Posts

Showing posts from December, 2016

ಲಲಿತಾ ತ್ರಿಶತೀ - 10. ಓಂ ಕದಂಬಕಾನನಾವಾಸಾಯೈ ನಮಃ

    ಕದಂಬವೆಂಬ ಹೆಸರಿನ ಕಲ್ಪವೃಕ್ಷದಿಂದ ಕೂಡಿದ ವನದಲ್ಲಿ ವಾಸಿಸುವವಳು ಎಂದು ಅರ್ಥವು, "ಕದಂಬಯುಕ್ತಂ ಕಾನನಂ, ತತ್ರ, ವಾಸೋಯಸ್ಯಾಃ" ಎಂದು ವಿಗ್ರಹವನ್ನಿಟ್ಟುಕೊಳ್ಳಬೇಕು. (ಮುಂದುವರೆಯುವುದು...)

ಲಲಿತಾ ತ್ರಿಶತೀ - 9. ಓಂ ಕರುಣಾಮೃತಸಾಗರಾಯೈ ನಮಃ

    ಕರುಣಾಮೃತ ಸಾಗರಾ ಕೃಪೆಯಿಂದ ಭಕ್ತರಿಗೆ ದೊರಕುವ ಮೋಕ್ಷವೆಂಬ ಅಮೃತಕ್ಕೆ ಸಮುದ್ರ ರೂಪಳು, ಅಮೃತ ಸಮುದ್ರದಿಂದ ಮೇಘವು ಅಮೃತವನ್ನು ಪಾನಮಾಡಿ ಸಕಾಲದಲ್ಲಿ ವೃಷ್ಟಿಯನ್ನು ಕೊಟ್ಟು ಜಗತ್ತನ್ನು ಸಂಜೀವನ ಗೊಳಿಸುವುದು. ಹೀಗೆ ಮೇಘದ ಮೂಲಕ ಜಗತ್ತಿನ ಸಂಜೀವನಕ್ಕೆ ಅಮೃತ ಸಮುದ್ರವು ಕಾರಣವಾಗುವುದು ಅದರಂತೆ ದೇವಿಯು "ಬ್ರಹ್ಮವಿದಾಪ್ನೋತಿ ಪರಮ್" "ಬ್ರಹ್ಮ ವೇದ ಬ್ರಹ್ಮೈವ ಭವತಿ" ಎಂಬ ಶ್ರುತ್ಯನುಸಾರವಾಗಿ ಅಮೃತ ಬ್ರಹ್ಮ ಸ್ವರೂಪಳಾಗಿರುವಳು ಮತ್ತು ಆಯಾಯ ಅಧಿಕಾರಿಗಳು ಶಾಸ್ತ್ರ ಪ್ರಮಾಣದಿಂದ ಮಾಡುವ ಕರ್ಮ-ಉಪಾಸನೆಗಳಿಂದ ಪ್ರಸನ್ನರಾದ ಆಯಾಯ ದೇವತೆಗಳು ಸ್ವಭಕ್ತರಿಗೆ ಕೊಡುವ ಫಲಗಳೆಂಬ ಅಮೃತಕ್ಕೆ ಸಾಗರ ಸ್ವರೂಪಳಾಗಿರುವಳು ಎಂದು ಸಾಗರದ ಉಪಮೆಯಿಂದ ತಿಳಿಯುವುದು. "ಲಭತೇ ಚ ತತಃ ಕಾಮಾನ್ ಮಯೈವ ವಿಹಿತಾನ್ ಹಿ ತಾನ್" ಎಂಬ ಭಗವದುಕ್ತಿಯಿಂದ ಸಮಸ್ತ ದೇವತಾರಾಧನದಿಂದ ಹೊಂದುವ ಫಲ ಪ್ರಾಪ್ತಿಯು ಭಗವದಾಯತ್ತವಾದುದೆಂದು ತಿಳಿಯುವುದು. ಕರುಣೆಯೆಂದರೆ ಭಕ್ತರ ವಿಷಯದಲ್ಲಿ ರಕ್ಷಣೀಯರೆಂಬ ಬುದ್ಧಿಯು ಇದು ಅಮೃತದಂತೆ ಸರ್ವ ಸಂಜೀವನ್ನುಂಟುಮಾಡುವುದು. ಜಲಕ್ಕೆಲ್ಲ ಸಾಗರವೇ ಗತಿಯಾಗಿರುವಂತೆ ಇಂತಹ ಕರುಣಾಮೃತಕ್ಕೆ ದೇವಿಯು ಒಬ್ಬಳೇ ಆಶ್ರಯವು ಆದ್ದರಿಂದ ಸಾಗರ ಸ್ವರೂಪಳು ಅಥವಾ ತನ್ನ ಕೃಪಾ ವಿಶೇಷದಿಂದ ಅಮೃತರಾಗಿರುವಂತೆ ಶಾಶ್ವತ ಬ್ರಹ್ಮಲೋಕವನ್ನು ಹೊಂದಿ ಕೀರ್ತಿಯನ್ನು ಗಳಿಸಿರುವ ಸಗರ ರಾಜಪುತ್ರರುಳ್ಳವಳು ಅಥವಾ ಕರುಣೆಯಿಂದ ಅ

ಲಲಿತಾ ತ್ರಿಶತೀ - 8. ಓಂ ಕಲ್ಮಷಘ್ನ್ಯೈ ನಮಃ

    "ಕಲ್ಮಷಾಣಿ ಹಂತಿ" ಪಾಪಗಳನ್ನು ಕಳೆಯುವಳು, ನಾನು ಸಮಸ್ತ ಪಾನಗಳಿಂದ ನಿನ್ನನ್ನು ಬಿಡಿಸುತ್ತೇನೆಂದು "ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ" ಎಂಬ ಭಗವದ್ಗೀತಾ ವಚನವು ಇರುವುದು ಇದರಿಂದ ದೇವಿಯಲ್ಲಿ ಪಾಪ ಮೋಚನ ಶಕ್ತಿಯು ಕಂಡು ಬರುವುದು ಅಥವಾ ವೇದಾಂತ ಮಹಾ ವಾಕ್ಯದಿಂದ ಉಂಟಾದ ತತ್ತ್ವಜ್ಞಾನವೆಂಬ ಬ್ರಹ್ಮವಿದ್ಯೆಯು "ನ ಸ ಪಾಪಂ ಶ್ಲೋಕಂ ಶೃಣೋತಿ ಜ್ಞಾನಾಗ್ನಿಃ ಸರ್ವ ಕರ್ಮಾಣಿ ಭಸ್ಮ ಸಾತ್ಕುರುತೇಂರ್ಜುನ" ಎಂಬ ಶ್ರುತಿಸ್ಮೃತಿಗಳಲ್ಲಿ ಹೇಳಿದಂತೆ ಪಾಪಗಳನ್ನು ಭಸ್ಮಮಾಡುವುದು. ಆದ್ದರಿಂದ ವಿದ್ಯಾಸ್ವರೂಪಿಣೀಯಾದ ದೇವಿಯು ಕಲ್ಮಷಘ್ನಿಯಾಗಿರುವಳು. (ಮುಂದುವರೆಯುವುದು...)

ಗೀತಜಯಂತಿ

ಶ್ರೀಕೃಷ್ಣ ಅರ್ಜುನನಿಗೆ ೫೦೦೦ ವರ್ಷಗಳ ಹಿಂದೆ ಗೀತೋಪದೇಶ ಮಾಡಿದ. ಈ ಮಾತೇನೋ ನಿಜ. ಆದರೆ ಗೀತೆ ಸಾವಿರಾರು ವರ್ಷಗಳ ಹಿಂದಿನ ಐತಿಹಾಸಿಕ ಘಟನೆಯಾಗಿ ಮಾತ್ರವೆ ನಮಗೆ ಗ್ರಾಹ್ಯವಲ್ಲ. ಅದು ೫೦೦೦ ವರ್ಷಗಳ ಹಿಂದೆ ಕುರುಕ್ಷೇತ್ರದಲ್ಲಿ ಕೌರವ-ಪಾಂಡವರ ಯುದ್ಧದಲ್ಲಿ ನಡೆದ ಘಟನೆಯಷ್ಟೆ ಅಲ್ಲ. ಅದು ನಮ್ಮದೇ ಇತಿಹಾಸ. ಕುರುಕ್ಷೇತ್ರ ಎಲ್ಲೋ ಉತ್ತರ ಭಾರತದಲ್ಲಿರುವ ಒಂದು ಭೂಭಾಗವಲ್ಲ. ನಮ್ಮೆಲ್ಲರ ಹದಯ-ಕ್ಷೇತ್ರವೆ ಕುರುಕ್ಷೇತ್ರ. ನಮ್ಮ ಕರ್ಮಕ್ಷೇತ್ರವಾದ ನಮ್ಮ ಬದುಕೇ ಕುರುಕ್ಷೇತ್ರ. ನಮ್ಮಳಗೆಯೆ ಮಹಾಭಾರತದ ಯುದ್ಧ ನಡೆಯುತ್ತಿದೆ. ನಮ್ಮಳಗೆಯೆ ಕೌರವ ರಿದ್ದಾರೆ; ಪಾಂಡವರಿದ್ದಾರೆ! ಹದಿನೆಂಟು ಅಕ್ಷೋಹಿಣಿ ಸೇನೆಗಳಿವೆ. ನಮ್ಮೊಳಗಿನ ದುರ್ಯೋಧನ ಇನ್ನೊಬ್ಬರ ಆಸ್ತಿಯನ್ನು ಲಪಟಾಯಿಸು ಎನ್ನುತ್ತಿರು ತ್ತಾನೆ. ನಮ್ಮೊಳಗಿನ ದುಃಶಾಸನ ಪರಸ್ತ್ರೀಯರ ಮೇಲೆ ಕೈಮಾಡಲು ಹಾತೊರೆಯು ತ್ತಿರುತ್ತಾನೆ. ನಮ್ಮೊಗಿನ ವಿಕರ್ಣ ಸಜ್ಜನಿಕೆಯ ಮುಖವಾಡದ ಮಾತುಗಳನ್ನಾಡುತ್ತ ನಮ್ಮೊಳಗಿನ ಹುಳುಕನ್ನು ಮುಚ್ಚಿಡಲು ಪ್ರಯತ್ನಿಸುತ್ತಾನೆ. ಸಾವಿರಸಾವಿರ ದುಷ್ಟವೃತ್ತಿಗಳು ಇದನ್ನು ಆಗಗೊಡಲು ನಮ್ಮಳಗೆ ಶಸ್ತ್ರ ಹಿಡಿದು ಸಜ್ಜಾಗಿ ನಿಂತಿವೆ. ಇಂಥವರ ನಡುವೆಯೂ ನಮ್ಮೊಳಗಿನ ಧರ್ಮರಾಜ ‘ಛೇ, ಹೀಗೆಲ್ಲ ಮಾಡಬೇಡ’ ಎನ್ನುತ್ತಿರುತ್ತಾನೆ. ಭೀಮಾರ್ಜುನರು ‘ಇದರ ವಿರುದ್ಧ ಹೋರಾಡು’ ಎನ್ನುತ್ತಿರು ತ್ತಾರೆ. ನಕುಲ ‘ಶೀಲ ಕಳೆದುಕೊಂಡು ಕೆಟ್ಟ ಬಾಳು ಬದುಕಬೇಡ’ ಎಂದು ಎ

ಧನುರ್ಮಾಸ

ಕೋದಂಡಸ್ತೇ ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ | ಸಹಸ್ರವಾರ್ಷೀಕೀಪೂಜಾ ದಿನೇನೈಕೇನ ಸಿದ್ಧ್ಯತಿ || ಆಗ್ನಿ ಪುರಾಣ ಧನುರಾಶಿಯಲ್ಲಿ ಸೂರ್ಯನಿರುವಾಗ ಹರಿಗೆ ಹುಗ್ಗಿಯನ್ನು ಒಂದು ದಿನವಾದರೂ ಸಮರ್ಪಿಸುವ ಮನುಷ್ಯನು ಒಂದು ಸಾವಿರ ವರ್ಷಗಳವರೆಗೆ ಪೂಜೆಮಾಡಿದ ಫಲವನ್ನು ಪಡೆಯುವನು ಎನ್ನುವ ಅಗ್ನಿ ಪುರಾಣದ ವಚನವಿದೆ. ಆದುದರಿಂದ ಧನುರ್ಮಾಸದ ಒಂದು ತಿಂಗಳ ಕಾಲ ಪ್ರತಿದಿನ ಉಷಃಕಾಲದಲ್ಲಿ ಶ್ರೀಹರಿಗೆಮುದ್ಗಾನ್ನವನ್ನು (ಹುಗ್ಗಿಯನ್ನು) ವಿಷ್ಣುವಿಗೆ ಸಮರ್ಪಿಸಿ ಸಂತರ್ಪಣೆಮಾಡುವುದರಿಂದ ಶ್ರೀಹರಿಯು ಪ್ರೀತನಾಗುವನು. ಧನುರ್ಮಾಸಪೂಜೆಯ ಕಾಲ :- ಮುಖ್ಯಾರುಣೋದಯೇ ಪೂಜಾ ಮಧ್ಯಮಾ ಲುಪ್ತತಾರಕಾ | ಅಧಮಾ ಸೂರ್ಯಸಹಿತಾ ಮಧ್ಯಾಹ್ನೇ ನಿಷ್ಫಲಾ ಭವೇತ್ || ಇಂತಹ ಪೂಜೆಗೆ ಮುಖ್ಯಕಾಲಅರುಣೋದಯ ಕಾಲವು ಉತ್ತಮ, ನಕ್ಷತ್ರಗಳು ಕಾಣದಿರುವಾಗ ಮಾಡುವುದುಮಧ್ಯಮ, ಸೂರ್ಯನು ಉದಯಿಸಿದ ಮೇಲೆ ಮಾಡುವುದು ಅಧಮ.ಮಧ್ಯಾಹ್ನಕಾಲದಲ್ಲಿ ಮಾಡುವುದು ನಿಷ್ಫಲ. ಆದುದರಿಂದ ಈ ಧನುರ್ಮಾಸದಲ್ಲಿ ಭಗವಂತನ ಪೂಜೆಯನ್ನು ಉಷಃಕಾಲದಲ್ಲಿಯೇ ಮಾಡಬೇಕು. ಹೇಗೆನಿತ್ಯದಲ್ಲಿಯೂ ಭಗವಂತನಿಗೆ ಷೋಡೋಶೋಪಚಾರ ಪೂಜೆಯನ್ನು ಸಲ್ಲಿಸಿ, ಭಗವಂತನಿಗೆನೈವೇದ್ಯಾದಿಗಳನ್ನು ಸಮರ್ಪಿಸುತ್ತೇವೆಯೋ ಹಾಗೆಯೇ ಧನುರ್ಮಾದಲ್ಲಿ ವಿಶೇಷವಾಗಿ ಅರುಣೋದಯಕಾಲದಲ್ಲಿಯೇ ಹುಗ್ಗಿಯನ್ನು ಮಾಡಿ ಭಗವಂತನಿಗೆ ಸಮರ್ಪಿಸಬೇಕು.ಹುಗ್ಗಿಯನ್ನು ಹೇಗೆ ಮಾಡಬೇಕೆಂಬುದನ್ನೂ ಪುರಾಣವೇ ತಿಳಿಸುತ್ತಿದೆ, ಹೀಗೆ -

ಲಲಿತಾ ತ್ರಿಶತೀ - 7. ಓಂ ಕಮಲಾಕ್ಷ್ಯೈ ನಮಃ

    ಕಮಲಾಕ್ಷೀ ಶಬ್ದವು "ಕಮಲೆ ಇವ ಅಕ್ಷಿಣೇ ಯಸ್ಯಾಃ ಸಾ" ಎಂದು ವಿಗ್ರಹದಿಂದ ಕಮಲಗಳಂತೆ ನೇತ್ರವುಳ್ಳವಳು ಎಂಬ ಅರ್ಥವನ್ನು ಬೋಧಿಸುವುದು. "ಕಮಲಾಯಾಃ ಅಕ್ಷಿ ಯಸ್ಯಾಂ ಸಾ" ಎಂಬ ಸಮಾಸದಿಂದ ಲಕ್ಷ್ಮೀದೇವಿಯ ಜ್ಞಾನಕ್ಕೆ ಗೋಚರಳು ಎಂಬ ಅರ್ಥವನ್ನು ಸೂಚಿಸುತ್ತಿದೆ. ಇಲ್ಲಿ ಅಕ್ಷಿ ಎಂಬ ಶಬ್ದಕ್ಕೆ ಕಣ್ಣಿಂದ ಹುಟ್ಟುವ ಜ್ಞಾನವೆಂಬ ಅರ್ಥವನ್ನು ಗ್ರಹಿಸಬೇಕು. ಕಮಲಾಯಾ, ಅಕ್ಷಿಣೀ, ಯಸ್ಯಾಃ ಎಂಬ ಸಮಾಸದಿಂದ ಐಹಿಕಾಮುಷ್ಮಿಕ ಭೋಗ ಸಂಪತ್ತಿಗೆ ಕಾರಣವಾದ ದರ್ಶನವುಳ್ಳವಳು ಎಂಬ ಅರ್ಥವನ್ನು ಬೋಧಿಸುವುದು. ದರ್ಶನಮಾತ್ರದಿಂದ ಮಹದೈಶ್ವರ್ಯ ಪ್ರಾಪ್ತಿಯಾಗುವುದೆಂದು ಮೂರನೇ ಅರ್ಥದ ಸಾರವು.  (ಮುಂದುವರೆಯುವುದು...)

ಲಲಿತಾ ತ್ರಿಶತೀ - 6. ಓಂ ಕಲಾವತ್ಯೈ ನಮಃ

    ದೇವಿಯ ಭಕ್ತರ ಧ್ಯಾನಕ್ಕೆ ಗೋಚರವಾಗುವ ದೇವಿಯ ಮೂರ್ತಿಯಲ್ಲಿ ಶಿರಸ್ಸು-ಪಾಣಿ ಮುಂತಾದ ಅವಯವಗಳು, ವಿದ್ಯಾರೂಪವಾದ ಚತುಃ ಷಷ್ಟಿ ಕಲೆಗಳು ಅಥವಾ ಚಂದ್ರಕಲೆ ಇವುಗಳಿರುವುದರಿಂದ ದೇವಿಯು ಕಲಾವತಿ ಎನಿಸಿರುವಳು. (ಮುಂದುವರೆಯುವುದು...)

ಸೌಂದರ್ಯ ಲಹರಿ :ಮಗುಮನಸ್ಸಿನ ಭಕ್ತರಿಗೆ

ಆಚಾರ್ಯ ಶ್ರೀ ಶಂಕರರು ರಚಿಸಿದ ಸಂಸ್ಕೃತ ಸ್ತೋತ್ರಸಾಹಿತ್ಯದ ಪರ್ವತಶ್ರೇಣಿಗಳಲ್ಲಿ ಸೌ೦ದರ್ಯಲಹರಿ ಶಿಖರಪ್ರಾಯದಲ್ಲಿದೆ. ಒಂದೊಂದೂ ತನ್ನ ವೈಶಿಷ್ಟ್ಯವನ್ನು ಮೆರೆಯುತ್ತಿರುವ ಈ ನೂರು ಚೌಪದಿಗಳಲ್ಲಿ, ಮೊದಲ ಪ್ರಾಸ್ತಾವಿಕ ಪದ್ಯಗಳ ಬಳಿಕ, ಸುಂದರ ಭಾವಗೀತೆಯೊಂದು ಹೀಗಿದೆ: ಭವಾನಿ ತ್ವಂ ದಾಸೇ ಮಯಿ ವಿತರ ದೃಷ್ಟಿ೦ ಸಕರುಣಾ- ಮಿತಿ ಸ್ತೋತುಂ ವಾಂಛನ್ ಕಥಯತಿ ಭವಾನಿ ತ್ವಮಿತಿ ಯ: | ತದೈವ ತ್ವಂ ತಸ್ಮೈ ದಿಶಸಿ ನಿಜಸಾಯುಜ್ಯಪದವೀ೦ ಮುಕುಂದಬ್ರಹ್ಮೇಂದ್ರಸ್ಫುಟಮುಕುಟನೀರಾಜಿತಪದಾಮ್||22|| ( 'ಭವಾನಿ, ತ್ವಂ, ದಾಸೇ ಮಯಿ, ವಿತರ ದೃಷ್ಟಿ೦ ಸಕರುಣಾಮ್"- ಇತಿ ಸ್ತೋತುಂ ವಾಂಛನ್, ಕಥಯತಿ- 'ಭವಾನಿ ತ್ವಂ"- ಇತಿ ಯ: | ತದಾ ಏವ ತ್ವಂ ತಸ್ಮೈ ದಿಶಸಿ ನಿಜ-ಸಾಯುಜ್ಯ-ಪದವೀ೦ ಮುಕುಂದ-ಬ್ರಹ್ಮೇಂದ್ರ-ಸ್ಫುಟ-ಮುಕುಟ-ನೀರಾಜಿತ-ಪದಾಮ್||) ಇದಕ್ಕೆ ಅನ್ವಯಾನುಸಾರ ಈ ರೀತಿಯ ಗದ್ಯರೂಪವನ್ನು ಕೊಡಬಹುದು: 'ಭವಾನಿ, ಮಯಿ ದಾಸೇ, ತ್ವಂ, ಸಕರುಣಾಮ್ ದೃಷ್ಟಿ೦ ವಿತರ"- ಇತಿ ಸ್ತೋತುಂ ವಾಂಛನ್, 'ಭವಾನಿ ತ್ವಂ"- ಇತಿ ಯ: ಕಥಯತಿ, ತಸ್ಮೈ ತ್ವಂ ಮುಕುಂದ-ಬ್ರಹ್ಮೇಂದ್ರ-ಸ್ಫುಟ-ಮುಕುಟ-ನೀರಾಜಿತ-ಪದಾಮ್ ನಿಜ-ಸಾಯುಜ್ಯ-ಪದವೀ೦ ತದಾ ಏವ ದಿಶಸಿ|| 'ಅಮ್ಮಾ ದೇವಿ, ನೀನು ನಿನ್ನ ಕರುಣಾಪೂರಿತ ನೋಟವನ್ನು ಈ ದಾಸನ ಮೇಲೆ ಬೀರು!"- ಎಂದು ಹೇಳಲು ಇಚ್ಛಿಸುತ್ತ, ಯಾರಾದರೂ 'ಅಮ್ಮಾ  ನೀನು .. .."- ಎಂದೊಡನೆ,

ಲಲಿತಾ ತ್ರಿಶತೀ - 5. ಓಂ ಕಮನೀಯಾಯೈ ನಮಃ

    "ಕೋ ಹ್ಯೇವಾನ್ಯಾತ್ ಕಃ ಪ್ರಾಣ್ಯಾತ್, ಯದೇಷ ಆಕಾಶ ಆನಂದೋ ನ ಸ್ಯಾತ್" ಎಂಬ ಶ್ರುತಿಯು ಆನಂದ ರೂಪವಾದ ವಸ್ತುವು ಜಗತ್ತಿಗೆ ಪ್ರತಿಷ್ಠಾ ರೂಪವಾಗಿಲ್ಲದಿದ್ದರೆ ಯಾವ ಪ್ರಾಣಿಯು ಚಲನ ಮತ್ತು ನಿಶ್ವಾಸಾದಿ ಕಾರ್ಯವನ್ನು ಆಚರಿಸಬಲ್ಲದು? ಎಂದು ಬೋಧಿಸುತ್ತ ಬ್ರಹ್ಮವನ್ನು ಪರಮಾನಂದ ರೂಪವೆಂದು ತಿಳಿಸಿದೆ. ಆದ್ದರಿಂದ ದೇವಿಯು ಪರಮ ಪ್ರೇಮಾಸ್ಪದಳು ಅಥವಾ ಮನೋಹರವಾದ ಸುಖವನ್ನು ಎಲ್ಲರೂ ಕೋರುತ್ತಿರುವಂತೆ ಮಾಯಾ ಪಾಶಬದ್ಧರಾದ ಜನಗಳು ಸುಖಪ್ರಾಪ್ತಿಗೋಸ್ಕರ ಸ್ವೇಷ್ಟ ದೇವತೆಯ ಪೂಜಾದಿಗಳನ್ನು ಭಕ್ತಿಯಿಂದ ಕೋರುವರು. ಅವರಿಗೆ ಇಷ್ಟ ಫಲವನ್ನು ಕೊಡುವ ದೇವತೆಯಾದ್ದರಿಂದ ಮನೋಹರಳು ಅಥವಾ ತತ್ತ್ವಜ್ಞಾನಿಗಳ ದೃಷ್ಟಿಗೆ ಪರಬ್ರಹ್ಮ ರೂಪಳಾದ ದೇವಿಯು ಆನಂದ ಘನೀಭಾವರೂಪವಾದ ಸುಂದರ ಮೂರ್ತಿಯಿಂದ ಪ್ರತ್ಯಕ್ಷಳಾಗುವುದರಿಂದ ಮನೋಹರಳಾಗಿರುವಳು. (ಮುಂದುವರೆಯುವುದು...)

ಲಲಿತಾ ತ್ರಿಶತೀ - 4. ಓಂ ಕಲ್ಯಾಣಶೈಲನಿಲಯಾಯೈ ನಮಃ

    ಶಿಲೆಗಳ ಘನಾವಸ್ಥಾರೂಪವಾದ ವಿಕಾರವು ಶೈಲವೆನಿಸುವುದು. ದೇವಿಯು ಘನಾಕಾರವನ್ನು ಹೊಂದಿದ ಸುಖವೆಂಬ ಸ್ವಸ್ವರೂಪವಾದ ಕಲ್ಯಾಣ ಶೈಲದಲ್ಲಿ ಇರುವವಳೂ. ಈ ಅರ್ಥವು "ಕಲ್ಯಾಣಶೈಲೇ ಆನಂದಘನೇ ನಿಲತಿ ತಿಷ್ಠತಿ" ಎಂಬ ಸಮಾಸದಿಂದ ಲಭ್ಯವಾಗುವುದು. ಸ್ವಸ್ವರೂಪದಲ್ಲಿ ಪರದೇವತೆಯು ಇರುವಳು ಎಂದು "ಸ ಭಗವಃ ಕಸ್ಮಿನ್ ಪ್ರತಿಷ್ಠಿ ಇತಿ ಸ್ವೇ ಮಹಿಮ್ನಿ" ಎಂಬ ಪ್ರಶ್ನೋತ್ತರ ರೂಪವಾದ ಶ್ರುತಿ ವಾಕ್ಯದಿಂದ ತಿಳಿದುಬರುವುದು. ದೇವ ದತ್ತನು ತನ್ನಲ್ಲಿಯೇ ತಾನು ಇರುವನೆಂಬುದಾಗಿ ಸಾಮಾನ್ಯವಾಗಿ ಲೋಕ ಪ್ರಯೋಗವು ಇರುವಂತೆ ದೇವತೆಯು ಸ್ವಸ್ವರೂಪದಲ್ಲಿ ಇರುವುದೆಂಬುದು ವಿರುದ್ಧವಲ್ಲ ಅಥವಾ ಶಿಲಾವಿಕಾರದಂತೆ ಘನಭಾವ ಹೊಂದಿರುವ ಕಲ್ಯಾಣವು ಕಲ್ಯಾಣಶೈಲವು ಅದು ಆನಂದಮಯ ಕೋಶವು ದೇವಿಯು ಅದನ್ನು ಭವನವನ್ನಾಗಿ ಕಲ್ಪಿಸಿಕೊಂಡಿರುವಳು ಎಂದು ಅರ್ಥವಾಗುವಂತೆ ಕಲ್ಯಾಣ ಶೈಲೋ ನಿಲಯೋ ಯಸ್ಯಾಃ ಎಂದು ಬಹುವ್ರೀಹಿ ಎಂಬ ಸಮಾಸವನ್ನು ಅಂಗೀಕರಿಸುವುದು ವಿರುದ್ಧವಲ್ಲ. ಆನಂದಮಯ ಕೋಶವನ್ನು ಅಧಿಕರಿಸಿ "ಬ್ರಹ್ಮ ಪುಚ್ಫಂ ಪ್ರತಿಷ್ಠಾ" ಎಂಬ ಶ್ರುತಿಯು ಹಿಂದೆ ವಿವರಿಸಿದ ಅರ್ಥವನ್ನು ಸೂಚಿಸುತ್ತಿದೆ ಅಥವಾ ಕಲ್ಯಾಣ ಶೈಲವೆಂದರೆ ಪರ್ವತವು, ಅದು ಗೃಹವಾಗಿರುವವಳು ಈ ಅರ್ಥವು "ಸುಮೇರುಮಧ್ಯಶೃಂಗಸ್ಥಾ" ಎಂಬ ದೇವೀನಾಮದಿಂದ ಪ್ರಸಿದ್ಧವಾಗಿರುವುದು.  (ಮುಂದುವರೆಯುವುದು...)

ಲಲಿತಾ ತ್ರಿಶತೀ - 3. ಓಂ ಕಲ್ಯಾಣಗುಣಶಾಲಿನ್ಯೈ ನಮಃ

    ಕಲ್ಯಾಣ ಶಬ್ದವು ಸುಖಕರ ಎಂಬ ಅರ್ಥವನ್ನು ಬೋಧಿಸುವುದು. ದೇವಿಯ ಸುಖಕರವಾದ ಅಮೋಘಕಾಮ, ಸಂತ್ಯಸಂಕಲ್ಪ, ಸರ್ವಾಆಧಿಪತ್ಯ, ಸರ್ವನಿಯಾಮಕತ್ವ, ಕರ್ಮಫಲದಾತೃತ್ವ, ಸರ್ವಕಾಮಾವಾಪ್ತಿ ಮುಂತಾದ ಸಮಸ್ತ ಗುಣಗಳು ಪ್ರಕಾಶಿಸುವುವು ಅಥವಾ ದೇವಿಯನ್ನು ಆ ಗುಣಗಳು ಪ್ರಕಾಶಪಡಿಸುವುವು ಅಥವಾ ಗುಣಗಳಿಂದ ದೇವಿಯು ಪ್ರಕಾಶಿಸಲ್ಪಡುವಳು ಎಂದು ಕಲ್ಯಾಣ ಗುಣಾಃ ಶಾಲಂತೇ ಅಸ್ಯಾಃ ಇತಿ ಶಾಲಯಂತಿ ಏನಾಮಿತಿ, ಕಲ್ಯಾಣ ಗುಣೈಃ ಶಾಲ್ಯತೇ ಎಂದು ನಾನಾವಿಧದ ವಿಗ್ರಹಗಳಿಂದ ಅರ್ಥವು ತೋರುವುದು. ಇವುಗಳಲ್ಲಿ ಮೊದಲನೆಯ ಎರಡು ಬಗೆಯ ಸಮಾಸಗಳಲ್ಲಿ ದೇವತೆಯು ಸ್ವತಃ ಶುದ್ಧ ಚೈತನ್ಯರೂಪಳೂ ಪರಾಧೀನಗುಣಗಳಿಂದ ಕೂಡಿರುವಳೂ ಎಂದು ಅರ್ಥವಾಗುವುದು, ಮೂರನೆಯ ಎರಡು ಬಗೆಯ ಸಮಾಸಗಳಲ್ಲಿ ದೇವತೆಯು ಸ್ವತಃ ಶುದ್ಧ ಚೈತನ್ಯರೂಪಳೂ ಪರಾಧೀನಗುಣಗಳಿಂದ ಕೂಡಿರುವಳೂ ಎಂದು ಅರ್ಥವಾಗುವುದು, ಮೂರನೆಯ ವಿಗ್ರಹದಲ್ಲಿ ದೇವತೆಯಲ್ಲಿ ಗುಣಗಳ ಸಂಪರ್ಕವು ತೋರುವುದು. ಅದು ಶ್ರುತಿಪ್ರಮಾಣದಿಂದ ಔಪಾಧಿವೆಂದು ಸ್ಥಿರವಾಗಿದ್ದರೂ ಅದನ್ನು ಈ ಸ್ತುತಿಮಾಡುವ ಸಂದರ್ಭದಲ್ಲಿ ಉಲ್ಲೇಖಮಾಡದಿರುವುದು ನ್ಯೂನತಾಕರವಲ್ಲ. ಭೇದ ಬುದ್ಧಿಯಿಂದ ಮಾಡುವ ಸ್ತುತಿಯಲ್ಲಿಯೂ ಗುಣ ಸಂಪರ್ಕವು ಆರೋಪಿತವೆಂದು ಹೇಳುವುದು ದೇವೀಕೃಪಾ ಪ್ರಾಪ್ತಿಗೆ ಹೇತುವಾಗುವುದಾದರೂ ಆ ಗುಣಗಳನ್ನು ಅಪವಾದಮಾಡಿ ಶುದ್ಧ ಚೈತನ್ಯಾಭೇದದ ಅನುಸಂಧಾನವೆಂಬ ಭಜನವು ಮುಖ್ಯವಾದುದು. ಅದನ್ನು ಸದ್ಗುರೂಪದೇಶ ಮಾರ್ಗದಿಂದ ಸಂಪಾದಿಸಲು ಸಾದ್ಯವಿರುವುದು. (ಮುಂದ

ಲಲಿತಾ ತ್ರಿಶತೀ - 2. ಓಂ ಕಲ್ಯಾಣ್ಯೈ ನಮಃ

    ಕಲ್ಯಾಣವೆಂದರೆ ಸುಖ ಎಂದು ಅರ್ಥ, ಆ ಸುಖಗಳು ಯುವ ಸಾರ್ವಭೌಮಸುಖ ಮೊದಲುಗೊಂಡು ಬ್ರಹ್ಮಾನಂದ ಪರ್ಯಂತ ವಿವಿಧವಾಗಿ ತೈತ್ತಿರೀಯಾದ ಉಪನಿಷತ್ತುಗಳಲ್ಲಿ ಪ್ರತಿಪಾದಿಸಲ್ಪಟ್ಟಿವೆ. ಅವು "ಏತಸ್ಯೈವಾ ನಂದಸ್ಯ ಅನ್ಯಾನಿ ಭೂತಾನಿ ಮಾತ್ರಾಮುಪ ಜೀವಂತಿ" ಎಂಬ ಶ್ರುತಿ ಪ್ರಮಾಣಾನುಸಾರವಾಗಿ ಉತ್ತಮಾಧಮ ಭಾವವನ್ನು ಹೊಂದಿದ ಆಯಾಯ ಉಪಾಧಿಗಳಿಂದ ಪರಿಚ್ಛಿನ್ನ ರೂಪವನ್ನು ಹೊಂದಿದ ಪರಿಪೂರ್ಣಾನಂದದ ರೂಪಳಾಗಿವೆ. ಅವುಗಳನ್ನು ಕಲ್ಯಾಣ ಶಬ್ದವು ಬೋಧಿಸುವುದು. ಪರಿಪೂರ್ಣ ಬ್ರಹ್ಮಸ್ವರೂಪದಲ್ಲಿ ಉಪಾಧಿಯೋಗದಿಂದ ಸಮಷ್ಟಿವ್ಯಷ್ಟಿ ರೂಪಗಳನ್ನು ಹೊಂದಿದ ಸುಖಗಳ ಆಧಾರತ್ವವು ಸಂಭವಿಸುವುದರಿಂದ ಆಧಾರತ್ವ ಅರ್ಥವನ್ನು ಬೋಧಿಸುವ ಮತುಪ್ ಪ್ರತ್ಯಯಾಂತ ಸಮಾಸವು ಅಬಾಧಿತವಾಗಿರುವುದು. ಆನಂದಸ್ಯ - ಮಾತ್ರಾಂ ಎಂದು ಶ್ರುತಿಯಲ್ಲಿ ಆನಂದದ ಲೇಶವೆಂದು ಒಂದು ಸ್ವರೂಪದಲ್ಲಿ ಭೇದಭಾವನೆಯನ್ನು ಉಂಟುಮಾಡಿರುವುದು ಶಿರೋಮಾತ್ರ ಸ್ವರೂಪನಾದ ರಾಹುವನ್ನು ಕಂಡು ರಾಹುವಿನ ತಲೆ ಎಂದು ಪ್ರಯೋಗದಿಂದ ಭೇದಭಾವನೆಯನ್ನು ತೋರಿಸುವಂತೆ ಔಪಚಾರಿಕವಾದುದು. ಭೇದವನ್ನು ವಾಸ್ತವನಾಗಿ ಪ್ರತಿಪಾದಿಸುವ ತಾತ್ಪರ್ಯವಿಲ್ಲ, ಆದ್ದರಿಂದ ದೇವಿಯು "ವಿಜ್ಞಾನಮಾನಂದಂ ಬ್ರಹ್ಮ" ಎಂಬ ಶ್ರುತಿಯಲ್ಲಿ ಹೇಳಿದ ಪರಬ್ರಹ್ಮಸ್ವರೂಪ ಲಕ್ಷಣವಾದ ಆನಂದರೂಪವಾದ ಆಕಾರವುಳ್ಳವಳು - ಎಂದು ತಾತ್ಪರ್ಯವು.  (ಮುಂದುವರೆಯುವುದು...)

ಲಲಿತಾ ತ್ರಿಶತೀ - 1. ಓಂ ಕಕಾರರೂಪಾಯೈ ನಮಃ

    ಸೂತಮುನಿಯು ಹೀಗೆ ಹೇಳಿದನು :- ಅನೇಕ ಕಾಲ ಪರಭಕ್ತಿಯಿಂದ ಗುರುಪಾದಕಮಲಗಳನ್ನು ಅವಲಂಬಿಸಿದ್ದ ಅಗಸ್ತ್ಯಮುನಿಗೆ ಶಿವದಂಪತಿ ರಚಿತವಾದ ಲಲಿತಾನಾಮತ್ರಿಶತೀ ಸ್ತೋತ್ರವನ್ನು ಉಪದೇಶಿಸಲು ದೇವಿಯಿಂದ ಪ್ರೇರೇಪಿಸಲ್ಪಟ್ಟ ಮುನಿಯು ಅದನ್ನು ಉಪದೇಶಮಾಡಲು ಉಪಕ್ರಮಿಸಿದನು. ದೇವಿಯು "ಕ" ಎಂಬ ವರ್ಣವು ಬೋಧಕ ವಿಶೇಷಣವುಳ್ಳವಳಾಗಿ ಇರುವಳು. ಎಂದರೆ ಕಕಾರವು ಆದಿಯಲ್ಲಿರುವ ಬೀಜಾಕ್ಷರ ಮಯವಾದ ಮಂತ್ರಶರೀರವುಳ್ಳವಳು ಎಂದು ತಾತ್ಪರ್ಯವು ಅಥವಾ ಕ ವರ್ಣ ರೂಪವಾದ ಶಬ್ಧವು ಬ್ರಹ್ಮ, ನೀರು, ಶಿರ ಮತ್ತು ಸುಖವೆಂಬ ಅರ್ಥಗಳಿಗೆ ವಾಚಕವಾಗಿದೆ, ಆದ್ದರಿಂದ ಕಕಾರವು ವಾಚಕವಾಗಿ ಇರುವ ಅರ್ಥಗಳು ಬ್ರಹ್ಮ ಮುಂತಾದುವುಗಳಾಗಿವೆ. ಬ್ರಹ್ಮ ಮುಂತಾದ ಅರ್ಥಗಳಲ್ಲಿರುವ ಅಸಾಧಾರಣ ಗುಣಗಳು ದೇವಿಯಲ್ಲಿರುವುದರಿಂದ ದೇವಿಯು ಬ್ರಹ್ಮಾದಿರೂಪಳಾಗುವಳು. ಹಿರಣ್ಯಗರ್ಭನಲ್ಲಿ ಜಗದ್ಧಾರಕತ್ವ, ಜಗತ್ಕರ್ತೃತ್ವಗಳು ಇರುವಂತೆ ವರ್ಣಮಾಲೆಯಲ್ಲಿ ವ್ಯಂಜನವರ್ಣಗಳಿಗೆ ಆದಿಯಾದ ಕಕಾರದಲ್ಲಿಯೂ ಇರುವುವು. ಜಲದಲ್ಲಿ ಸಸತ್ಯವನ್ನು ಪೋಷಣಮಾಡುವುದರ ಮೂಲಕ ಜಗತ್ಸಂಜೀವನ ಕಾರಿತ್ವವು ಇರುವಂತೆ ಮಂತ್ರದ ಆದ್ಯಕ್ಷರವಾದ ಕಕಾರದಲ್ಲಿಯೂ ಇದೆ. ಸರ್ವಪ್ರಾಣಿಗಳ ಶಿರಸ್ಸಿನಲ್ಲಿ ಅಮೃತವು ಇರುವುದರಿಂದ ಯೋಗಾಭ್ಯಾಸ ಬಲದಿಂದ ಕುಂಡಲಿನೀ ಉತ್ಥಾಪನ ಮೂಲಕ ಶಿರಸ್ಸನ್ನು ಹೊಂದಿ ಅಲ್ಲಿರುವ ಅಮೃತ ಪ್ರವಾಹದಿಂದ ನೆನೆದಿರುವ ಯೋಗಿಗಳ ಜೀವಾತ್ಮಕ್ಕೆ ಈಶ್ವರಸಾಮ್ಯವು ಉಂಟಾಗುವುದೆಂದು ಯೋಗಶಾಸ್ತ್ರದಲ್ಲಿ ಹೇಳಿರ