ಚ ನೀಪ್ಯಾಯ ಚ ನಮಃ ಸೂದ್ಯಾಯ ಚ ಸರಸ್ಯಾಯ ಚ ನೋ ನಾದ್ಯಾಯ ಚ ವೈಶಂತಾಯ ಚ ||     'ಸ್ರುತ್ಯನೂ ಪಥ್ಯನೂ ಕಾಟ್ಯನೂ ನೀಪ್ಯನೂ ಸೂದ್ಯನೂ ಸರಸ್ಯನೂ ನಾದ್ಯನೂ ವೈಶಂತನೂ ಆಗಿರುವವನಿಗೆ ನಮಸ್ಕಾರ!'     ಭಗವಂತನನ್ನು ಎಲ್ಲೆಲ್ಲಿಯೂ ಕಾಣುವ ದಿವ್ಯದೃಷ್ಟಿಯುಳ್ಳವರಿಗೆ ಇಡಿಯ ಬ್ರಹ್ಮಾಂಡದಲ್ಲಿ ಎಲ್ಲಾ ವಸ್ತುಗಳೂ ಆತನ ವಿಭೂತಿಗಳಾಗಿಯೇ ತೋರುವವು. ಈ ದೃಷ್ಟಿಯಿಂದ ಇಲ್ಲಿ ಈಶ್ವರನನ್ನು ಸ್ತುತಿಸಲಾಗಿದೆ. ಸ್ರುತ್ಯನೆಂದು ಹೊಗಳಿರುವದೂ ಒಂದು ವಿಭೂತಿಯೇ. ಹೀಗೆಯೇ ಮುಂದಿನ ಎಲ್ಲವನ್ನೂ ತಿಳಿಯಬೇಕು. ಸ್ರುತಿ - ಎಂದರೆ ದಾರಿ ಎಂದರ್ಥ. ಹೆಜ್ಜೆಯಿಂದ ಮಾತ್ರ ನಡೆಯಲು ಸಾಧ್ಯವಾದ ಕಾಲುದಾರಿಯನ್ನು ಸ್ರುತಿಯೆನ್ನುವರು. ಅದರಲ್ಲಿರುವವನೂ ಪರಮೇಶ್ವರನೇ - ಎಂದರ್ಥ. ಈಗಿನ ಕಾಲಕ್ಕೆ ದೊಡ್ಡ ದೊಡ್ಡ ನಗರಗಳಲ್ಲಿ ವಾಸಕ್ಕೆ ಸ್ಥಳವೇ ಸಿಗದೆ ಎಷ್ಟೋ ಜನ ದರಿದ್ರರು ಫುಟ್ ಪಾತ್ ಗಳಲ್ಲಿಯೇ ವಾಸಮಾಡುತ್ತಾರೆ. ಹಾಗೆಂದಮಾತ್ರಕ್ಕೆ ಅವರೇನು ಭಗವಂತನಿಗಿಂತ ಬೇರೆಯಲ್ಲ ಅಂಥ ಜನರಲ್ಲಿಯೂ ಭಗವಂತನೇ ಸ್ರುತ್ಯನಾಗಿ ಇದಾನೆ - ಎಂದು ಭಾವಿಸಬೇಕು. ಇನ್ನು ಎಷ್ಟೋ ಹಳ್ಳಿಗಳಿಗೆ ದೊಡ್ಡ ರಸ್ತೆಯೇ ಇರುವದಿಲ್ಲ. ಕಾಲುದಾರಿಯಲ್ಲೇ ನಡೆದೇ ಹೋಗಬೇಕು. ಇಂಥ ದುರ್ಗಮವಾದ ಕಡಿದಾದ ಚಿಕ್ಕಹಾದಿಗಳಲ್ಲಿಯೂ ಪರಮೇಶ್ವರನೇ ಇದಾನೆ. ಕಾಡಿನಲ

ಗೋದಾಸ್ತುತಿಃ (ಸಂಗ್ರಹ) - 15

ಆಮೋದವತ್ಯಪಿ ಸದಾ ಹೃದಯಂಗಮಾಪಿ ರಾಗಾನ್ವಿತಾಃಪಿ ಲಲಿತಾಃಪಿ ಗುಣೋತ್ತರಾಃಪಿ | ಮೌಳಿಸ್ರಜಾ ತವ ಮುಕುಂದಕಿರೀಟಭಾಜಾ ಗೋದೇ ಭವತ್ಯಧರಿತಾ ಖಲು ವೈಜಯಂತೀ ||15|| ಗೋದೇ = ಎಲೈ! ಗೋದಾದೇವಿಯೇ!, ಸದಾ = ಎಲ್ಲ ಕಾಲದಲ್ಲಿಯೂ ಆವೋದವತ್ಯಪಿ = ಪರಿಪೂರ್ಣವಾದ ಪರಿಮಳದಿಂದ ಕೂಡಿದ್ದರೂ, ಹೃದಯಂಗಮಾಃಪಿ = ಮನಸ್ಸನ್ನು ತಣಿಸುವಂತಿದ್ದರೂ, ರಾಗಾಃನ್ವಿತಾಃಪಿ = ಭಗವಂತನಲ್ಲಿ ಅನುರಾಗದಿಂದ ಕೂಡಿದ್ದರೂ (ಕೆಂಪುವರ್ಣದಿಂದ ಶೋಭಿತವಾಗಿದ್ದರೂ ) ಲಲಿತಾಃಪಿ = ಕೋಮಲವಾಗಿದ್ದರೂ, ಗುಣೋತ್ತರಾಃಪಿ = ಮಾಲಿಕೆಯಲ್ಲಿರಬೇಕಾದ ಎಲ್ಲ ವಿಧವಾದ ಗುಣಗಳಿಂದ ಕೂಡಿದ ಮೇಲ್ಮೈ ಯುಳ್ಳದುದಾಗಿದ್ದರೂ, ವೈಜಯಂತಿ = ಭಗವಂತನ ವಕ್ಷಸ್ಥಳದಲ್ಲಿರುವ 'ವೈಜಯಂತಿ' ಮಾತೆಯಾದರೋ, ಮುಕುಂದ ಕಿರೀಟಭಾಜಾ = ಶ್ರೀಕೃಷ್ಣನ ಕಿರೀಟದಲ್ಲಿ ಪ್ರಕಾಶಿಸುತ್ತಿರುವ, ತವ = ನಿನ್ನ, ಮೌಳಿಸ್ರಜಾ = ಮುಡಿದಲ್ಲಿ ಮುಡಿದುಕೊಟ್ಟ ಮಾಲಿಕೆಯಿಂದ, ಆಧಾರಿತಾ = ತಿರಸ್ಕೃತವಾದುದಾಗಿ, ಭವತಿಖಲು = ಇರುವುದಲ್ಲವೇ     ಎಲೈ! ಗೋದಾದೇವಿಯೇ, ಎಲ್ಲ ಕಾಲದಲ್ಲಿಯೂ ಪರಿಪೂರ್ಣವಾದ ಪರಿಮಳದಿಂದ ಕೂಡಿ, ಮನಸ್ಸನ್ನು ತಣಿಸುವಂತಿದ್ದರೂ, ಭಗವಂತನಲ್ಲಿ ಅನುರಾಗದಿಂದ ಕೂಡಿ (ಕೆಂಪುವರ್ಣದಿಂದ ಶೋಭಿತವಾಗಿ) ಕೋಮಲವಾಗಿದ್ದು, ಮಾಲಿಕೆಯಲ್ಲಿರಬೇಕಾದ ಎಲ್ಲ ವಿಧವಾದ ಗುಣಗಳಿಂದಲೂ ಕೂಡಿದ ಮೇಲ್ಮೈಯುಳ್ಳದುದಾಗಿದ್ದರೂ, ಬಹಳ ಕಾಲದಿಂದ ಭಗವಂತನಿಂದ ವಕ್ಷಸ್ಥಲದಲ್ಲಿ ಧರಿಸಲ್ಪಟ್ಟ 'ವೈಜಯಂತಿ' ಮಾ

ವೇದದಲ್ಲಿ ಗಾಯತ್ರೀ ತತ್ತ್ವ

    ವಿಶ್ವಸಾಹಿತ್ಯದಲ್ಲಿ ವೇದಗಳು ಎಲ್ಲಕ್ಕಿಂತ ಪ್ರಾಚೀನಗ್ರಂಥಗಳಾಗಿವೆ. ಇವು ಋಷಿಮುನಿಗಳ ತಪೋಬಲದಿಂದ ಹೊರಬಂದ ಅನುಭವಸ್ವರೂಪವಾದ ಜ್ಞಾನಭಂಡಾರಗಳು. 'ಯಾಸ್ಯ' ಮಹಾಮುನಿಗಳು ತಮ್ಮ ಪ್ರಸಿದ್ಧಗ್ರಂಥವಾದ ನಿರುಕ್ತ (1-6-20)ದಲ್ಲಿ "ಸಾಕ್ಷಾತ್ಕೃಧರ್ಮಾಣಃ ಋಷಯೋ ಬಭೂವುಃ" - ಎಂದರೆ ಋಷಿಗಳಿಗೆ ಧರ್ಮಸಾಕ್ಷಾತ್ಕಾರವಾಗಿದ್ದಿತು. ಅವರುಗಳು ವೇದಮಂತ್ರಗಳನ್ನು ತಿಳಿದಿದ್ದರು. ಆದರೆ ಅವುಗಳನ್ನು ರಚಿಸಿದವರಲ್ಲ - ಎಂದು ಬರೆದಿದ್ದಾರೆ, ಆದ್ದರಿಂದ ಧರ್ಮಸಾಕ್ಷಾತ್ಕಾರಮಾಡಿಕೊಂಡ ಋಷಿಗಳ ಅನುಭವವಾಣಿಗಳೇ ವೇದಗಳು ಈ ವೇದಗಳೇ ಭಾರತೀಯ ಸಂಸ್ಕೃತಿ-ಸಮಾಜ-ವೇದಾಂತ-ಜೀವನ ಹಾಗೂ ವಿವಿಧ ವಿದ್ಯೆಗಳ ಮೂಲವೇ ಆಗಿವೆ.     ಶಿಕ್ಷಾ-ವ್ಯಾಕರಣ-ಛಂದಸ್ಸು-ನಿರುಕ್ತ-ಜ್ಯೋತಿಷ್ಯ-ಕಲ್ಪ-ಈ ಆರು ವೇದಾಂಗಗಳು. ವೇದಮಂತ್ರಗಳಿಗೆ ಅರ್ಥಮಾಡುವಾಗ ಇವು ಬೇಕಾಗುತ್ತವೆ. ಮಂತ್ರಗಳ ಚಿಕ್ಕ ಚಿಕ್ಕಗುಂಪುಗಳನ್ನು 'ಸೂಕ್ತ'ಗಳೆಂದು ಕರೆಯುತ್ತಾರೆ. ಋಗ್ವೇದದ ಪ್ರತಿಯೊಂದು ಸೂಕ್ತದ ಋಷಿ - ದೇವತೆ - ಛಂದಸ್ಸುಗಳನ್ನು ತಿಳಿದುಕೊಳ್ಳುವದು ಅವಶ್ಯವಾಗಿರುತ್ತದೆ. ಆರರಿಂದ ಹನ್ನೆರಡರವರೆಗಿನ ಅಕ್ಷರಗಳಿಂದ ಕೂಡಿದ ಒಂದು ಪಾದವು ಎಲ್ಲಾ ಋಕ್ಕುಗಳಿಗೂ ಮೂಲವಾಗಿದ್ದು ನಾಲ್ಕು ಪಾದಗಳು ಸೇರಿದಾಗ ಒಂದು ಋಕ್ಕು ಎನಿಸುತ್ತದೆ. ಋಷಿ, ದೇವತೆ, ಛಂದಸ್ಸು-ಗಳ ಜ್ಞಾನವಿಲ್ಲದೆ ವೇದವನ್ನು ಅಧ್ಯಯನಮಾಡುವಂತಿಲ್ಲ ಇದು ಋಗ್ವೇದದ ಅಧ್ಯಯನಕ್ಕೆ ಕಡ್ಡಾಯವಾಗಿದೆ.     ಛಂದಸ್ಸು ಹಾ

ಅನ್ನಪೂರ್ಣ ಸ್ತೋತ್ರಮ್

ನಿತ್ಯಾನಂದಕರೀ ವವರಾಭಯಕರೀ ಸೌಂದರ್ಯರತ್ನಾಕರೀ | ನಿರ್ಧೂತಾಖಿಲಘೋರಪಾವನಕರೀ ಪ್ರತ್ಯಕ್ಷಮಾಹೇಶ್ವರೀ || ಪ್ರಾಲೇಯಾಚಲವಂಶ ಪಾವನಕರೀ ಕಾಶೀ ಪುರಾಧೀಶ್ವರೀ | ಬಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನ ಪೂರ್ಣೇಶ್ವರೀ ||1||     ಶಾಶ್ವತವಾದ ಆನಂದವನ್ನು ನೀಡುವವಳು, ಭಕ್ತರಿಗೆ ವರ ಮತ್ತು ಅಭಯವನ್ನು ನೀಡುವವಳು, ಸೌಂದರ್ಯವಂತಳು, ಭಕ್ತರ ಪಾಪಗಳನ್ನು ನಾಶಮಾಡಿ ಪವಿತ್ರಗೊಳಿಸುವವಳು, ಮಹೇಶ್ವರನ ಪ್ರತ್ಯಕ್ಷ ಪ್ರಾಣವಲ್ಲಭೆ, ಪರ್ವತ ರಾಜನ ವಂಶ ಪಾವನಗೊಳಿಸಿದವಳು, ಕಾಶೀ ಪಟ್ಟಣದ ಅಧಿದೇವತೆ, ಭಕ್ತರಿಗೆ ಕೃಪೆ ನೀಡುವ ಅನ್ನಪೂರ್ಣೇಶ್ವರೀ ಮಾತೆಯೇ ಭಿಕ್ಷೆಯನ್ನು ನೀಡು ||1|| ನಾನಾರತ್ನ ವಿಚಿತ್ರ ಭೂಷಣಕರೀ ಹೇಮಾಂಬರಾಡಂಬರೀ | ಮುಕ್ತಾಹಾರ ವಿಡಂಬ ಮಾನವಿಲಸದ್ವಕ್ಷೋಜಕುಂಭಾಂತರೀ | ಕಾಶ್ಮೀರಾಗುರುವಾಸಿತಾಂಗುರುಚಿರೇ ಕಾಶೀ ಪುರಾಧೀಶ್ವರೀ | ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||2||     ವಿವಿಧ ಪ್ರಕಾರದ ಆಶ್ಚರ್ಯಕರ ಬಂಗಾರದ ರತ್ನಾಭರಣಗಳನ್ನು ಧರಿಸಿರುವಳು, ಸಂತೋಷದಿಂದಿರುವ, ವಕ್ಷಃಸ್ಥಳದಲ್ಲಿ ಮುತ್ತಿನಹಾರ ತೂಗಾಡುತ್ತಿರುವ, ಕೇಶರ ಕಸ್ತೂರಿಗಳಿಂದ ಸುವಾಸಿತಳೂ, ಕಾಂತಿಯುಕ್ತದೇಹವುಳ್ಳವಳು, ಕಾಶೀಪಟ್ಟಣದ ಅಧಿದೇವತೆ, ಭಕ್ತರಿಗೆ ಕೃಪೆ ನೀಡುವ ಮಾತೆ ಅನ್ನಪೂರ್ಣೇಶ್ವರೀ ಭಿಕ್ಷೆಯನ್ನು ನೀಡು ||2|| ಯೋಗಾನಂದಕರೀ ರಿಪುಕ್ಷಯಕರೀ ಧರ್ಮೈಕನಿಷ್ಠಾಕರೀ | ಚಂದ್ರಾರ್ಕಾನಲಭಾಸಮಾನಲಹರೀ ತ್ರೈಲೋಕ್ಯರಕ್ಷಾಕರೀ || ಸರ್ವೈಶ್ವರ್ಯಕರೀ ತಪಃ ಫ

ಗೋದಾಸ್ತುತಿಃ (ಸಂಗ್ರಹ) - 14

ತ್ವದ್ಭುಕ್ತ ಮಾಲ್ಯಸುರಭೀಕೃತಚಾರುಮೌಳೇಃ ಹಿತ್ವಾ ಭುಜಾಂತರಗತಾಮಪಿ ವೈಜಯಂತೀಮ್ | ಪತ್ಯುಸ್ತವೇಶ್ವರಿ ಮಿಥಃ ಪ್ರತಿಘಾತಲೋಲಾಃ ಬರ್ಹಾತಪತ್ರರುಚಿಮಾರಚಯಂತಿ ಭೃಂಗಾಃ ||14|| ಈಶ್ವರಿ = ಚೇತನಾಚೇತನ ವರ್ಗಗಳೆಲ್ಲಕ್ಕೂ ಸ್ವಾಮಿನಿಯಾದ ಗೋದಾ ದೇವಿಯೇ!, ತ್ವದ್ಭುಕ್ತಮಾಲ್ಯ = ನೀನು ಮುಡಿದುಕೊಟ್ಟ ಮಾಲಿಕೆಗಳಿಂದ, ಸುರಭೀಕೃತ = ಪರಿಮಳಗೊಂಡು, ಚಾರು = ಸುಂದರವಾದ, ಮೌಳೇಃ = ಶಿರಸ್ಸಿನಿಂದ ಕೂಡಿದ, ತವ = ನಿನ್ನ, ಪತ್ಯುಃ = ಪತಿಯ, ಭುಜಾಂತರಗತಾಂ = ಎರಡು ಭುಜಗಳ ಮಧ್ಯದಲ್ಲಿರುವ ವಕ್ಷಸ್ಥಲದಲ್ಲಿರುವ, ವೈಜಯಂತೀ ಅಪಿ = 'ವೈಜಯಂತಿ' ಎಂಬ ವನಮಾಲೆಯನ್ನೂ ಕೂಡ, ಹಿತ್ವಾ = ತ್ಯಾಗಮಾಡಿ, ಭೃಂಗಾಃ = ದುಂಬಿಗಳಾದರೋ (ನಿನ್ನ ಪತಿಯ ತಲೆಯಮೇಲೆ) ಮಿಥಃ = ಪರಸ್ಪರ, ಪ್ರತಿಘಾತಲೋಲಾಃ = ಒಂದಕ್ಕೊಂದು ತಗಲುತ್ತಾ ಆಟವಾಡುತ್ತಾ, ಬರ್ಹಾ = ನವಿಲುಗರಿಯ, ಆತಪತ್ರಂ = ಕೊಡೆಯ ರೂಪವನ್ನು, ಅರಚಯಂತಿ = ಉಂಟುಮಡುತ್ತಿವೆ.     ಚೇತನಾಚೇತನ ವರ್ಗಗಳೆಲ್ಲಕ್ಕೂ ಸ್ವಾಮಿನಿಯಾದ ಎಲೈ! ಗೋದಾ ದೇವಿಯೇ! ನೀನು ಮುಡಿದುಕೊಟ್ಟ ಮಾಲಿಕೆಗಳನ್ನು ತನ್ನ ತಲೆಯಲ್ಲಿ ಮುಡಿದಿರುವುದರಿಂದಲೇ ಪರಿಮಳಗೊಂಡು ಸುಂದರವಾದ ಶಿರಸ್ಸಿನಿಂದ ಕೂಡಿದ, ನಿನ್ನ ಪತಿಯ ವಕ್ಷಸ್ಥಲದಲ್ಲಿರುವ, 'ಸರ್ವಗಂಧಃ' ಎಂದು ಉಪನಿಷತ್ಪ್ರತಿಪಾದ್ಯನಾದ ಸರ್ವೇಶ್ವರನ ಸಂಸರ್ಗದಿಂದ ನಿರಂತರವಾದ ಪರಿಮಳಭರಿತವಾದ, 'ವೈಜಯಂತೀ' ಎಂಬ ವನಮಾಲೆಯನ್ನೂ ತ್ಯಾಗ ಮಾಡಿದ ದುಂಬ

ರಾಮಕೃಷ್ಣಪರಮಹಂಸರು

    ಇಂದು (10-3-2016) ಶ್ರೀರಾಮಕೃಷ್ಣ ಪರಮಹಂಸರ ಜನ್ಮದಿನ. ಅವರ ಸುಪ್ರಸಿದ್ಧಶಿಷ್ಯರಾದ ವಿವೇಕಾನಂದಸ್ವಾಮಿಗಳ ಮೂಲಕ ಅವರ ಕೀರ್ತಿಯು ನಾಗರಿಕಭೂಮಂಡಲದಲ್ಲೆಲ್ಲ ಹರಡಿರುತ್ತದೆ. ಅವರ ಜೀವನಚರಿತ್ರೆಯನ್ನು ಮಾಕ್ಸಮುಲ್ಲರ್ ಮುಂತಾದ ಪಾಶ್ಚಾತ್ತ್ಯವಿದ್ವಾಂಸರೂ ಕೊಂಡಾಡಿ ತಮ್ಮ ಮೆಚ್ಚುಗೆಯನ್ನು ತೋರಿಸಿರುತ್ತಾರೆ. ನವನಾಗರಿಕತೆಯಲ್ಲಿ ಮುಳುಗಿತೇಲುತ್ತಿರುವ ಈಗಿನ ಜನರು ಅವರ ಸ್ಮರಣೆಯಿಂದ ತಿಳಿದುಕೊಳ್ಳಬೇಕಾದದ್ದು ಏನಾದರೂ ಇದೆಯೆ?     ಶ್ರೀರಾಮಕೃಷ್ಣರಿಗೆ ಈಗಿನ ಅರ್ಥದಲ್ಲಿ ಅಂಥ ಹೆಚ್ಚಿನ ವಿದ್ಯಾಬ್ಯಾಸವೇನೂ ಆಗಿರಲಿಲ್ಲ. ರಾಮಾಯಣ ಮಹಾಭಾರತಗಳ ಶ್ರವಣವೇ ಅವರಿಗೆ ಧೈರ್ಯ, ಸ್ಥೈರ್ಯ, ಭಕ್ತಿ - ಮುಂತಾದ ಸದ್ಗುಣಗಳನ್ನು ತಂದುಕೊಟ್ಟವಂತೆ. ನಮ್ಮ ಬಾಲಕರಿಗೆ ರಾಮ, ಸೀತೆ, ಕೃಷ್ಣ, ಅರ್ಜುನ - ಮುಂತಾದ ಹೆಸರುಗಳು ಮರೆತು ಹೋಗದಂತೆ ರಾಮಾಯಣಮಹಾಭಾರತಗಳ ಕಥೆಗಳ ಸಂಗ್ರಹವನ್ನೂ ಅವುಗಳಲ್ಲಿ ಪ್ರತಿಪಾದಿಸಿರುವ ಸುಭಾಷಿತಗಳನ್ನೂ ಜ್ಞಾನಭಕ್ತಿವೈರಾಗ್ಯಾದಿಭೋಧಕವಚನಗಳನ್ನೂ ಸಂಗ್ರಹಿಸಿ ಬೋಧಿಸುವ ಗ್ರಂಥಗಳನ್ನು ಬರೆದು ಚಿಕ್ಕವರ ಕೈಯಲ್ಲಿಟ್ಟರೆ ನಮ್ಮ ದೇಶದ ಸಂಸ್ಖೃತಿಯ ಬೀಜವನ್ನು ಅವರ ಹೃದಯದಲ್ಲಿ ನೆಟ್ಟಂತೆ ಆಗಲಾರದೆ?     ಚಿಕ್ಕಂದಿನಿಂದಲೇ ಅವರು ಸಾಧುಸಂನ್ಯಾಸಿಗಳೊಡನೆಯೂ ಬೈರಾಗಿಗಳೊಡನೆಯೂ ಬೆರೆತು ಮಾಡಿದ ಸಂಭಾಷಣೆಯಿಂದ ಅವರ ದೈವಭಕ್ತಿಯು ಮೊಳೆತು ಚಿಗುರಿತು. ಪ್ರಕೃತಿಸೌಂದರ್ಯವನ್ನು ನೋಡಿ ನಲಿಯುವದು, ಯಕ್ಷಗಾನದಂಥ ಹಳ್ಳಿಯ ನಾಟಕಗಳಲ್ಲಿ ಪಾತ್ರವನ್ನು

ಅಗ್ನಿಯು ಸರ್ವಭಕ್ಷಕನಾದುದು

    ದೇವತೆಗಳೊಳಗೆ ಪ್ರತ್ಯಕ್ಷದೇವತೆಯು ಅಗ್ನಿಯು, ಬೆಂಕಿಯ ಶಾಖವಿಲ್ಲದೆ ಮನುಷ್ಯನ ಜೀವನವೇ ನಡೆಯುವಂತಿಲ್ಲ ನಮ್ಮ ಶರೀರದೊಳಗೂ ಆತನು ಶಾಖ ರೂಪದಿಂದಲೂ, ಜಠರಾಗ್ನಿಯಾಗಿ ತಿಂದ ಆಹಾರವನ್ನು ಜೀರ್ಣಗೊಳಿಸುವ ರೂಪದಿಂದಲೂ ಯಾವಾಗಲೂ ಇದ್ದುಕೊಂಡಿರುತ್ತಾನೆ ನಾವು ಆಡುತ್ತಿರುವ ಮಾತುಗಳಿಗೂ ಅಗ್ನಿಯೇ ಅನುಗ್ರಾಹಕನು ಇಂಥ ದೇವತೆಯು ಶಾಪಗ್ರಸ್ತನಾದುದು ಹೇಗೆ?     ಪೂರ್ವಕಾಲದಲ್ಲಿ ಭೃಗುವೆಂಬ ಮಹರ್ಷಿಯಿದ್ದರು ಪುಲೋಮೆ ಧರ್ಮಪತ್ನಿಯು, ಕಾಲಕ್ರಮದಲ್ಲಿ ಪುಲೋಮೆಯು ಭೃಗುವಿನಿಂದ ಗರ್ಭವನ್ನು ಧರಿಸಿದಳು. ಒಂದು ದಿನ ತೀರ್ಥಸ್ನಾನಕ್ಕಾಗಿ ಭೃಗುವು ಹೊರಗೆ ಹೋಗಿದ್ದಾಗ ಆ ಸಮಯವನ್ನು ಸಾಧಿಸಿ ಪೊಲೋಮ ಎಂಬ ಹೆಸರಿನ ಒಬ್ಬ ರಾಕ್ಷಸನು ಆಶ್ರಮಕ್ಕೆ ಬಂದನು ಪುಲೋಮೆಯು ಆತನನ್ನು ಅರ್ಘ್ಯಪಾದ್ಯಕಂದಮೂಲಫಲಗಳಿಂದ 'ಸತ್ಕರಿಸಿ ಕುಳ್ಳಿರಿಸಿದಳು. ಪುಲೋಮನಿಗೆ ಭೃಗುವಿನಮೇಲೆ ಒಂದು ವಿಚಾರದಲ್ಲಿ ದ್ವೇಷವಿತ್ತು, ಅದೇನೆಂದರೆ : ಪುಲೋಮೆಯ ತಂದೆಯು ಆಕೆಯನ್ನು ಭೃಗುವಿಗೆ ಮದುವೆಮಾಡಿಕೊಡುವ ಮುಂಚೆಯೇ ಈ ಪುಲೋಮನು ಅವಳನ್ನು ವರಿಸಿದ್ದನು. ಹೀಗೆ ತನ್ನವಳಾಗಬೇಕಾಗಿದ್ದವಳನ್ನು ಈ ಋಷಿಯು ಸ್ವೀಕರಿಸಿದನಲ್ಲ! ಎಂಬ ಹಗೆತನವು ಆ ರಾಕ್ಷಸನಿಗೆ ಇತ್ತು, ಆದ್ದರಿಂದ ಹೇಗಾದರೂ ಮಾಡಿ ಈಕೆಯನ್ನು ಅಪಹರಿಸಿಕೊಂಡು ಹೋಗಬೇಕೆಂದು ಆತನು ಮನಸ್ಸುಮಾಡಿದನು ಆದರೆ ತನ್ನ ಅಭಿಪ್ರಾಯವನ್ನು ಮತ್ತೊಬ್ಬರಲ್ಲಿ ತಿಳಿಸಿ ಮುಂದುವರಿಯೋಣವೆಂತ ಅಗ್ನಿಹೋತ್ರಶಾಲೆಯಲ್ಲಿದ್ದ ಅಗ್ನಿದೇವನೊಡನೆ ಹೀಗೆಂದು ಕೇಳಿ

ಶನೈಶ್ಚರ ವಿರಚಿತ ಶ್ರೀಲಕ್ಷ್ಮೀನರಸಿಂಹ ಸ್ತೋತ್ರ

ಗ್ರಹ ಗೋಚಾರ ಪೀಡೆಗಳಲ್ಲಿ ಶನೈಶ್ಚರ ಗೋಚಾರ ಕಷ್ಟಕರವಾದದ್ದು. ಶನಿಗ್ರಹ ಹೆಸರು ಕೇಳುತ್ತಲೆ ಜನರು ಭಯಪಡುತ್ತಾರೆ. ಜ್ಯೋತಿಷಿಗಳು ಶನಿಕಾಟವು ಸದವಕಾಶವೇನೋ ಎಂಬಂತೆ ಜನರನ್ನು ಮತ್ತಿಷ್ಟು ಹೆದರಿಸುತ್ತಿರುತ್ತಾರೆ. ಜನ ವಿಶ್ವಾಸ-ಅಂಧವಿಶ್ವಾಸ, ಭಯ, ಬೆದರಿಕೆ, ಅಜ್ಞಾನ ಮುಂತಾದವುಗಳ ಪ್ರಭಾವಕ್ಕೊಳಗಾಗಿ ಕಂಗಾಲಾಗುತ್ತಾರೆ. ಶನಿದೇವನು ನಮ್ಮ ಜಾತಕದಲ್ಲಿ ಮತ್ತು ಗೋಚಾರದಲ್ಲಿ ಅನೇಕ ವಿಷಯಗಳ ಕಾರಕನಾಗಿರುತ್ತಾನೆ. ಶನೈಶ್ಚರನು ಕರ್ಮಫಲದಾಯಕನಾಗಿರುತ್ತಾನೆ. ಪ್ರತಿಯೊಬ್ಬ ಜೀವನು ತಾನು ಮಾಡಿರುವ ಶುಭಾಶುಭ ಕರ್ಮದ ಫಲಗಳನ್ನು ಭೋಗಿಸಿಯೇ ತೀರಿಸಬೇಕು. ಶನಿದಶೆ, ಶನಿಗೋಚಾರಗಳು ನಮ್ಮ ಕರ್ಮಪ್ರಾರಬ್ಧವನ್ನು ಭೋಗಿಸಲು ವಿಧಿಯಿಂದ ನಿರ್ಮಿತ ವ್ಯವಸ್ಥೆಯಾಗಿದೆ. ಎಲ್ಲ ಗ್ರಹಗಳ ತುಲನೆಯಲ್ಲಿ ಶನಿಯ ಗತಿಯು ಬಹಳ ಮಂದವಾಗಿರುತ್ತದೆ, ಆದ್ದರಿಂದ ಪ್ರಭಾವದ ಕಾಲವ್ಯಾಪ್ತಿಯೂ ಹೆಚ್ಚಿನದಾಗಿರುತ್ತದೆ. ಹನ್ನೆರಡು ರಾಶಿಗಳನ್ನು ಪೂರ್ಣವಾಗಿ ಸಂಚರಿಸಲು ಶನಿಗೆ ಅಂದಾಜು ಇಪ್ಪತ್ತೊಂಬತ್ತುವರೆ ವರ್ಷಗಳಷ್ಟು ಕಾಲ ಬೇಕು. ಒಂದು ರಾಶಿಯಲ್ಲಿ ಶನಿಸಂಚಾರ ಎರಡುವರೆ ವರ್ಷಗಳಷ್ಟು ಇರುತ್ತದೆ. ಈ ದೀರ್ಘ ಅವಧಿಯಿಂದಾಗಿಯೇ ಶನಿಪ್ರಭಾವವೂ ಸಹ ದ್ವಾದಶರಾಶಿಗಳ ಮೇಲೆ ದೀರ್ಘಕಾಲದವರೆಗೆ ಇರುತ್ತದೆ. ಶನಿ ಗೋಚಾರದಲ್ಲಿ ದ್ವಾದಶ, ಅಷ್ಟಮ, ಪಂಚಮ ಮತ್ತು ಚತುರ್ಥ ಗೋಚಾರಗಳು ವಿಪತ್ತಿಕಾರಕಗಳೆಂದು ಮಾನಿಸಲಾಗಿದೆ. ಜನ್ಮರಾಶಿಯಿಂದ ದ್ವಾದಶ-ಜನ್ಮ-ದ್ವಿತೀಯ ಹೀಗೆ ಏಳುವರೆ ವರ್ಷಗಳ ಗೋಚಾರವ

ವಿಶೇಷ ಮಹತ್ವ ಹೊಂದಿರುವ ಶಿವನ ಆಭರಣಗಳು.

ನಮ್ಮ ಹಿಂದೂ ಸಂಪ್ರದಾಯದಲ್ಲಿ ವಿಶೇಷವಾಗಿ ಶಿವ ದೇವರು ಎಲ್ಲಾ ದೇವತೆಗಳಿಂದ ವಿಭಿನ್ನವಾಗಿದ್ದಾರೆ. ಭಸ್ಮ ಧಾರಿ, ತ್ರಿಶೂಲಧಾರಿ, ಹಾವನ್ನೇ ಆಭರಣವನ್ನಾಗಿಸಿಕೊಂಡಿರುವ ಮಹೇಶ್ವರ ದೇವಾಧಿ ದೇವ. ಚಿನ್ನದ ಆಭರಣಗಳನ್ನೇ ಧರಿಸದೇ ರುದ್ರಾಕ್ಷಿ, ಹಾವನ್ನೇ ತನ್ನ ಆಭರಣವನ್ನಾಗಿಸಿಕೊಂಡಿರುವ ಶಿವ ಸರಳತೆಯನ್ನೇ ಮೈಗೂಢಿಸಿಕೊಂಡವರು. ಹುಲಿಯ ಚರ್ಮವನ್ನೇ ತನ್ನ ಆಸನವಾಗಿಸಿ ಕೈಲಾಸ ವಾಸಿಯಾಗಿರುವ ಮಹಾದೇವ ಭಕ್ತನುರಾಗಿ. ಶಿವನನ್ನು ಅಲಂಕರಿಸಿರುವ ಈ ಆಭರಣಗಳು ತಮ್ಮದೇ ಆದ ಮಹತ್ವನ್ನು ಪಡೆದುಕೊಂಡಿವೆ.  ಜಟಾಧಾರಿಯಾಗಿ ಸರಳ ಸುಂದರನಾಗಿರುವ ಪರಮೇಶ್ವರನು ಭಕ್ತರ ಇಷ್ಟಾರ್ಥಗಳನ್ನು ಕ್ಷಣದಲ್ಲಿ ಸಾಧಿಸುವ ಕರುಣಾಮಯಿ. ಆದ್ದರಿಂದಲೇ ದೇವತೆಗಳಿಂದ ಹಿಡಿದು ರಾಕ್ಷಸರವರೆಗೂ ಶಿವನನ್ನೇ ಆರಾಧಿಸಿರುವ ಭಕ್ತಿ ಪ್ರಧಾನ ಕಥೆಗಳಿವೆ. ಶಿವರಾತ್ರಿಯ ಪುಣ್ಯ ದಿನದಂದು ಶಿವನ ಬಗೆಗಿನ ಎಷ್ಟೋ ಕಥೆಗಳನ್ನು ಕೇಳಿ ಓದಿ ಧನ್ಯರಾಗುತ್ತೇವೆ. ಅದೇ ರೀತಿ ಶಿವನು ಏಕೆ ಸರಳತೆಯ ರುವಾರಿ ಎಂಬುದನ್ನು ಇಂದು ತಿಳಿದುಕೊಳ್ಳೋಣ. 1.ಹಾವು 'ಜೀವ' ವನ್ನು ವ್ಯಕ್ತಿಯ ಆತ್ಮವನ್ನು ಪ್ರತಿನಿಧಿಸುವ ಶಿವನ ಆಭರಣವಾಗಿರುವ ಹಾವು ಶಿವನ ಕುತ್ತಿಗೆಯಲ್ಲಿ ವಿರಾಜಮಾನವಾಗಿರುತ್ತದೆ. ಪ್ರತಿಯೊಬ್ಬ ಜೀವ ಸಂಕುಲವೂ ತನ್ನ ಬದುಕಿನ ಏಳಿಗೆಗೆ ದೇವರನ್ನು ನಂಬಿರಬೇಕೆಂಬ ತತ್ವವನ್ನು ಇದು ಪ್ರತಿನಿಧಿಸುತ್ತದೆ. ನಮಗೆ ಹಾವೆಂದರೆ ಭಯ ಆದರೆ ಆ ಪರಶಿವನು ಎಲ್ಲಾ ರೀತಿಯ ಭಾವನೆಗಳಿಂದ ಮುಕ್ತನ

ಗೋದಾಸ್ತುತಿಃ (ಸಂಗ್ರಹ) - 13

ತ್ವದ್ಭುಕ್ತ ಮಾಲ್ಯಸುರಭೀಕೃತಚರುಮೌಳೇಃ ಹಿತ್ವಾ ಭುಜಾಂತರಗತಾಮಪಿ ವೈಜಯಂತೀಮ್ | ಪತ್ಯುಸ್ತವೇಶ್ವರಿ ಮಿಥಃ ಪ್ರತಿಘಾತಲೋಲಾಃ ಬರ್ಹಾತಪತ್ರರುಚಿಮಾರಚಯಂತಿ ಭೃಂಗಾಃ ||14|| ಈಶ್ವರಿ = ಚೇತನಾಚೇತನ ವರ್ಗಗಳೆಲ್ಲಕ್ಕೂ ಸ್ವಾಮಿನಿಯಾದ ಗೋದಾ ದೇವಿಯೇ!, ತ್ವದ್ಭುಕ್ತಮಾಲ್ಯ = ನೀನು ಮುಡಿದುಕೊಟ್ಟ ಮಾಲಿಕೆಗಳಿಂದ, ಸುರಭೀಕೃತ = ಪರಿಮಳಗೊಂಡು, ಚಾರು = ಸುಂದರವಾದ, ಮೌಳೇಃ = ಶಿರಸ್ಸಿನಿಂದ ಕೂಡಿದ, ತವ = ನಿನ್ನ, ಪಶ್ಯುಃ = ಪತಿಯ, ಭುಜಾಂತರಗತಾಂ = ಎರಡು ಭುಜಗಳ ಮಧ್ಯದಲ್ಲಿರುವ ವಕ್ಷಸ್ಥಲದಲ್ಲಿರುವ, ವೈಜಯಂತೀ ಅಪಿ = 'ವೈಜಯಂತಿ' - ಎಂಬ ವನಮಾಲೆಯನ್ನೂ ಕೂಡ, ಹಿತ್ವಾ = ತ್ಯಾಗಮಾಡಿ, ಭೃಂಗಾಃ = ದುಂಬಿಗಳಾದರೋ (ನಿನ್ನ ಪತಿಯ ತಲೆಯಮೇಲೆ), ಮಿಥಃ = ಪರಸ್ಪರ, ಪ್ರತಿಘಾತಲೋಲಾಃ = ಒಂದಕ್ಕೊಂದು ತಗಲುತ್ತಾ ಆಟವಾಡುತ್ತಾ, ಬರ್ಹಾ = ನವಿಲುಗರಿಯ, ಆತಪತ್ರಂ = ಕೊಡೆಯ ರೂಪವನ್ನು, ಅರಚಯಂತಿ = ಉಂಟುಮಾಡುತ್ತಿವೆ.     ಚೇತನಾಚೇತನ ವರ್ಗಗಳೆಲ್ಲಕ್ಕೂ ಸ್ವಾಮಿನಿಯಾದ ಎಲೈ! ಗೋದಾ ದೇವಿಯೇ!, ನೀನು ಮುಡಿದುಕೊಟ್ಟ ಮಾಲಿಕೆಗಳನ್ನು ತನ್ನ ತಲೆಯಲ್ಲಿ ಮುಡಿದಿರುವುದರಿಂದಲೇ ಪರಿಮಳಗೊಂಡು ಸುಂದರವಾದ ಶಿರಸ್ಸಿನಿಂದ ಕೂಡಿದ, ನಿನ್ನ ಪತಿಯ ವಕ್ಷಸ್ಥಲದಲ್ಲಿರುವ, 'ಸರ್ವಗಂಧಃ'- ಎಂದು ಉಪನಿಷತ್ಪ್ರತಿಪಾದ್ಯನಾದ ಸರ್ವೇಶ್ವರನ ಸಂಸರ್ಗದಿಂದ ನಿರಂತರವಾದ ಪರಿಮಳಭರಿತವಾದ, 'ವೈಜಯಂತೀ' - ಎಂಬ ವನಮಾಲೆಯನ್ನೂ ತ್ಯಾಗ ಮಾಡ

ಶಿವವೇದಪಾದಸ್ತವಃ (ಜೈಮಿನಿ ಮಹರ್ಷಿಗಳು)

ನಮಾಮಿ ನಿತ್ಯಂ ತ್ರಿಪುರಾರಿಮೇನಂ ಯಮಾನ್ತಕಂ ಷಣ್ಮುಖತಾತಮಿಶಮ್ | ಲಲಾಟನೇತ್ರಾರ್ದಿತಪುಷ್ಪಚಾಪಂ ವಿಶ್ವಂ ಪುರಾಣಂ ತಮಸಃ ಪರಸ್ತಾತ್ ||1||     ತ್ರಿಪುರರೆಂಬ ದಾನವರ ಶತ್ರುವೂ ಯಮನಿಗೂ ಯಮನೂ ಷಣ್ಮುಖನ ತಂದೆಯೂ ಎಲ್ಲಕ್ಕೂ ಒಡೆಯನೂ ಆದ, ಹಣೆಗಣ್ಣಿನ (ಅಗ್ನಿಯಿಂದ) ನಾಶಗೊಳಿಸಲ್ಪಟ್ಟ ಮನ್ಮಥನುಳ್ಳವನೂ ವ್ಯಾಪಕನೂ ಪುರಾಣನೂ ಕತ್ತಲೆಯ ಅಚೆಯಿರುವವನೂ ಆದ ಪರಮೇಶ್ವರನನ್ನು ನಾನು ಯಾವಾಗಲೂ ನಮಸ್ಕರಿಸುವೆನು. ಅನನ್ತಮವ್ಯಕ್ತಮಚಿನ್ತ್ಯಮೇಕಂ ಹರಂ ತಮಾಶಾಂಬರಮಂಬರಾಭಮ್ | ಅಜಂ ಪುರಾಣಂ ಪ್ರಣಮಾಮಿ ಯೋಯಮ್ ಅಣೋರಣೀಯಾನ್ ಮಹತೋ ಮಹೀಯಾನ್ ||2||     ತುದಿಯಿಲ್ಲದವನೂ ಅವ್ಯಕ್ತನೂ, ಚಿಂತಿಸಲು ಬಾರದವನೂ ಪಾಪಹರನೂ ದಿಗಂಬರನೂ ಆಕಾಶದ ಹೋಲಿಕೆಯುಳ್ಳವನೂ ಆದ ಅವನನ್ನು - (ಎಂದರೆ) ಯಾವ ಆತನು ಚಿಕ್ಕದರಲ್ಲೆಲ್ಲ ಚಿಕ್ಕವನೂ ದೊಡ್ಡದರಲ್ಲೆಲ್ಲ ದೊಡ್ಡವನೂ ಆಗಿರುವನೋ ಆ ಜನ್ಮರಹಿತನಾದ ಪುರಾಣನಾದ ದೇವನನ್ನು ನಮಸ್ಕರಿಸುವೆನು. ಅನ್ತಸ್ಥಮಾತ್ಮಾನಮಜಂ ನ ದೃಷ್ಟ್ವಾ ಭ್ರಮನ್ತಿ ಮೂಢಾ ಗಿರಿಗಹ್ವರೇಷು | ಪಶ್ಚಾದುದಗ್ ದಕ್ಷಿಣತಃ ಪುರಸ್ತಾತ್ ಅಧಸ್ವಿದಾಸೀದುಪರಿಸ್ವಿದಾಸೀತ್ ||3||     ಹೃದಯಾಂತರಾಳದಲ್ಲಿರುವ ಜನ್ಮರಹಿತನಾದ ಆತ್ಮನಾದ (ಶಿವನನ್ನು) ಕಾಣದೆ ಮೂಢರು ಕಾಡು ಮತ್ತು ಗುಹೆಗಳಲ್ಲಿ ಹಿಂದಕ್ಕೂ ಮುಂದಕ್ಕೂ ಬಲಕ್ಕೂ ಎಡಕ್ಕೂ ಮೇಲಕ್ಕೂ ಕೆಳಕ್ಕೂ ತಿರುಗುತ್ತಾ ಎಲ್ಲಿದಾನೆಂದು (ಹುಡುಕುತ್ತಿರುವರು.) ಇಮಂ ನಮಾಮಿಶ್ವರಮಿನ್ದುಮೌಳಿಂ ಶಿವಂ ಮಹಾನನ್ದಮಶೋಕದುಃಖಮ್ | ಹೃದಂಬ

ಮಹಾಶಿವರಾತ್ರಿ

ಮಹಾ ಶಿವರಾತ್ರಿಯ ಆಚರಣೆ ನಮ್ಮ ನಾಡಿನಲ್ಲಿ ತುಂಬಾ ಜನಪ್ರಿಯ. ಆ ದಿನ ಇಡೀ ರಾತ್ರಿ ಗುಡಿ-ಮಠಗಳಲ್ಲಿ, ಅಷ್ಟೇ ಏಕೆ, ಮನೆಗಳಲ್ಲೂ ನಿರಂತರ ಭಜನೆಗಳು ನಡೆಯುತ್ತವೆ. ಭಕ್ತರೆಲ್ಲರೂ ಉಪವಾಸವಿದ್ದು, ಇಡೀ ರಾತ್ರಿ ಅಖಂಡ ಜಾಗರಣೆಯ ನಿಯಮ ಪಾಲಿಸುತ್ತಾರೆ. ಉಪವಾಸ-ಜಾಗರಣೆ ಶಿವಧ್ಯಾನಗಳ ತ್ರಿವೇಣಿ ಸಂಗಮವೇ ಶಿವರಾತ್ರಿ. ಶಿವನು ನಮಗಾಗಿ ಧರಣಿಗೆ ಅವತರಿಸಿ ಬಂದಾಗ ನಾವು ನಿದ್ರೆ ಮಾಡುವುದೂ ಮಾಯೆಯಲ್ಲವೇ? ಅಂದು ಎಲ್ಲ ಶಿವಲಿಂಗಗಳಿಗೆ ಅರ್ಚನೆ, ಅಭಿಷೇಕ ಆಗಿ ಮಂತ್ರಪಠಣೆ-ಭಜನೆ ಸಂಕೀರ್ತನೆಗಳು ಸಂಭ್ರಮದಿಂದ ನೆರವೇರುತ್ತವೆ. ಹಲವು ಶಿವಾಲಯಗಳಲ್ಲಿ 11 ಸಲ ರುದ್ರಾಭೀಷೇಕ ಮಾಡುತ್ತಾರೆ. ಭಕ್ತರು ನೂರಾ ಒಂದು... ಇಲ್ಲವೆ ಸಾವಿರದ ಒಂದು... ಬಿಲ್ವ ಪತ್ರೆಗಳನ್ನು ಪಂಚಾಕ್ಷರಿ ಮಂತ್ರ ಪಠನದೊಂದಿಗೆ ಹರನಿಗೆ ಸಮರ್ಪಿಸುತ್ತಾರೆ. ಹೀಗೆ ಶಿವರಾತ್ರಿ ಕೇವಲ ಉಣ್ಣುವ, ಉಡುವ ತೊಡುವ ಹಬ್ಬ ಮಾತ್ರವಲ್ಲದೆ ನಮ್ಮ ಆಚಾರ-ವಿಚಾರಗಳು ಮಹಾ ಪರಿವರ್ತನೆಯ ಸಾಂಸ್ಕೃತಿಕ ಹಬ್ಬವೂ ದೌದು. ನಮ್ಮ ನಾಡಿನ ತಾಯ್ನೆಲದ ಭಾಷೆಯ ಮಣ್ಣಲ್ಲಿ ಮಹಾಲಿಂಗ... ಬೆವರಲ್ಲಿ ... ಅಭಿಷೇಕ... ಕಲ್ಲಲ್ಲಿ ಕರ್ಪೂರ ಲಿಂಗ... ನುಡಿಯಲ್ಲಿ ನೈವೇದ್ಯ. ಈ ಅಧ್ಯಾತ್ಮಿಕ ಸಂಸ್ಕಾರ ಹಾಗೂ ಸಾಂಸ್ಕೃತಿಕ ಜೀವನದ ಒಡಲಾಳದ ಮಹಾ ಶೋಧನೆಯ ಯಾತ್ರೆಯೇ ಮಹಾ ಶಿವರಾತ್ರಿ! ಹಿಂದುಗಳು ವರ್ಷದುದ್ದಕ್ಕೂ ಒಂದಲ್ಲ ಒಂದು ಹಬ್ಬ ಹಾಗೂ ವ್ರತ ಆಚರಿಸುತ್ತಾರೆ. ಇವುಗಳಿಗೆ ಅತ್ಯಂತ ಮಹತ್ವ ಕೊಟ್ಟಿದ್ದಾರೆ. ಇವುಗಳಿಗೆ ಪುರಾ

ದೇವಿಮಹಾತ್ಮ್ಯ - ಎರಡನೆಯ ಅಧ್ಯಾಯ - ಮಹಿಷಾಸುರ ಸೈನ್ಯವಧೆ

ಧ್ಯಾನಮ್ || ಅಕ್ಷಸ್ರಕ್ಪರಶುಂ ಗದೇಷುಕುಲಿಶಂ ಪದ್ಮಂ ಧನುಷ್ಕಂಡಿಕಾಂ ದಂಡಂ ಶಕ್ತಿಮಸಿಂ ಚ ಚರ್ಮಜಲಜಂ ಘಂಟಾಂ ಸುರಾಭಾಜನಮ್ | ಶೂಲಂ ಪಾಶಸುದರ್ಶನೇ ಚ ದಧತೀಂ ಹಸ್ತೈಃ ಪ್ರಸನ್ನಾನನಾಂ ಸೇವೇ ಸೈರಿಭಮರ್ದಿನೀಮಿಹ ಮಹಾಲಕ್ಷ್ಮೀಂ ಸರೋಜಸ್ಥಿತಾಮ್ ||1|| ಅಕ್ಷರಮಾಲೆ (ಜಪಸರ), ಕೊಡಲಿ, ಗದೆ, ಬಾಣ, ವಜ್ರಾಯುಧ, ಪದ್ಮ, ಬಿಲ್ಲು, ಕಮಂಡಲು, ಕೋಲು, ಶಕ್ತ್ಯಾಯುಧ, ಕತ್ತಿ, ಗುರಾಣಿ, ಶಂಭ, ಘಂಟೆ, ಸುರಾಪಾತ್ರೆ, ತ್ರಿಶೂಲ, ಹಗ್ಗ, ಸುದರ್ಶನಚಕ್ರ - ಇವುಗಳನ್ನು ಕೈಗಳಿಂದ ಹಿಡಿದಿರುವ, ಪ್ರಸನ್ನಮುಖಿಯಾದ, ಕಮಲನಿವಾಸಿನಿಯೂ ಸೈರಭ (ನೆಂಬ ರಾಕ್ಷಸನನ್ನು) ಸಂಹಾರಮಾಡುತ್ತಿರುವವಳೂ ಆದ ಶ್ರೀ ಮಹಾಲಕ್ಷ್ಮಿಯನ್ನು ಭಜಿಸುವೆನು. ಓಂ ಹ್ರೀಂ ಋಷಿರುವಾಚ - ದೇವಾಸುರಮಭೂದ್ಯುದ್ಧಂ ಪೂರ್ಣಮಬ್ದಶತಂ ಪುರಾ | ಮಹಿಷೇಸುರಾಣಾಮಧಿಪೇ ದೇವಾನಾಂ ಚ ಪುರಂದರೇ ||2|| ತತ್ರಾಸುರೈರ್ಮಹಾವೀರ್ಯೈರ್ದೇವಸೈನ್ಯಂ ಪರಾಜಿತಮ್ | ಜಿತ್ವಾಚ ಸಕಲಾನ್ ದೇವಾನಿಂದ್ರೋಭೂನ್ಮಹಿಷಾಸುರಃ ||3|| ಋಷಿಯಿಂತೆಂದನು : ಹಿಂದೆ ಒಂದು ನೂರು ವರ್ಷಗಳ ಕಾಲ ದೇವತೆಗಳಿಗೂ ರಾಕ್ಷಸರಿಗೂ ಯುದ್ಧವಾಯಿತು. ಆಗ ಮಹಿಷನು ರಾಕ್ಷಸರಿಗೊಡೆಯನೂ ಇಂದ್ರನು ದೇವತೆಗಳಿಗೊಡೆಯನೂ ಆಗಿದ್ದರು ಆಗ್ಗೆ ಮಹಾಬಲಶಾಲಿಗಳಾದ ರಾಕ್ಷಸರಿಂದ ದೇವತೆಗಳ ಸೈನ್ಯವು ಸೋಲಿಸಲ್ಪಟ್ಟಿತು ಮಹಿಷಾಸುರನು ಸಕಲದೇವತೆಗಳನ್ನೂ ಗೆದ್ದು (ತಾನೇ) ಇಂದ್ರನಾದನು. ತತಃ ಪರಾಜಿತಾ ದೇವಾಃ ಪದ್ಮಯೋನಿಂ ಪ್ರಜಾಪತಿಮ್ | ಪುರಸ್ಕೃತ್ಯ ಗ