Posts

Showing posts from July, 2017

ನಾಗರ ಪಂಚಮಿ ವ್ರತ

Image
    ಈ ವ್ರತವನ್ನು ಶ್ರಾವಣ ಶುಕ್ಲ ಪಂಚಮಿ ದಿನ ಪ್ರತಿ ವರ್ಷವೂ ಭಕ್ತರು ಆಚರಿಸುತ್ತಾರೆ. ಉಳಿದ ಎಲ್ಲಾ ವ್ರತಗಳಿಗಿಂತಲೂ ಕಟ್ಟುನಿಟ್ಟಾಗಿ ಇದನ್ನು ಅನುಷ್ಠಾನಮಾಡುವರು. ಅಣ್ಣ, ತಮ್ಮ, ಅಕ್ಕ, ತಂಗಿಯಂದಿರುಗಳುಳ್ಲವರು ಈ ದಿನ ಒಟ್ಟುಗೂಡಿ ನಾಗದೇವತೆಯನ್ನು ಪೂಜಿಸಿ 'ತನಿ'ಎರೆದು ತಾವೂ ಎರೆಸಿಕೊಳ್ಳುವ ಪದ್ಧತಿಯಿದೆ.     ವ್ರತಚೂಡಾಮಣಿಯಲ್ಲಿರುವಂತೆ ಹೇಮಾದ್ರಿ - ಎಂಬ ಗ್ರಂಥದ ಪ್ರಭಾಸಖಂಡದಲ್ಲಿರುವ ಭಾಗವೇ ಈ ವ್ರತಕ್ಕೆ ಮೂಲಪ್ರಮಾಣವು. ಅದರಲ್ಲಿ ಶ್ರಾವಣ ಶುಕ್ಲ ಪಂಚಮಿಯ ಷಷ್ಠೀಯುಕ್ತವಾಗಿದ್ದ ದಿನ ನಾಗಪೂಜೆಯನ್ನು ಮಾಡಬೇಕೆಂದೂ ನಾಗಗಳಲ್ಲದ ಸರ್ಪಗಳ ಪೂಜೆಗೆ ಚತುರ್ಥೀ ತಿಥಿಯು ಶ್ರೇಷ್ಠವೆಂದೂ ಹೇಳಿದೆ. ಸಾಮಾನ್ಯವಾಗಿ ಹೆಡೆಯುಳ್ಳ ಹಾವುಗಳನ್ನು ನಾಗಗಳೆಂದೂ ಉಳಿದ ಜಾತಿಯ ಹಾವುಗಳನ್ನು ಸರ್ಪಗಳೆಂದೂ ಕರೆಯುತ್ತಾರೆ. ಹೀಗೆ ನಾಗಪೂಜೆಯನ್ನು ಮಾಡುವವನು ಚತುರ್ಥೀ ದಿನ ಬೆಳಗ್ಗೆ ನಿರಾಹಾರನಾಗಿದ್ದು ರಾತ್ರೆ ಭೋಜನಮಾಡಿ ಪಂಚಮಿ ದಿನ ನಾಗಪೂಜೆಯನ್ನು ಮಾಡಬೇಕು. ಐದು ಹೆಡೆಗಳುಳ್ಳ ಐದು ಹಾವುಗಳನ್ನು ಪೂಜಿಸಬೇಕು. ಇವುಗಳನ್ನು ಬೆಳ್ಳಿಯಿಂದ ಅಥವಾ ಮರದಿಂದ ಮಾಡಿ ಬಿಳಿಯ ಬಣ್ಣವನ್ನು ಹಾಕಿ ಸಿದ್ಧಗೊಳಿಸಿದ ಅಥವಾ ಮಣ್ಣಿನಿಂದ ಮಾಡಿದ ಬಿಂಬಗಳಲ್ಲಿ ಅಥವಾ ರಂಗೋಲಿಯಲ್ಲಿ ಚಿತ್ರವನ್ನು ಬರೆದು ಅರ್ಚಿಸಬೇಕು. ಅನಂತ, ವಾಸುಕಿ, ಶೇಷ, ಪದ್ಮ, ಕಂಬಳ - ಮುಂತಾದ ಸುಪ್ರಸಿದ್ಧ ನಾಗಗಳನ್ನು ಈ ಪೂಜೆಯಲ್ಲಿ ಆಹ್ವಾನಿಸಬೇಕು. ಅರಿಸಿನ, ಕುಂಕುಮ, ಕರವೀರ ಪಂಚ