Posts

Showing posts from May, 2017

ಶನೈಶ್ಚರ

Image
    ಶನಿ ಎಂಬುದು ನವಗ್ರಹಗಳಲ್ಲೊಬ್ಬನಾದ ದೇವತೆಯ ಹೆಸರು. ಈಶ್ವರ ಶಬ್ದವನ್ನು ಕೊನೆಯಲ್ಲಿ ಜೋಡಿಸಿದರೆ 'ಶನೀಶ್ವರ' ಎಂಬ ನಾಮವಾಗುವದು. ಗ್ರಹಗಳಲ್ಲಿ ಬಹಳ ವಿಳಂಬ (ಮಂದ)ಗತಿಯಿಂದ ಸಂಚರಿಸುವವನೇ ಶನಿಯು. ಏಕೆಂದರೆ ಆತನ ಸಂಚಾರಪಥವೇ ಬಹಳ ದೊಡ್ಡದು. ಆದ್ದರಿಂದ ಚಂದ್ರನು ಎರಡೂವರೆದಿನಗಳಲ್ಲಿ ಒಂದು ರಾಶಿಯನ್ನು ದಾಟಿದರೆ ಶನಿಯು ಅದನ್ನು ದಾಟಲು ಎರಡೂವರೆವರ್ಷಗಳ ಕಾಲವೇ ಬೇಕಾಗುವದು. ಹೀಗೆ ಗ್ರಹಗಳಲ್ಲಿ ಬಹಳ ಮಂದಗತಿಯವನಾದ ಶನಿಯನ್ನು 'ಮಂದ'ನೆಂಬ ಹೆಸರಿನಿಂದಲೂ ಕರೆಯುತ್ತಾರೆ. ಉಳಿದ ಗ್ರಹಗಳೆಲ್ಲರೂ ಅತಿ ಶೀಘ್ರಗತಿಯಾದ ಚಂದ್ರನಿಗೂ ಅತಿ ಮಂದಗತಿಯಾದ ಶನಿಗೂ ನಡುವಿನ ಕಾಲವ್ಯವಧಾನದಲ್ಲಿ ಒಂದೊಂದು ರಾಶಿಯನ್ನು ದಾಟುತ್ತಾರೆ. ಜ್ಯೋತಿಷ್ಯಸಿದ್ಧಾಂತದಂತೆ ಶನಿಗೆ ವಕ್ರಗತಿಯೂ ಉಂಟು. ಎಂದರೆ ನಕ್ಷತ್ರಗಳ ಪಾದಗಳನ್ನು ದಾಟುವಾಗ ಕೆಲವು ಸಲ ಹಿಂದಕ್ಕೆ ಬರುತ್ತಾನೆ. ಸೂರ್ಯಚಂದ್ರರಿಗೆ ಮಾತ್ರ ವಕ್ರಗತಿಯಿರುವದಿಲ್ಲ, ಆದ್ದರಿಂದಲೇ ಸೋಮವಾರದ ನಂತರ ಮಂಗಳವಾರವೇ ಹೊರತು ಮತ್ತೆ ಭಾನುವಾರವು ಬರುವದಿಲ್ಲ. ಇದು ಹಾಗಿರಲಿ. ಅಂತೂ ಮೆಲ್ಲಗೆ ದಾಟುವ ಶನಿಯನ್ನು ಸಂಸ್ಕೃತ ಭಾಷೆಯಲ್ಲಿ "ಶನೈಃ ಚರತಿ ಇತಿ ಶನೈಶ್ವರಃ" ಎಂಬ ವ್ಯುತ್ಪತ್ತಿಯಂತೆ 'ಶನೈಶ್ಚರ'ನೆಂದೂ ಕರೆಯುತ್ತಾರೆ. ಶನೇಶ್ವರ, ಶನೈಶ್ವರ - ಎಂಬ ಕನ್ನಡ ಪ್ರಯೋಗಗಳು ತಪ್ಪು. ಈ ದೇವತೆಯನ್ನು ಕುರಿತು ಶನಿವಾರದ ದಿನ ಮಾಡುವ ಪೂಜೆಯೇ ಶನೈಶ್ಚರವ್ರತವು.     'ಶನಿ

ಮಾತೃಪಂಚಕಮ್ - ಶ್ರೀಮತ್ ಶಂಕರಾಚಾರ್ಯ ವಿರಚಿತಂ

Image
ಆಸ್ತಂ ತಾವದ್ ಇಯಂ ಪ್ರಸೂತಿಸಮಯೇ ದುರ್ವಾರಶೂಲವ್ಯಥಾ ನೈರುಚ್ಯಂ ತನುಶೋಷಣಂ ಮಲಮಯೀ ಶಯ್ಯಾ ಚ ಸಂವತ್ಸರೀ । ಏಕಸ್ಯಾಪಿ ನ ಗರ್ಭಭಾರ ಭರಣ ಕ್ಲೇಶಸ್ಯ ಯಸ್ಯ ಅಕ್ಷಮಃ ದಾತುಂ ನಿಷ್ಕೃತಿಂ ಉನ್ನತೋsಪಿ ತನಯಃ ತಸ್ಯೈ ಜನನ್ಯೈ ನಮಃ ॥ 1॥     ಪ್ರಸೂತಿ(ಹೆರಿಗೆ) ಕಾಲದಲ್ಲಿ ಸಹಿಸಲಸಾಧ್ಯವಾದ ಹೊಟ್ಟೆನೋವಿನ ಬಾಧೆ ಹಾಗಿರಲಿ, ವರ್ಷವೆಲ್ಲ ಬಾಯಿಸಪ್ಪೆ, ಶರೀರಶ್ರಮ, ಕೊಳಕಾದ ಹಾಸಿಗೆಯಲ್ಲಿ ಮಲಗುವಿಕೆ, ಇತ್ಯಾದಿಗಳನ್ನು ಸಹಿಸಿಕೊಂಡು ಜನ್ಮವನ್ನು ನೀಡುವ ತಾಯಿಗೆ, ಹಾಗೂ ಗರ್ಭಿಣಿಯಾಗಿ ಗರ್ಭದ ಭಾರವನ್ನು ಹೊತ್ತು ಕಷ್ಟವನ್ನು ಸಹಿಸಿಕೊಳ್ಳುವ (ತಾಯಿಗೆ) ಯಾವನೊಬ್ಬನೂ ಪುಷ್ಟನಾದವನು ಕೂಡ ತನ್ನ ಪಾಲಿನ ಸಾಲವನ್ನು ತೀರಿಸಲು ಸಮರ್ಥನಾಗಲಿಲ್ಲವೋ ಅಂಥ ತಾಯಿಗೆ ನಮಸ್ಕಾರಗಳು. ಗುರುಕುಲಮುಪಸೃತ್ಯ ಸ್ವಪ್ನಕಾಲೇ ತು ದೃಷ್ಟ್ವಾ ಯತಿಸಮುಚಿತವೇಶಂ ಪ್ರಾರುದೋ ಮಾಂ ತ್ವಮುಚ್ಚೈಃ । ಗುರುಕುಲಮಥ ಸರ್ವಂ ಪ್ರಾರುದತ್ ತೇ ಸಮಕ್ಷಂ ಸಪದಿ ಚರಣಯೋಸ್ತೇ ಮಾತರಸ್ತು ಪ್ರಣಾಮಃ ॥ 2॥     (ನೀನು) ಕನಸಿನಲ್ಲಿ - ನಾನು ಗುರುಕುಲವನ್ನು ಸೇರಿ ಸಂನ್ಯಾಸಿಗೆ ತಕ್ಕ ವೇಷವನ್ನು ಧರಿಸಿರುವದನ್ನು ನೋಡಿ ಗಟ್ಟಿಯಾಗಿ ಅತ್ತುಬಿಟ್ಟೆ ಅದನ್ನು ಕಂಡು ಗುರುಕುಲದವರೆಲ್ಲರೂ ನಿನ್ನ ಎದುರಿಗೆ ಅಳಲಾರಂಭಿಸಿದರು. ಎಲ್ಲಾ ತಾಯಿಗೂ ಇದೊ, ನಿನ್ನ ಪಾದಗಳಿಗೆ ವಂದನೆಗಳು. ನ ದತ್ತಂ ಮಾತಸ್ತೇ ಮರಣಸಮಯೇ ತೋಯಮಪಿವಾ ಸ್ವಧಾ ವಾ ನೋ ದತ್ತಾ ಮರಣದಿವಸೇ ಶ್ರಾದ್ಧವಿಧಿನಾ । ನ ಜಪ್ತ್ವಾ ಮಾತಸ್ತೇ ಮರಣಸಮಯೇ

ಅಜಾತಿವಾದ

    ವೇದಾಂತಸಂಪ್ರದಾಯದಲ್ಲಿ ಶ್ರೀ ಗೌಡಪಾದರಿಗೆ ಬಹಳ ಉನ್ನತವಾದ ಸ್ಥಾನವಿದೆ. ಈ ಮಹನೀಯರು ರಚಿಸಿರುವ ಮಾಂಡೂಕ್ಯೋಪನಿಷತ್ತಿನ ವ್ಯಾಖ್ಯಾನ ರೂಪವಾದ ಕಾರಿಕೆಗಳು ವೇದಾಂತಸಿದ್ದಾಂತಪ್ರಪಂಚದಲ್ಲಿ ಚಿಂತಾಮಣಿರತ್ನದಂತೆ ಮುಮುಕ್ಷುಗಳಿಗೆ ಅಪೂರ್ವಲಾಭವಾಗಿವೆ. ಶ್ರೀಗೌಡಪಾದರವರ ವೇದಾಂತ ಪ್ರಕ್ರಿಯೆಯನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ 'ಅಜಾತಿವಾದ' ಎಂಬ ಒಂದೇ ಮಾತಿನಲ್ಲಿ ಅಡಕಮಾಡಿಬಿಡಬಹುದು. ಆದ್ದರಿಂದ ಅಜಾತಿವಾದವೆಂದರೇನು?     ನ ಕಶ್ಚಿಜ್ಜಾಯೆತೇ ಜೀವಃ ಸಂಭವೋsಸ್ಯ ನ ವಿದ್ಯತೇ | ಏತತ್ತದುತ್ತಮಂ ಸತ್ಯಂ ಯತ್ರ ಕಿಂಚಿನ್ನ ಜಾಯತೇ ||             'ಯಾವನೊಬ್ಬ ಜೀವನೂ ಹುಟ್ಟಿರುವದಿಲ್ಲ. ಇವನಿಗೆ ಹುಟ್ಟೆಂಬುದೇ ಇಲ್ಲ. ಹೀಗೆ ಹುಟ್ಟು ಎಂಬುದು ಇಲ್ಲವೇ ಇಲ್ಲ; ಏನೊಂದೂ ಹುಟ್ಟಿರುವದಿಲ್ಲ - ಎಂಬಿದೇ ಪರಮಾರ್ಥವಾದ ಉತ್ತಮಸತ್ಯವು' ಎಂಬಿದು ಮೇಲಿನ ಕಾರಿಕೆ ಅಕ್ಷರಾರ್ಥವು.         ಹೀಗೆ ಹುಟ್ಟು - ಎಂಬಿದನ್ನೇ ಹುಟ್ಟಡಗಿಸಿರುವ ಸತ್ಯದ ತಿರುಳೇನು? ಎಂಬಿದು ವಿಚಾರಣೀಯವಾಗಿದೆ. ಏಕೆಂದರೆ ವ್ಯವಹಾರದೃಷ್ಟಿಯಲ್ಲಿ ಇದು ತೀರ ವಿರುದ್ಧವಾಗಿ ಕಂಡುಬರುತ್ತದೆ. ಲೌಕಿಕರು, ಅಜ್ಞಾನಿಗಳು - ಹಾಗಿರಲಿ; ವಿವೇಕಿಗಳೂ ವಿದ್ಯಾವಂತರೂ ಪ್ರಾಜ್ಞರೂ ಸಹ ಜಗತ್ತು ಹುಟ್ಟಿದೆ - ಎಂದೇ ತಿಳಿದಿದ್ದಾರೆ. ವೇದಾಂತಿಗಳನ್ನು ಬಿಟ್ಟರೆ ಉಳಿದ ದರ್ಶನಕಾರರುಗಳು ಸಹ ಪ್ರಪಂಚದ ಸೃಷ್ಟಿಯನ್ನು ಒಪ್ಪಿರುತ್ತಾರೆ. ಅವೈದಿಕಮತಗಳವರು ಕೂಡ ದೇವರು ಪ್ರಪಂಚವನ್ನು ಸ