ಶ್ರೀ ಶಂಕರ ಭಗವತ್ಪಾದಾಚಾರ್ಯರ ಗುಣಕಥನ

    ಯಾವನು ಮತ್ತೊಬ್ಬರಿಗೆ ಹಿತವಾದದ್ದನ್ನು ಉಪದೇಶಿಸುವನೋ ಅವನೇ ಗುರುವು. ಆಸ್ತಿಕರಾಗಲಿ ನಾಸ್ತಿಕರಾಗಲಿ ತಮಗೆ ಹಿತವನ್ನು ಹೇಳುವ ನಿಸ್ವಾರ್ಥರಾದ ಗುರುಗುಳನ್ನು ಸೇವಿಸುತ್ತಾರೆ. ತಾಯಿ, ತಂದೆ, ಉಪಾಧ್ಯಾಯರು - ಮುಂತಾದವರು ಎಷ್ಟೆಷ್ಟು ಮಟ್ಟಿಗೆ ನಮಗೆ ಹಿತಾನುಶಾಸನವನ್ನು ಮಾಡುವರೋ ಅಷ್ಟಷ್ಟು ಮಟ್ಟಿಗೆ ಗುರುಸ್ಥಾನಕ್ಕೆ ತಕ್ಕವರಾಗುವರು. ಆದರೆ ಇಂಥ ಗುರುಗಳಿಗಿಂತಲೂ ಧರ್ಮಗುರುಗಳಿಗೆ ಗೌರವ ಹೆಚ್ಚು, ಏಕೆಂದರೆ ಅವರು ಈ ಲೋಕ, ಈ ಜನ್ಮ-ಇವೆರಡಲ್ಲಿಯೇ ನಮ್ಮ ಜೀವನವು ಮುಗಿಯುವದಿಲ್ಲವೆಂದೂ ಲೋಕಾಂತರ ಜನ್ಮಾಂತರಗಳಲ್ಲಿಯೂ ಕರ್ಮಫಲವನ್ನನು ಭವಿಸುವ ನಮ್ಮ ಜೀವಸ್ವರೂಪವೊಂದು ಇದೆಯೆಂದೂ ತಿಳಿಸಿಕೊಡುತ್ತಾರೆ. ಎಲ್ಲಾ ಮತಗಳಲ್ಲಿಯೂ ದೇವರನ್ನೂ ಜನ್ಮಾಂತರವನ್ನೂ ಒಪ್ಪುವದಿಲ್ಲವೆಂಬುದು ನಿಜ; ಆದರೆ ಮನುಷ್ಯನ ಜೀವನದಲ್ಲಿ ಧರ್ಮವೆಂಬುದು ಒಂದು ಹೆಚ್ಚಿನ ಶಕ್ತಿಯೆಂದು ಅನೀಶ್ವರವಾದಿಗಳೂ ಕೂಡ ಒಪ್ಪಿರುತ್ತಾರೆ. ಇಂಥ ಧರ್ಮವನ್ನು ಜೀವನದಲ್ಲಿ ಅನುಭವಕ್ಕೆ ತಂದುಕೊಡುವ ಗುರುವಿನ ಲೌಕಿಕ ಗುರುವಿಗಿಂತ ಹೆಚ್ಚಿನ ಸ್ಥಾನವು ದೊರೆಯುವದು ಸಹಜವಾಗಿಯೇ ಇರುತ್ತದೆ.
    ಆದರೆ ಇಂಥ ಧರ್ಮಗುರುಗಳ ಪರಂಪರೆಯಲ್ಲಿ ಬಂದವರು ಕೆಲವರು ಸಂಕುಚಿತ ದೃಷ್ಟಿಯನ್ನು ಹೊಂದಿ "ನಮ್ಮ ಮತವೇ ಸತ್ಯವು, ಮಿಕ್ಕವೆಲ್ಲವೂ ತಪ್ಪುಹಾದಿಗಳು" ಎಂದು ಉಪದೇಶಿಸುತ್ತಾ ಬಂದಿರುತ್ತಾರೆ. ಇದರಿಂದ ಧರ್ಮದ ಹೆಸರಿನಲ್ಲಿ ಕೂಡ ರಾಗದ್ವೇಷದಿಗಳು ಹೆಚ್ಚವದಕ್ಕೆ ಅವಕಾಶವಾಗಿರುತ್ತದೆ. ಆದ್ದರಿಂದ ಧರ್ಮಗಳನ್ನೆಲ್ಲ ಸಮರಸ ಮಾಡಿತೋರಿಸುವ ಒಬ್ಬ ಮಹಾಗುರು ಬೇಕಾಗಿರುತ್ತಾನೆಂಬುದು ನಿರ್ವಿವಾದವು. ಇಂಥ ಮಹಾಗುರುವಿನ ಸ್ಥಾನವನ್ನು ಪ್ರತಿಯೊಂದು ಮತದವರೂ ತಮ್ಮ ತಮ್ಮ ಗುರುಗಳಿಗೆ ಕೊಡಬೇಕೆಂದು ಹವಣಿಸುತ್ತಿರುವರು; ಇದು ಅನುಯಾಯಿಗಳ ಭಕ್ತಿಶ್ರದ್ಧೆಗಳನ್ನು ಸೂಚಿಸುತ್ತದೆಯಾದರೂ ನ್ಯಾಯಯುಕ್ತವಾಗಿದೆಯೆಂದು ಹೇಳುವುದಕ್ಕೆ ಆಗುವುದಿಲ್ಲ. ಮಿಕ್ಕ ಮತಗಳನ್ನೆಲ್ಲಾ ಅಳಿಸಿ, ತಮ್ಮ ಮತಕ್ಕೆ ದೀಕ್ಷೆಯಿಂದಲೋ ಶುದ್ಧಿಯಿಂದಲೋ ಆ ಮತಗಳ ಅನುಯಾಯಿಗಳನ್ನೆಲ್ಲ ಸೆಳೆದುಕೊಂಡು ಎಲ್ಲಾ ಮತಗಳನ್ನು ಒಂದು ಮಾಡಿದರೆ ಸಮನ್ವಯವಾಯಿತೆಂದು ಭಾವಿಸುವದು ಈಗ್ಗೆ ಬಹು ಕಡೆಗಳಲ್ಲಿ ಕಂಡುಬರುತ್ತದೆ. ಇದು "ಯಾರು ಬಲಿಷ್ಠರೋ ಅವರದೇ ಪೃಥ್ವಿಯು" ಎಂಬ ಉಕ್ತಿಯನ್ನು ಅನುಸರಿಸುವದೇ ಹೊರತು, ನಿಜವಾದ ಧರ್ಮಮಾರ್ಗವೆಂದು ಹೇಳುವದಕ್ಕೆ ಆಗುವದಿಲ್ಲ; ಮತ್ತು ಈ ರೀತಿಯಿಂದಾದ ಧರ್ಮೈಕ್ಯವು ಕೊನೆಯವರೆಗೂ ನಿಲ್ಲುವದೂ ಇಲ್ಲ. ನಿಜವಾಗಿ ಧರ್ಮವು ಹೊರಗಿನ ವೇಷಭಾಷೆಗಳಿಗೆ ಸಂಬಂಧಪಟ್ಟಿರುವದಿಲ್ಲ. ಅದು ಹೃದಯಕ್ಕೆ ಸೇರಿದ್ದು; ಆದ್ದರಿಂದ ಎಲ್ಲಾ ಧರ್ಮಗಳನ್ನು ಒಂದುಗೂಡಿಸುವದಕ್ಕೆ ಮತ್ತೊಂದು ಬಗೆಯ ಸಮನ್ವಯವನ್ನು ತೋರಿಸಿಕೊಡುವ ಮಹಾಗುರುಗಳೊಬ್ಬರು ಬೇಕಾಗಿರುತ್ತಾರೆಂದು ನಾವು ಒಪ್ಪಬೇಕು. ಇಂಥ ಗುರುಗಳೇ ಶ್ರೀ ಶಂಕರಾಚಾರ್ಯರೆಂಬುದು ನನ್ನ ನಮ್ರ ಸೂಚನೆಯಿರುವದು.
    ಶಂಕರಾಚಾರ್ಯರನ್ನು ಮಾತ್ರ ಧರ್ಮಚಾರ್ಯರಿಗೆಲ್ಲ ಗುರುಗಳಾದ ಜಗದ್ಗುರುಗಳೆಂದು ಕರೆಯುವದಕ್ಕೆ ಕಾರಣವೇನೆಂದು ಯಾರಾದರೂ ಕೇಳಬಹುದು. ಆಚಾರ್ಯರು ಯಾವದೊಂದು ವಿಶೇಷಧರ್ಮದ ಬೆನ್ನುಹತ್ತಿ ಅದರ ಆಚಾರವಿಚಾರಗಳನ್ನು ಮಾತ್ರ ಅನುಸರಿಸಿದವರಾಗಿಲ್ಲ; ಅವರು ಧರ್ಮಗಳಿಗೆಲ್ಲ ಆಧಾರವಾಗಿರುವ ಪರಮತತ್ತ್ವವನ್ನು ನಮ್ಮಗಳ ಮುಂದೆ ಇಟ್ಟಿರುತ್ತಾರೆ. ಅವರು ಪ್ರತಿಪಾದನೆಮಾಡಿರುವ ಸರ್ವಾತ್ಮರೂಪ ಬ್ರಹ್ಮತತ್ತ್ವವು ನಮ್ಮೆಲ್ಲರ ಆತ್ಮನಾಗಿರುತ್ತದೆಯಾದ್ದರಿಂದ ಅದನ್ನು ತಿರಸ್ಕರಿಸುವದಕ್ಕೆ ಆಗುವಂತಿಲ್ಲ, ನಮಗೆಲ್ಲ ಅದು ಅತ್ಯಂತ ಪ್ರೇಮಕ್ಕೆ ವಿಷಯವಾದದ್ದಾಗಿರುತ್ತದೆ. ಯಾವ ಮತದಲ್ಲಿ ನಾವು ಜನಿಸಿರಲಿ, ಸದಾಚಾರದಿಂದ ಚಿತ್ತಶುದ್ಧಿಯನ್ನು ಸಂಪಾದಿಸಿಕೊಂಡರೆ ಸಾಕು, ಅವರು ಉಪದೇಶಿಸಿರುವ ತತ್ತ್ವವನ್ನು ಕಂಡುಕೊಳ್ಳುವದಕ್ಕೆ ಆಗುವಂತಿದೆ. ವರ್ಣಾಶ್ರಮ ಧರ್ಮದಲ್ಲಿರುವವರೂ ಇಲ್ಲದವರೂ ಜ್ಞಾನಿಗಳಾಗಿರಬಹುದೆಂದು ಅವರು ಕಂಠೋಕ್ತವಾಗಿ ಹೇಳಿಬಿಟ್ಟಿರುತ್ತಾರೆ; ಬ್ರಾಹ್ಮಣಾದಿ ಉಚ್ಚವರ್ಣದವರಿಗೆ ಹೇಗೋ ಅದರಂತೆ ಮಿಕ್ಕವರಿಗೂ ಜ್ಞಾನಕ್ಕೆ ಅವಕಾಶವುಂಟೆಂಬುದನ್ನು ಸ್ಪಷ್ಟಗೊಳಿಸಿರುತ್ತಾರೆ. ಈ ಕಾರಣದಿಂದ ಅವರು ಮಾಡಿರುವ ಧರ್ಮಸಮನ್ವಯವೇ ಸರ್ವರಿಗೂ ಪ್ರಿಯವೂ ಹಿತವೂ ಆಗಿರುತ್ತದೆ. ನಾವು ಆಚಾರ್ಯರ ಆರಾಧನೆ ಮಾಡಬೇಕೆಂದಿದ್ದರೆ ಅವರ ಉಪದೇಶವನ್ನು ಅನುಷ್ಠಾನಕ್ಕೆ ತರಬೆಕು. ನಾನು ನನ್ನದೆಂಬ ಅಭಿಮಾನವನ್ನು ಬಿಟ್ಟು ಜೀವನ ಮಾಡುತ್ತಾ ಆ ಜಗದ್ಗುರುಗಳು ಉಪದೇಶಿಸಿರುವ ವೇದಾಂತಜ್ಞಾನವು ನಮಗೆ ದಕ್ಕುವಂತೆ ಅನುಗ್ರಹ ಮಾಡಿರೆಂದು ಅವರನ್ನು ಕೇಳಿಕೊಳ್ಳಬೇಕು. ಇದೇ ನಿಜವಾದ ಆರಾಧನೆ......

Comments

  1. I used to ask many people as to " What is the definition of a Guru " ?? This word is the most misued one. We have a Gadget Guru , medical guru. Legal guru and so on. Added to this we have so many " Godly gurus" pop gurus charlatans and so on. Here in the above article some sanity has been infused to the word. You say one who leads you up the ladder of Gyana knowledge like Shri Shankaracharya is a Guru.
    I would further refine it and say he is a Guru who leads you to TRUTH. What is the truth??
    That which is eternal and universal is truth. Like light travels at 1,86,000. Miles per second This truth our scientists found. It is eternal and any where in the universe it remains the same speed.
    What your gurus preach is
    " Asatya " Not truth. Upanishad says " Satyanveshana " Not Gods or Gurus. Shri Shankaracharya gave us the truth AHAM BRAHMASMI. Brahman here means truth. Not a person There is no creator nor his creation. It is just Evolution. Truth evolves itself . Your father didnot creat you. You evolved from a fertile egg. Tree Evolves from seed. The whole universe EVOLVED FROM SEED. And will become a seed and evolves again from it. Please don't frighten gullible people wit Gods demi gods and so. Even Devils. They are not true They are not Eternal and Universal. Om shanthi.
    THERE MAY BE TYPING MISTAKES . PLEASE IGNORE.

    ReplyDelete
  2. I used to ask many people as to " What is the definition of a Guru " ?? This word is the most misued one. We have a Gadget Guru , medical guru. Legal guru and so on. Added to this we have so many " Godly gurus" pop gurus charlatans and so on. Here in the above article some sanity has been infused to the word. You say one who leads you up the ladder of Gyana knowledge like Shri Shankaracharya is a Guru.
    I would further refine it and say he is a Guru who leads you to TRUTH. What is the truth??
    That which is eternal and universal is truth. Like light travels at 1,86,000. Miles per second This truth our scientists found. It is eternal and any where in the universe it remains the same speed.
    What your gurus preach is
    " Asatya " Not truth. Upanishad says " Satyanveshana " Not Gods or Gurus. Shri Shankaracharya gave us the truth AHAM BRAHMASMI. Brahman here means truth. Not a person There is no creator nor his creation. It is just Evolution. Truth evolves itself . Your father didnot creat you. You evolved from a fertile egg. Tree Evolves from seed. The whole universe EVOLVED FROM SEED. And will become a seed and evolves again from it. Please don't frighten gullible people wit Gods demi gods and so. Even Devils. They are not true They are not Eternal and Universal. Om shanthi.
    THERE MAY BE TYPING MISTAKES . PLEASE IGNORE.

    ReplyDelete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ