Posts

Showing posts from April, 2017

ಅದ್ವೈತ ಮತ್ತು ದೇವತಾರಾಧನೆ

Image
    ಜೀವನದಲ್ಲಿ ಕರ್ಮಮಾರ್ಗ, ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗ ಎಂಬ ಮೂರು ವಿಧಾನಗಳು ಲಭ್ಯವಾಗಿದ್ದು ನಮ್ಮ ವೈಯಕ್ತಿಕ ಪ್ರವೃತ್ತಿಗನುಗುಣವಾಗಿ ಒಂದನ್ನು ಆರಿಸಿಕೊಳ್ಳುತ್ತೇವೆ. ಈ ಮೂರು ಮಾರ್ಗಗಳು ನಮ್ಮನ್ನು ಬೆಳೆಸುತ್ತವೆ, ಉಳಿಸುತ್ತವೆ. ಇವುಗಳಲ್ಲಿ ಭಕ್ತಿಮಾರ್ಗಮಾತ್ರವೇ ಶೀಘ್ರಫಲದರ್ಶನ ನೀಡುತ್ತದೆ. ಇದರಲ್ಲಿ ಮತಿಗೆ ವ್ಯಥೆಯಿಲ್ಲ. ಅಂತೆಯೇ ಹೆಚ್ಚು ಜನರನ್ನು ಇದು ಆಕರ್ಷಿಸುತ್ತದೆ. ಅಬಾಲವೃದ್ಧರೂ, ಸ್ತ್ರೀಯರೂ ಈ ಮಾರ್ಗವನ್ನು ಅನುಸರಿಸಬಹುದಾದ್ದರಿಂದ ಇದರ ವ್ಯಾಪ್ತಿಯು ದೊಡ್ಡದು.     ಹೀಗಾಗಿ ಆಚಾರ್ಯ ಶಂಕರರು ಸಕಲ ಜನರ ಉದ್ಧಾರಕ್ಕಾಗಿ ಹಲವಾರು ದೇವಸ್ಥಾನಗಳನ್ನು ಸ್ಥಾಪಿಸಿದರು; ಹಲವನ್ನು ಜೀಣೋದ್ಧಾರ ಮಾಡಿಸಿದರು, ಹಲವು ದೇವಾಲಯಗಳಲ್ಲಿನ ಕ್ರೂರಪದ್ಧತಿಗಳನ್ನು ಮಾರ್ಪಡಿಸಿ, ಶುದ್ಧವಾಗಿಸಿದರು. ಇಷ್ಟಲ್ಲದೆ, ಸುಂದರ, ರಸಗರ್ಭಿತ, ಮಂಜುಳ, ಲಯಬದ್ಧ ಗಾನಸುಧೆಗಾಗಿ ಹಲವು ಸ್ತೋತ್ರಗಳನ್ನು ರಚಿಸಿ ಭಗವಂತನ ಪ್ರಾರ್ಥನೆಗೆ ಅನುವು ಮಾಡಿಕೊಟ್ಟಿದ್ದಾರೆ. ಲಹರಿ, ಅಷ್ಟಕ, ಪಂಚಕ, ಪಂಜರಿಕಾ, ಅಪರಾಧ ಕ್ಷಮಾಪಣಾ.... ಹೀಗೆಯೇ ಹಲವಾರು ಶೈಲಿಯ, ಅರ್ಥಗಾಂಭೀರ್ಯದ, ಭಕ್ತಿರಸಪೂರ್ಣವಾದ ಸ್ತವಕುಸುಮಗಳನ್ನು ನೀಡಿ ಉಪಕರಿಸಿದ್ದಾರೆ.     ಪ್ರತ್ಯೇಕ ವ್ಯಕ್ತಿಯು ತನ್ನ ಇಷ್ಟದೇವತೆಯನ್ನು ಪ್ರಾರ್ಥಿಸುವುದು ಸೂಕ್ತವಾದರೂ, ಇತರ ದೇವತೆಗಳು ಕಡಿಮೆಯವೆಂದು ಪರಿಗಣಿಸಬಾರದು. ಪರಮತ ಸಹಿಷ್ಣುತೆ ನಮ್ಮ ದೇಶದ, ನಮ್ಮ ಧರ್ಮದ ಮತ್ತು ಆಚಾರ್ಯ ಶಂಕರರ ವೈಶಿಷ್

ರಾಮರಹಸ್ಯೋಪನಿಷತ್

Image
    ಪ್ರತಿವರ್ಷವೂ ಯುಗಾದಿಯಿಂದ ಆರಂಭವಾಗುವ ಚೈತ್ರಮಾಸದಲ್ಲಿ ಶ್ರೀರಾಮ ನವರಾತ್ರಿಯ ಉತ್ಸವವು ದೇಶದಲ್ಲೆಲ್ಲ ನಡೆಯುತ್ತದೆ. ಶ್ರೀರಾಮನವಮಿವರೆಗೆ ಅನುಷ್ಠಾನಮಾಡಿ ಪಟ್ಟಾಭಿಷೇಕವನ್ನು ನೆರವೇರಿಸುವ ಪದ್ಧತಿಯನ್ನು ಗರ್ಭ ನವರಾತ್ರಿಯೆಂದೂ ನವಮಿಯಿಂದಲೇ ಉತ್ಸವಾರಂಭವನ್ನು ಮಾಡಿ ಒಂಭತ್ತು ದಿನಗಳ ಅನಂತರ ಪಟ್ಟಾಭಿಷೇಕವನ್ನು ನೆರವೇರಿಸುವ ಕ್ರಮವನ್ನು ಜನ್ಮನವರಾತ್ರಿಯೆಂದೂ ಕರೆಯುತ್ತಾರೆ. ಈ ಕಾಲದಲ್ಲಿ ಶ್ರೀಮದ್ರಾಮಾಯಣಪಾರಾಯಣ, ಹರಿಕಥೆ, ಸಂಗೀತ, ಭಜನೆ - ಮುಂತಾದ ಕಾರ್ಯಕ್ರಮಗಳು ಸಾಮಾನ್ಯವಾಗಿ ನಡೆಯುತ್ತವೆ. ಈಚೆಗೆ ಟಿ.ವಿ ರಾಮಾಯಣ ಫಿಲಂ ಪ್ರದರ್ಶನವೂ ಜಾರಿಗೆ ಬಂದಿದೆ. ಆದರೆ ವಿಶೇಷವಾಗಿ ರಾಮಮಂತ್ರ ಜಪ, ಪುರಶ್ಚರಣೆ, ರಾಮತತ್ತ್ವ ಕಥಾವ್ಯಾಖ್ಯಾನ, ರಾಮರಹಸ್ಯ, ರಾಮತಾಪಿನ್ಯಾದಿ ಉಪನಿಷತ್ತುಗಳ ಪಾರಾಯಣ - ಮುಂತಾದವು ನೆರವೇರುವದು ಅಪರೂಪವಾಗಿರುತ್ತದೆ. ಆದ್ದರಿಂದ ಈ ಲೇಖನದಲ್ಲಿ ರಾಮರಹಸ್ಯೋಪನಿಷತ್ತಿನ ಬಗ್ಗೆ ಸ್ಥೂಲವಾಗಿ ಪರಿಚಯಮಾಡಿಕೊಡಲು ಪ್ರಯತ್ನಿಸಿದೆ.     ಅಷ್ಟೋತ್ತರಶತೋಪನಿಷತ್ತುಗಳಲ್ಲಿ ಇದು 56ನೆಯದಾಗಿದೆ. ಇದು ಅಥರ್ವ ವೇದಕ್ಕೆ ಸೇರಿದ್ದು. 'ಭದ್ರಂ ಕರ್ಣೇಭಿಃ' ಎಂಬ ಶಾಂತಿಪಾಠವುಳ್ಳದ್ದಾಗಿದೆ. ಇದರಲ್ಲಿ ಒಟ್ಟು ಐದು ಅಧ್ಯಾಯಗಳು 145 ಮಂತ್ರಗಳೂ ಇವೆ. ಎರಡನೆಯ ಅಧ್ಯಾಯವೊಂದರಲ್ಲಿಯೇ 106 ಮಂತ್ರಗಳಿವೆ. ಮೂರನೆಯ ಅಧ್ಯಾಯವೆಲ್ಲ ಒಂದೇ ಮಂತ್ರ ರೂಪವಾಗಿದೆ. ಮೊದಲನೆಯ ಅಧ್ಯಾಯದಲ್ಲಿ ಸನಕಾದಿಯೋಗಿಗಳೂ ಪ್ರಹ್ಲಾದಾದಿ ವಿಷ್ಣುಭ