Posts

Showing posts from November, 2016

ಮಾರ್ಜನೆ

    ಮಾರ್ಜನೆಯೆಂದರೆ ತೊಳೆಯುವದೆಂದರ್ಥ - ಈ ಮಂತ್ರಗಳನ್ನು ಉಚ್ಚರಿಸುತ್ತಾ ಮಂತ್ರಾರ್ಥವನ್ನು ಮನಸ್ಸಿನಲ್ಲಿ ತಂದುಕೊಂಡು ಮಂತ್ರಪೂತವಾದ ಜಲವನ್ನು ಪ್ರೋಕ್ಷಣ ಮಾಡಿಕೊಳ್ಳುವದರಿಂದ ಪ್ರತಿದಿನವೂ ದೇಹಶುದ್ಧಿಯಾಗುವದರಿಂದ ಈ ಸಂಸ್ಕಾರವನ್ನುಂಟು ಮಾಡುವ ಇವುಗಳಿಗೆ ಮಾರ್ಜನೆಯ ಮಂತ್ರಗಳೆಂಬ ಹೆಸರು ಬಳಕೆಯಲ್ಲಿದೆ.     ಇವುಗಳಿಗೆ "ಆಪೋಹಿಷ್ಠಾ" ಎಂಬ ಮಂತ್ರವು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಈ ನಾಲ್ಕರಲ್ಲಿಯೂ ಇರುವದು. ಈ ಮಂತ್ರದ ತಾತ್ಪರ್ಯವೇನೆಂದರೆ "ಎಲೈ ನೀರುಗಳೆ, ನೀವು ಸುಖಕ್ಕೆ ಕಾರಣವಾಗಿರುವಿರಿ, ನಮಗೆ ಅನ್ನವನ್ನು ಕೊಡಿರಿ, ಹೆಚ್ಚಿನ ರಮಣೀಯ ಜ್ಞಾನವನ್ನು ಕೊಡಿರಿ, ನಿಮ್ಮಲ್ಲಿರುವ ಆನಂದಕರವಾದ ರಸವನ್ನು ಪ್ರೇಮವುಳ್ಳ ತಾಯಿಯರು ಮಕ್ಕಳನ್ನು ಸ್ತನ್ಯಪಾನವನ್ನು ಕೊಟ್ಟು ಕಾಪಾಡುವಂತೆ, ನಮಗೆ ದೊರಕಿಸಿರಿ, ಯಾವ ರಸದಲ್ಲಿರುವದರಿಂದ ನೀವು ಪರಮಾನಂದ ಭರಿತರಾಗುವಿರೋ ಆ ರಸಕ್ಕಾಗಿ ನಿಮ್ಮನ್ನು ಆದರ ಪೂರ್ವಕವಾಗಿ ಸಮೀಪಿಸಿರುವೆನು. ಎಲೈ ನೀರುಗಳೇ, ನೀವು ನಮ್ಮನ್ನು ವಂಶವರ್ಧಕರನ್ನಾಗಿ ಮಾಡಿರಿ".     ಪರಮಾತ್ಮನು ಸರ್ವವ್ಯಾಪಿಯೆಂದು ವೇದದಲ್ಲಿ ಎಷ್ಟೋ ಕಡೆಗಳಲ್ಲಿ ತಿಳಿಸಿರುತ್ತದೆಯೆಷ್ಟೆ: ಅಂಥ ಪರಮಾತ್ಮನ ಅನುಗ್ರಹದಿಂದಲೇ ನಮಗೆ ಸುಖವು ದೊರಕಬೇಕು. ನಾವು ತಿನ್ನುವ ಆಹಾರವು ಪ್ರಾಣ, ಜಲ, ತಪಸ್ಸು, ಶ್ರದ್ಧಾ, ಮೇಧಾ ಮುಂತಾದವುಗಳ ವೃದ್ಧಿಯ ಕ್ರಮದಿಂದ ಉತ್ತಮವಾದ ಜ್ಞಾನಕ್ಕೆ ಕಾರಣವಾಗಬೇಕಾದರೆ ಆತನ ಅನುಗ್ರಹವ

ಶ್ರೀ ವಿಷ್ಣು ಸಹಸ್ರನಾಮ ಮಹಿಮೆ

ಓಂ || ಸಹಸ್ರಮೂರ್ತೇಃ ಪುರುಷೋತ್ತಮಸ್ಯ ಸಹಸ್ರನೇತ್ರಾನನಪಾದಬಾಹೋಃ | ಸಹಸ್ರನಾಮ್ನಾಂ ಸ್ತವನಂ ಪ್ರಶಸ್ತಂ ನಿರುಚ್ಯತೇ ಜನ್ಮಜರಾದಿಶಾಂತ್ಯೈ ||     ಶ್ರೀ ವಿಷ್ಣುಸಹಸ್ರನಾಮಗಳಿಗೆ ಭಾಷ್ಯವನ್ನು ರಚಿಸಲು ಆರಂಭಿಸುವಾಗ ಶ್ರೀಶಂಕರ ಭಗವತ್ಪಾದರು ಮೇಲಿನ ಶ್ಲೋಕವನ್ನು ಉದ್ಧರಿಸಿದ್ದಾರೆ. ಇಲ್ಲಿ ಸಹಸ್ರ - ಎಂಬ ಶಬ್ದಕ್ಕೆ ಸಂಖ್ಯಾವಾಚಕತ್ವವಿಲ್ಲ. ಅನಂತ ಎಂದರ್ಥ, ಭಗವಂತನ ಆಕಾರಗಳು, ಅವಯವಗಳು ಇಂದ್ರಿಯಗಳು ಇತ್ಯಾದಿ ಸಗುಣಸಾಕಾರರೂಪಗಳು ಅನಂತವಾಗಿವೆ ಆತನನ್ನು ಎಷ್ಟು ನಾಮಗಳಿಂದ ಕೊಂಡಾಡಿದರೂ ಅಲ್ಪವೇ ಆದ್ದರಿಂದಲೇ ಶ್ರುತಿಯು 'ಮಾತುಗಳಾಗಲಿ, ಮನಸ್ಸಾಗಲಿ ಭಗವಂತನನ್ನು ಮುಟ್ಟದೆ ಹಿಂದಿರುಗುವವು' ಎನ್ನುತ್ತದೆ. ಸ್ಮೃತಿಪುರಾಣಗಳಲ್ಲಿ ಹೀಗೆಂದಿದೆ: 'ಆಕಾಶವನ್ನೆಲ್ಲ ಬಾಣಗಳಿಂದ ತುಂಬಲು ಹೊರಟವನು ತನ್ನ ಬಾಣಗಳೆಲ್ಲ ಪೂರೈಸಿದ್ದರಿಂದ ಹಿಂದಿರುಬಹುದೇ ಹೊರತು ಆಕಾಶದಲ್ಲಿ ಸ್ಥಳವಿಲ್ಲ - ಎಂದೇನೂ ಅಲ್ಲ, ಹಾಗೆಯೇ ಭಗವಂತನನ್ನು ಸ್ತುತಿಸಲು ಹೊರಟವನು ತನ್ನ ಮಾತುಗಳೆಲ್ಲ ಪೂರೈಸಿದ್ದರಿಂದ ಹಿಂದಿರುಗಬೇಕೆ ಹೊರತು ಭಗವಂತನ ಗುಣಗಳನ್ನೆಲ್ಲ ಸ್ತುತಿಮಾಡಿ ಪೂರೈಸಿದ್ದರಿಂದಲ್ಲ". ಹೀಗೆ ಅನಂತಕಲ್ಯಾಣಗುಣಸಂಪನ್ನನಾದ, ಪುರುಷೋತ್ತಮನಾದ, ಸಹಸ್ರಾರು ನೇತ್ರಗಳು, ಮುಖಗಳು, ಪಾದಗಳುಳ್ಳ ಭಗವಂತನ ದಿವ್ಯನಾಮಗಳೂ ಸಹಸ್ರ-ಸಹಸ್ರ ಸಂಖ್ಯಾಕವಾಗಿವೆ. ಇವುಗಳನ್ನು ಯಥಾಶಕ್ತಿಯಾಗಿ ಸ್ತುತಿಮಾಡುವದೆಂಬುದು ಜಗತ್ತಿನ ಸ್ಥಿತಿಕಾರಣವಾದ ಪ್ರವೃತ್ತಿನಿವೃತ್ತಿರೂ

ಕನಕದಾಸರ ಮೋಹನತರಂಗಿಣಿ

    ಕನಕದಾಸರ ಪ್ರಾರಂಭದ ಕೃತಿ ಭೋಗಮೂಲವಾದ ಶೃಂಗಾರವೇ ವಸ್ತು ಇದು ಭಕ್ತಿ ಸಾಹಿತ್ಯ ಪರಂಪರೆಗೆ ಸೇರಿದ್ದಲ್ಲ 42 ಸಂಧಿಗಳಿವೆ ಸಾಂಗತ್ಯಗಳಿರುವುದು 2700 ಇದರ ಇನ್ನೊಂದು ಹೆಸರು ಕೃಷ್ಣಚರಿತೆ ಶ್ರೀ ಕೃಷ್ಣರುಕ್ಮಿಣಿ ರತಿಮನ್ಮಥ ಉಷಾಅನಿರುದ್ಧರ ಪ್ರೇಮಗಥೆಯನ್ನು ದಾಸರು ಅತ್ಯಂತ ಸೊಗಸಾಗಿ ನಿರೂಪಿಸಿದ್ದಾರೆ.     ದೈವೀಪಾತ್ರಗಳನ್ನು ಶೃಂಗಾರಕಾವ್ಯಗಳಲ್ಲಿ ಜೀವಂತವಾಗಿರಿಸಿದ ಶ್ರೇಯಸ್ಸು ಇವರದ್ದು, ಮೋಹನತರಂಗಿಣಿಗೆ ಕಥಾ ವಸ್ತುವನ್ನು ಆಯ್ದುಕೊಂಡಿರುವುದು ಮಹಾಭಾರತ ಭಾಗವತ ಮತ್ತು ಪುರಾಣಗಳಿಂದ ವಿಜಯನಗರದ ಸಮಕಾಲೀನ ಜೀವನವನ್ನು ನಮ್ಮ ಕಣ್ಮುಂದೆ ಪೌರಾಣಿಕ ಪಾತ್ರಗಳ ಹಿನ್ನೆಲೆಯಲ್ಲಿ ಇರಿಸಿರುವುದರಿಂದ ಅವರನ್ನು ಅಕಾಲದ ಚರಿತ್ರೆಕಾರರ ಸಾಲಿಗೆ ಸೇರಿಸಿದೆ ವಿಜಯನಗರದ ಸಾಮ್ರಾಜ್ಯದ ಸುವರ್ಣ ಯುಗದಲ್ಲಿ ಈ ಕೃತಿ ರಚಿಸಿಸ್ಪಟ್ಟಿತು ಎಂಬುದು ಗಮನಿಸಬೇಕಾದ ಸಂಗತಿ.     ಮೋಹನತರಂಗಿಣಿಯಲ್ಲಿನ ಶ್ರೀ ಕೃಷ್ಣನ ದ್ವಾರಕೆ ಮತ್ತು ವಿದೆ ಶ್ರೀಪ್ರವಾಸಿಗಳ ವಿಜಯನಗರದ ವರ್ಣನೆ ಇವುಗಳಲ್ಲಿನ ಸಾಮ್ಯತೆಯನ್ನು ನಾವು ಗುರುತಿಸಬಹುದು. ಪುರಾಣಪುರುಷ ಶ್ರೀ ಕೃಷ್ಣನ್ನು ವಿಜಯನಗರದ ಶ್ರೀಕೃಷ್ಣದೆ ವರಾಯನೊಂದಿಗೆ ಕಾವ್ಯದಲ್ಲಿ ಹೋಲಿಸಿದ್ದಾರೆ ಶ್ರೀಕೃಷ್ಣದೇವರಾಯನನ್ನು ಸ್ತುತಿಸಲೆಂದೇ ಕನಕದಾಸರು ಮೋಹನತರಿಂಗಿಣಿ ರಚಿಸಿದರೆಂದು ಹೇಳುವವರಿದ್ದಾರೆ ಡಾ. ಜಿ ವರದರಾಜರಾವ್ ಅವರು ಪೌರಾಣಿಕವಾದ ಕಥಾವಸ್ತುವನ್ನು ಜನಪ್ರಿಯವಾದ ಧಾಟಿಯಲ್ಲಿ ಕಾವ್ಯಮಯವಾದ ಶೈಲಿಯಲ್ಲಿ ನಿರೂಪಿಸಿರು

ಉತ್ಥಾನದ್ವಾದಶಿ

    ಕಾರ್ತಿಕಮಾಸದಲ್ಲಿ ಬರುವ ಹಬ್ಬಗಳ್ಲಲ್ಲಿ ಉತ್ಥಾನದ್ವಾದಶಿಗೆ ಒಂದು ವೈಶಿಷ್ಟ್ಯವಿದೆ. ಸಾಂಪ್ರದಾಯಿಕರು ಕಾರ್ತಿಕ ಶುಕ್ಲ ದ್ವಾದಶಿಯಂದು ಈ ಹಬ್ಬವನ್ನು ಆಚರಿಸುತ್ತಾರೆ. ಆ ದಿನ ಭಗವಾನ್ ಮಹಾವಿಷ್ಣುವು ಕ್ಷೀರಸಾಗರದಲ್ಲಿ ಮಲಗಿದ್ದವನು ಎದ್ದು ಬೃಂದಾವನಕ್ಕೆ ದಯಮಾಡಿಸಿದನೆಂದೂ ಭಕ್ತರಿಗೆಲ್ಲ ದರ್ಶನವನ್ನಿತ್ತನೆಂದೂ ಪುರಾಣಗಳಲ್ಲಿ ಬರೆದಿದೆ. ವಿಶೇಷವಾಗಿ ಆ ದಿನ ತುಳಸೀಗಿಡದ ಬುಡದಲ್ಲಿ ನೆಲ್ಲಿಯ ಮರದ ರೆಂಬೆಯನ್ನು ನೆಟ್ಟು ಶ್ರೀಕೃಷ್ಣಭಗವಂತನನ್ನು ಸ್ಥಾಪಿಸಿ ಹಗಲು ತುಲಸೀ-ಧಾತ್ರೀಸಹಿತನಾದ ಭಗವಂತನಿಗೆ ಪೂಜೆಯನ್ನು ಮಾಡುವದು, ರಾತ್ರಿಯಲ್ಲಿ ಪುನಃ ಅರ್ಚನೆಮಾಡಿ ಕ್ಷೀರಾಬ್ಧಿಪೂಜೆಯೆಂಬ ವಿಶೇಷೋತ್ಸವವನ್ನೂ ನಡೆಸುವದು ರೂಢಿಯಲ್ಲಿದೆ.     ಭಗವಂತನಿಗೆ ಎಚ್ಚರವಾಗಲಿ, ನಿದ್ರೆಯಾಗಲಿ ಇಲ್ಲವೆಂದು ಅವಸ್ಥಾನತ್ರಯಗಳನ್ನೂ ಮೀರಿದ ತುರೀಯನೆಂದೂ ಅವಸ್ಥೆಯೆಂದೂ ಉಪನಿಷತ್ತುಗಳಲ್ಲಿ ವರ್ಣಿಸಿರುತ್ತದೆ. ಆದ್ದರಿಂದ ಆಷಾಢ ಶುಕ್ಲ ದ್ವಾದಶಿ (ಶಯನದ್ವಾದಶಿ)ಯಂದು ಮಲಗಿದ್ದ ಭಗವಂತನನ್ನು ಈ ದಿನ ಎಬ್ಬಿಸುವದೆಂಬ ಪುರಾಣಗಳ ಕಲ್ಪನೆಗೆ ನಿಜವಾದ ಅಭಿಪ್ರಾಯವೇನು? ಎಂದು ಈಗ ಆಲೋಚಿಸಬಹುದಾಗಿದೆ. ವೇದಗಳ ಅರ್ಥವನ್ನು ಇತಿಹಾಸಪುರಾಣಗಳಿಂದಲೇ ವಿವರವಾಗಿ ತಿಳಿಯಬೇಕೆಂಬ ನಿಯಮದಂತೆ ಏನೋ ಒಂದು ವಿಶೇಷವನ್ನಿಟ್ಟೇ ಋಷಿಗಳು ಈ ಹಬ್ಬವನ್ನು ಆಚರಿಸಿರಬೇಕು.     ನಮಗೆ ತಿಳಿದಂತೆ ಉಪನಿಷತ್ಪ್ರತಿಪಾದ್ಯನಾದ ಭಗವಂತನಿಗೆ ನಿದ್ರೆಯೆಂದರೆ ಈ ದೇಹೇಂದ್ರಿಯಗಳ ಸಂಘಾತದಲ್ಲಿ ಬೆರೆತು

ಪಿತೃಯಜ್ಞ

    ಈಗಿನ ಕಾಲಕ್ಕೆ ಯಾವ ಆಶ್ರಮಧರ್ಮವನ್ನೂ ಕರ್ಮಗಳನ್ನೂ ತೃಪ್ತಿಕರವಾಗಿ ಶಾಸ್ತ್ರೀಯವಾಗಿ ನಡೆಸಲಾಗುವದಿಲ್ಲ, ಏಕೆಂದರೆ ಈಗಿನ ಜನಸಮಾಜದವರ ಮನೋಭಾವವು ಧಾರ್ಮಿಕವಿಷಯಗಳಲ್ಲಿ ತಿರಸ್ಕಾರ ಹಾಗೂ ಅಜ್ಞಾನಭೂಯಿಷ್ಠವಾಗಿರುವದೇ ಕಾರಣ, ಇಡಿಯ ಸಮಾಜವೇ ಸಹಕರಿಸದಿದ್ದರೂ ಮುಕ್ಕಾಲು ಭಾಗದಷ್ಟು ಜನರಾದರೂ ಧಾರ್ಮಿಕರಾಗಿದ್ದು, ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶಗಳು ಸಹಕಾರಿಗಳಾಗದಿದ್ದರೂ ಅವಿರೋಧಿಗಳಾಗಿ ಸಮಾಜದ ಧಾರ್ಮಿ ಆಚರಣೆಗಳ ಬಗ್ಗೆ ಹಸ್ತಕ್ಷೇಪಮಾಡದೆ ಇದ್ದರೆ ಮಾತ್ರ ಪ್ರತಿಯೊಬ್ಬ ಆಶ್ರಮಿಯೂ ತನ್ನ ಧರ್ಮವನ್ನು ಆಚರಿಸುತ್ತಾ ಕಾಪಾಡಿಕೊಳ್ಳಬಹುದಾಗಿದೆ. ಆದರೆ ಈಗಾಗಲಿ, ಮುಂದೆ ಸದ್ಯದ ಭವಿಷ್ಯದಲ್ಲಾಗಲಿ ಅಂಥ ಸ್ಥಿತಿಯು ಒದಗಲಾರದೆಂದೇ ಹೇಳಬೇಕಾಗಿದೆ. ಧರ್ಮಪ್ರಿಯರಿಗೆ ಇನ್ನುಳಿದಿರುವ ದಾರಿಯೆಂದರೆ ಬಹಿರಂಗದ ಆಚಾರ-ನಿಷ್ಠೆಗಳನ್ನು ಲೆಕ್ಕಿಸದೆ ಅಂತರಂಗದಲ್ಲೇ ಧರ್ಮದ ಚಿಲುಮೆಯನ್ನು ಎಬ್ಬಿಸಿಕೊಂಡು ಮಾನಸಿಕವಾಗಿ ಕರ್ಮಗಳನ್ನು ಆಚರಿಸುತ್ತಾ ಮನಸ್ಸಮಾಧಾನವನ್ನು ತಂದುಕೊಳ್ಳುವದೇ ಆಗಿದೆ ಆದರೂ ಹಿಂದಿನ ಕಾಲಕ್ಕೆ ಸದಾಚಾರಗಳ ಮತ್ತು ದೇವಪಿತೃಕರ್ಮಗಳ ಕಟ್ಟುಪಾಡುಗಳು ಹೇಗಿತ್ತು? ಎಂಬಿದನ್ನು ತಿಳಿಯಲು ಧರ್ಮಶಾಸ್ತ್ರಗಳನ್ನು ಜಿಜ್ಞಾಸೆಮಾಡಬಹುದು. ಆದರೆ ಇದು ಆತ್ಮತೃಪ್ತಿಗೇ ಹೊರತು ಪರೋಪದೇಶಕ್ಕಲ್ಲ - ಎಂಬಿದನ್ನು ಮರೆಯಬಾರದು.     ಪಂಚಮಹಾಯಜ್ಞಗಳಲ್ಲಿ ವೈಶ್ವದೇವವನ್ನು ವಿವರಿಸಿದ ಅನಂತರ ಈಗ ಪಿತೃ ಯಜ್ಞವನ್ನು ತಿಳಿಸಲಾಗುವದು, ಇದು ಕೂಡ ಶ್ರೌತಕರ್ಮವೆನಿಸು