ಗೋದಾಸ್ತುತಿಃ (ಸಂಗ್ರಹ) - 23

ಅರ್ಚ್ಯಂ ಸಮರ್ಚ್ಯ ನಿಯಮೈರ್ನಿಗಮಪ್ರಸೂನೈಃ
ನಾಥಂ ತ್ವಯಾ ಕಮಲಯಾ ಚ ಸಮೇಯಿವಾಂಸಮ್ |
ಮಾತಶ್ಚಿರ ನಿರವಿಶನ್ನಿಜಮಾಧಿರಾಜ್ಯಂ
ಮಾನ್ಯಾ ಮನುಪ್ರಭೃತಯೋಪಿ ಮಹೀಕ್ಷಿತಸ್ತೇ ||23||

ಮಾತಃ = ಎಲೈ! ತಾಯಿಯೇ!,
ಮಾನ್ಯಾಃ = ಗೌರವಕ್ಕೆ ಪಾತ್ರರಾಗಿ ಪ್ರಸಿದ್ಧರಾದ,
ಮನುಪ್ರಭೃತಯಃ = ಮನುವೇ ಮೊದಲಾದ,
ತೇ = ಆ,
ಮಹೀಕ್ಷಿತಃ ಅಪಿ = ಮಹಾರಾಜರೂ ಕೂಡ,
ತ್ವಯಾ = ಭೂಮಿತಾಯಿಯಾದ ನಿನ್ನಿಂದಲೂ,
ಚ = ಮತ್ತು,
ಕಮಲಯಾ = ಮಹಾಲಕ್ಷ್ಮಿಯಿಂದಲೂ,
ಸಮೇಯಿವಾಂಸಂ = ಕೂಡಿಕೊಂಡಿರುವ,
ಅರ್ಚ್ಯಂ = ಪೂಜಿಸಲು ಅರ್ಹವಾದ,
ನಾಥಂ = ನಿನ್ನ ಪತಿಯಯದ ಶ್ರೀಮನ್ನಾರಾಯಣನನ್ನು,
ನಿಯಮೈಃ = ಶಮ, ದಮ, ಸತ್ಯ, ಅಹಿಂಸೆಯೇ ಮೊದಲಾದ ನಿಯಮಗಳಿಂದ ಕೂಡಿದವರಾಗಿ,
ನಿಗಮಪ್ರಸೂನೈಃ = ಆಗಾಮದಿ ಶಾಸ್ತ್ರಗಳಲ್ಲಿ ಹೇಳಿರುವ ಪುಷ್ಪಗಳಿಂದಲೂ ಮತ್ತು (ವೇದದಲ್ಲಿನ) ಮಂತ್ರಪುಷ್ಪಗಳಿಂದಲೂ,
ಸಮರ್ಚ್ಯ = ಚೆನ್ನಾಗಿ ಪೂಜಿಸಿ, ನಿಜಂ = ತಮ್ಮ ತಮ್ಮ,
ಆಧಿರಾಜ್ಯಂ = ಆಳ್ವಿಕೆಯನ್ನು, ಚಿರಂ = ಬಹುಕಾಲ,
ನಿರವಿಶನ್ = ಅನುಭವಿಸಿದರು,
ಚ = ಮತ್ತು, ಚಿರಂ = ಶಾಶ್ವತವಾದ,
ನಿಜಂ = (ಶರಣಾಗತರಾದ ತಮಗೇ ಮಿಸಲಾದ) ತಮ್ಮದೇ ಆದ. ಆಧಿರಾಜ್ಯಂ ವೈಕುಂಠ ಸಮ್ರಾಜ್ಯವನ್ನೂ ನಿವಿಶನ್ ಪಡೆದುಕೊಂಡು ಅನುಭವಿಸಿದರು.

    ಎಲೈ! ತಾಯಿಯೇ! ಗೌರವಕ್ಕೆ ಪಾತ್ರರಾಗಿ ಪ್ರಸಿದ್ಧರಾದ, ಸೂರ್ಯ ವಂಶಕ್ಕೆ ಸೇರಿದ ಮನುವೇ ಮೊದಲಾದ ಮಹಾರಾಜರೂ, ಭೂದೇವಿಯಾದ ನಿನ್ನಿಂದಲೂ ಮತ್ತು ಮಹಾಲಕ್ಷ್ಮಿಯಿಂದಲೂ ಕೂಡಿ, ಎಲ್ಲರಿಂದಲೂ ಪೂಜಿಸಲು ಅರ್ಹನಾದ ನಿನ್ನ ಪತಿಯಾದ ಶ್ರೀಮನ್ನಾರಾಯಣನನ್ನೂ, ಶಮ, ದಮ, ಬ್ರಹ್ಮಚರ್ಯ, ಸತ್ಯ, ಅಸ್ತೇಯ, ಅಹಿಂಸೆಯೇ ಮೊದಲಾದ ನಿಯಮಗಳಿಂದ ಕೂಡಿದವರಾಗಿ, ಆಗಮ ಶಾಸ್ತ್ರಗಳಲ್ಲಿ ಪ್ರತಿಪಾದಿತವಾಗಿರುವ, ವಿಷ್ಣು ಪ್ರೀತಿಕರವಾದ ಪರಿಶುದ್ಧವಾದ ಪುಷ್ಪಗಳಿಂದ ಚನ್ನಾಗಿ ಪೂಜಿಸಿ, ನಿಮ್ಮ ಮೂವರ ಅನುಗ್ರಹದಿಂದಲೂ ತಮ್ಮ ತಮ್ಮ ಆಳ್ವಿಕೆಗೆ ಒಳಪಟ್ಟ ರಾಜ್ಯವನ್ನೂ ಮತ್ತದರ ಭೋಗಗಳನ್ನೂ ಚಿರಕಾಲ ಅನುಭವಿಸಿದರು ಮತ್ತೆ ಆಯಾ ದೇಹಾವಸಾನದಲ್ಲಿ ಶರಣಾಗತರಾದ ತಮಗೇ ಮಿಸಲಾದ, ಶಾಶ್ವತವಾದ ವೈಕುಂಠ ಸಾಮ್ರಾಜ್ಯವನ್ನೂ ಪ್ರವೇಶಿಸಿ ಅನುಭವಿಸಿದರು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ