ಶ್ರೀ ಹನುಮತ್ಪಂಚರತ್ನಮ್ || [ಕನ್ನಡಭಾಷಾ ಭಾವಾರ್ಥ ಸಹಿತ ] [श्री हनुमत्-पञ्चरत्नं ]



ವೀತಾಖಿಲವಿಷಯೇಚ್ಛಂ ಜಾತಾನಂದಾಶ್ರುಪುಲಕಮತ್ಯಚ್ಛಮ್ |
ಸೀತಾಪತಿದೂತಾದ್ಯಂ ವಾತಾತ್ಮಜ ಮದ್ಯ ಭಾವನೆಯೇ ಹೃದ್ಯಮ್ || ೧ ||
 वीताखिल-विषयेच्छं जातानन्दाश्र पुलकमत्यच्छम् ।
 सीतापति दूताद्यं वातात्मजमद्य भावये हृद्यम् ॥ १॥

ಭಾವಾನುವಾದ :-ವಿಷಯ ಸುಖಗಳ ಆಶೆಗಳೆಲ್ಲವನ್ನೂ ಬಿಟ್ಟು;ಸಂತೋಷದ ಕಣ್ಣೀರಿನಿಂದ ಪುಳಕಿತನಾದಂತಹಾ; ಅತ್ಯಂತ ಪರಿಶುಧ್ಧನಾಗಿರುವ; ಜಾನಕೀರಮಣನ ಆದಿ ಸೇವಕನಾದ; ಸುಂದರ ರೂಪಿನ ಆ ವಾಯುಪುತ್ರ ಆಂಜನೇಯನನ್ನು ನಾನಿಂದು ಹೃದಯಾಂತರಾಳದಿಂದ ಸ್ಮರಿಸುವೆನು. || ೧ ||

ತರುಣಾರುಣಮುಖಕಮಲಂ ಕರುಣಾರಸಪೂರಿತಾಪಾಂಗಂ |
ಸಂಜೀವನಮಾಶಾಸೇ ಮಂಜುಲಮಹಿಮಾನಮಂಜನಾಭಾಗ್ಯಂ || ೨ ||
 तरुणारुण मुख-कमलं करुणा-रसपूर-पूरितापाङ्गम् ।
 सन्जीवनमाशासे मञ्जुल-महिमानमञ्जना-भाग्यम् ॥ २॥

ಭಾವಾನುವಾದ :-
ಉದಯಸೂರ್ಯನ ಹಾಗೆ ಕಾಂತಿಯುಕ್ತವಾದ ಮುಖವನ್ನು ಹೊಂದಿದವನಾದ;ದಯಾರಸದ ಹರಿವು ತುಂಬಿದ ಕಡೆಗಣ್ಣುಗಳಿರುವ ;ಜೀವದಾನ ಮಾಡುವ ಮನೋಜ್ಞ ಮನಸ್ಸಿನ; ;ಅಂಜನಾದೇವಿಯ ಪಾಲಿಗೆ ಭಾಗ್ಯಕಾರಕನಾದ ಆ ಹನುಮಂತನನ್ನು ನಾನು ಸ್ತುತಿಸುತ್ತ್ತೇನೆ. || ೨ ||

ಶಂಬರವೈರಿಶರಾತಿಗಮಂಬುಜದಲ ವಿಪುಲಲೋಚನಾದಾರಂ |
ಕಂಬುಗಲಮನಿಲದಿಶಷ್ಟಂ ಬಿಂಬಜ್ವಲಿತೋಷ್ಠಮೇಕಮವಲಂಬೇ || ೩ ||
 शम्बरवैरि-शरातिगमम्बुजदल-विपुल-लोचनोदारम् ।
 कम्बुगलमनिलदिष्टम् बिम्ब-ज्वलितोष्ठमेकमवलम्बे ॥ ३॥

ಭಾವಾನುವಾದ :-
ಮನ್ಮಥನ ಬಾಣವನ್ನು ದೂರೀಕರಿಸಿದವನಾಗಿರುವ;ತಾವರೆಯ ದಳಗಳನ್ನು ಹೋಲುವ ವಿಶಾಲವಾದ ಕಣ್ಣುಗಳಿಂದ ಕೂಡಿ ಉದಾರ ಚರಿತನಾಗಿರುವ ; ಶಂಖಾಕಾರದ ಕೊರಳನ್ನು ಹೊಂದಿರುವ;ಆ ವಾಯು ದೇವನಿಗೆ ಭಾಗ್ಯವನ್ನು ತಂದುಕೊಟ್ಟ; ತೊಂಡೆಯ ಹಣ್ಣಿನ ತೆರದ ಕಾಂತಿಯುಕ್ತ ತುಟಿಯನ್ನು ಹೊಂದಿದ ಆ ಅಂಜನೇಯನನ್ನು ಮಾತ್ರಾ ನಾನು ಆಶ್ರಯಿಸುವೆನು. || ೩ ||

ದೂರೀಕೃತಸೀತಾರ್ತಿ:ಪ್ರಕಟೀಕೃತರಾಮ ವೈಭವಸ್ಪೂರ್ತಿ: |
ದಾರಿತ ದಶಮುಖಕೀರ್ತಿ:ಪುರತೋ ಮಮ ಭಾತು ಹನುಮತೋ ಮೂರ್ತಿ: || ೪ ||
 दूरीकृत-सीतार्तिः प्रकटीकृत-रामवैभव-स्फूर्तिः ।
 दारित-दशमुख-कीर्तिः पुरतो मम भातु हनुमतो मूर्तिः ॥ ४॥

ಭಾವಾನುವಾದ :-
ಜಾನಕೀದೇವಿಯ ವ್ಯಥೆಯನ್ನು ದೂರಮಾಡಿದ; ಶ್ರೀ ರಾಮಚಂದ್ರನ ವೈಭವದ ಸ್ಪೂರ್ತಿಯನ್ನು ಲೋಕಕ್ಕೆ ಪ್ರಕಟಗೊಳಿಸಿದ; ದಶಮುಖ ರಾವಣನ ಕೀರ್ತಿಯನ್ನು ಹರಣ ಮಾಡಿದ ಆ ಹನುಮಂತನ ಮೂರ್ತಿಯು ಯಾವಾಗಲೂ ನನ್ನೆದುರಿನಲ್ಲಿ ಶೋಭಿಸಲಿ || ೪ ||

ವಾನರನಿಕರಾಧ್ಯಕ್ಷಂ ದಾನವಕುಲಕುಮುದರವಿಕರಸದೃಶಂ |
ದೀನಜನಾವನದೀಕ್ಷಂ ಪವನತಪ:ಪಾಕಪುಂಜಮದ್ರಾಕ್ಷಂ || ೫ ||
 वानर-निकराध्यक्षं दानवकुल-कुमुद-रविकर-सदृशम् ।
 दीन-जनावन-दीक्षं पवन तपः पाकपुञ्जमद्राक्षम् ॥ ५॥

ಭಾವಾನುವಾದ :-
ವಾನರ ಸೈನ್ಯಕ್ಕೆ ಅಧಿನಾಯಕನಾಗಿ; ದೈತ್ಯಕುಲವೆಂದು ಹೇಳುವ ನೈದಿಲೆಗಳಿಗೆ ಸೂರ್ಯನ ಕಿರಣವಾಗಿ ನಾಶ ಮಾಡಿದ; ದೀನ ಜನರನ್ನು ರಕ್ಷಿಸುವುದರಲ್ಲಿ ದೀಕ್ಷಾಬಧ್ಧನ ತೆರದಿ ಆಸಕ್ತಿ ಹೊಂದಿದ್ದ; ಆ ವಾಯುದೇವರ ತಪ್ಪಸ್ಸಿನ ಸಿಧ್ಧಿಗಳ ಸಮೂಹ ರೂಪವೇ ಆಗಿರುವ ಆ ಆಂಜನೇಯ ಸ್ವಾಮಿಯನ್ನು ನಾನು ದರ್ಶನ ಮಾಡಿದೆನು. || ೫ ||

ಏತತ್ಪವನಸುತಸ್ಯ ಸ್ತೋತ್ರಂ ಯ: ಪಠತಿ ಪಂಚರತ್ನಾಖ್ಯಂ ||
ಚಿರಮಿಹ ನಿಖಿಲಾನ್ಭೋಗಾನುಂಕ್ತ್ವಾ ಶ್ರೀರಾಮ ಭಕ್ತಿ ಭಾಗ್ಭವತಿ || ೬ ||
 एतत्-पवन-सुतस्य स्तोत्रं
      यः पठति पञ्चरत्नाख्यम् ।
 चिरमिह-निखिलान् भोगान् भुङ्क्त्वा
      श्रीराम-भक्ति-भाग्-भवति ॥ ६॥

ಭಾವಾನುವಾದ :-
ಈ ಪಂಚರತ್ನ ಸ್ತೋತ್ರಂಗಳನ್ನು ಯಾರು ಪಠಣ ಮಾಡುವರೋ ಅವರು ಬಹುಕಾಲ ಈ ಲೋಕದ ಭೋಗಭಾಗ್ಯಂಗಳನ್ನು ಅನುಭವಿಸಿ ಭಗವಾನ್ ಶ್ರೀ ರಾಮಚಂದ್ರನ ಭಕ್ತಿಗೆ ಭಾಜನರಾವರು. || ೬ ||
*********************************************************************************
  ||ಇತಿ ಶ್ರೀ ಹನುಮತ್ಪಂಚರತ್ನಮ್|| || इति श्री हनुमत्-पञ्चरत्नं सम्पूर्णम् ||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ