Posts

Showing posts from August, 2017

ದೇವರಿಗೆ ಅರ್ಪಿಸಬೇಕಾದ ಪುಷ್ಪಗಳು

    ದೇವರಿಗೆ ಪುಷ್ಪಗಳನ್ನು ಅರ್ಪಿಸಿದರೆ ಅನುಗ್ರಹ ಮಾಡುತ್ತಾನೆ, ಆದರೆ ಅದು ಯಾವ ತರಹದ ಪುಷ್ಪಗಳು : ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಂ ಇಂದ್ರಿಯ ನಿಗ್ರಹಃ ಸರ್ವಭೂತದಯಾ ಪುಷ್ಪಂ ಸತ್ಯಪುಷ್ಪಂ ವಿಶೇಷತಃ ಜ್ಞಾನ ಪುಷ್ಪಂ ಧ್ಯಾನಪುಷ್ಪಂ ತಪಃ ಪುಷ್ಪಂ ಕ್ರಿಯಾಪುಷ್ಪಂ ಆರ್ಚತಿ ತುಷ್ಯತಿ ಕೇಶವ ಅಹಿಂಸಾ ಪ್ರಥಮಂ ಪುಷ್ಪಂ : ಮೊಟ್ಟ ಮೊದಲನೇ ಪುಷ್ಪ ಅಹಿಂಸೆ. ಅಂದರೆ ಹಿಂಸೆ ಮಾಡದಿರುವುದು. ಯಾರ ಮನಸ್ಸನ್ನೂ ನೋಯಿಸದೆ ಇರುವುದು. ಹಿಂಸಾತ್ಮಕವಾದ ರೀತಿಯಲ್ಲಿ ಚುಚ್ಚು ಮಾತುಗಳನ್ನು ಆಡದೇ ಇರುವುದು. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು. ಇದನ್ನೇ ಎಲ್ಲಾ ಮಹನೀಯರೂ ಹೇಳಿದ್ದಾರೆ. ಗಾಂಧೀಜಿಯವರೂ ಹೇಳಿದ್ದಾರೆ. 'ಮಾತೇ ಮಾಣಿಕ್ಯ', 'ಮಾತು ಬೆಳ್ಳಿ, ಮೌನ ಬಂಗಾರ' ಎನ್ನುವ ಗಾದೆ ಮಾತೂ ಇವೆ ವಿಶೇಷವಾಗಿ ಮಾತನಾಡುವಾಗ ಜಾಗ್ರತೆ ವಹಿಸಬೇಕೆನ್ನುವುದೇ ಆಗಿದೆ. ಪುಷ್ಪಂ ಇಂದ್ರಿಯ ನಿಗ್ರಹಃ : ಇದು ನಮ್ಮ ಜೀವನದಲ್ಲಿ ತುಂಬಾ ಅವಶ್ಯಕವಾದದ್ದು. ಪರಸ್ತ್ರೀಯರನ್ನು ನೋಡುವ ದೃಷ್ಟಿಯಲ್ಲಿ ಯಾವುದೇ ರೀತಿಯ ಕಲ್ಮಶ ಭಾವನೆಯಿರದೆ ನಮ್ಮ ಮನೆಯವರಂತೆ ಅನ್ನು ಆತ್ಮೀಯತೆ ತುಂಬಿರಬೇಕು ಅಕ್ಕ-ತಂಗಿ, ಹಿರಿಯರನ್ನು ಮಾತಾ-ಪಿತೃಗಳಂತೆ ಗೌರವವಾಗಿ ನೋಡುವುದೇ ಅಲ್ಲದೇ ತಾಯಿಯಲ್ಲಿ, ಅಕ್ಕ-ತಂಗಿಯರುಗಳಲ್ಲಿ ಇರುವ ಪ್ರೇಮವೇ ಬೇರೆ ನಮಗೆ ನಿಯಮಿತವಾದ ಸ್ತ್ರೀಯ ಪ್ರೇಮವೇ ಬೇರೆ. ಹಾಗೆ ಬೇರೆಯವರಲ್ಲಿ ಪ್ರೀತಿ ವಾತ್ಸಲ್ಯಗೌರವದಿಂದ ನಡೆಯುವುದೇ ಇಂದ್ರಿಯ

ಲಲಿತಾ ತ್ರಿಶತೀ - 17 ಓಂ ಕಮ್ರವಿಗ್ರಹಾಯೈ ನಮಃ

Image
ಗಾಂಭೀರ್ಯ, ಧೈರ್ಯ, ಮಾಧುರ್ಯ, ಮುಂತಾದ ಬಹು ಗುಣಗಳಿಂದ ಕೂಡಿ ಅತ್ಯಂತ ಮನೋಹರವಾದ ಮೂರ್ತಿಯುಳ್ಳವಳು. "ಆನಂದ ರೂಪಮಮೃತಂ ಯದ್ವಿಭಾತಿ" ಎಂಬ ಶ್ರುತಿಯು ಬ್ರಹ್ಮ ಸ್ವರೂಪವನ್ನು ಆನಂದ ರೂಪವೆಂದು ಭೋಧಿಸಿ ಅತಿ ಮನೋಹರತ್ವವನ್ನು ಸೂಚಿಸುತ್ತದೆ. ಆದ್ದರಿಂದ ಆನಂದ ರೂಪತ್ವದಿಂದ ಅತಿ ಮನೋಹರವಾದ ಮೂರ್ತಿಯುಳ್ಳವಳು. ಲಲಿತಾ ರೂಪಳು ಎಂದು ತಾತ್ಪರ್ಯವು, ಕಮ್ರಃ ವಿಗ್ರಹಃ ಯಸ್ಯಾಃ ಎಂದು ವಿಗ್ರಹವು (ಮುಂದುವರೆಯುವುದು...)

ಲಲಿತಾ ತ್ರಿಶತೀ -16 ಓಂ ಕಂಜಲೋಚನಾಯೈ ನಮಃ

Image

ನಂಬಿಕೆ, ಅರಿವುಗಳೆರಡೂ ಶ್ರೇಯಸ್ಸಾಧನವೇ......

    'ನಂಬು, ನಂಬು - ನಾರಾಯಣನ' ಎಂದು ಭಕ್ತರು ಹಾಡಿರುತ್ತಾರೆ. ಇಲ್ಲಿ ನಂಬಿಕೆ - ಎಂಬುದು ಯಾವದು? ನಾರಾಯಣನೆಂದರೆ ಯಾರು? ನಾರಾಯಣನೆಂದರೆ ನರರಿಗೆಲ್ಲ ಆಶ್ರಯನಾಗಿರುವ ಪರಮಾತ್ಮನು. ಪರಮಾತ್ಮನೊಬ್ಬನಿದ್ದಾನೆ; ಅವನು ನಮಗೆಲ್ಲ ಅಂತರಾತ್ಮನು. ಆತನಲ್ಲಿ ಶ್ರದ್ಧಾ ಭಕ್ತಿಗಳುಂಟಾದರೆ ನಮಗೆ ಇಹಲೋಕದಲ್ಲಿ ಸುಖವೂ ಪರದಲ್ಲಿ ಶ್ರೇಯಸ್ಸೂ ಉಂಟಾಗುತ್ತದೆ - ಎಂಬ ದೃಢವಿಶ್ವಾಸವೇ ನಂಬಿಕೆ.     ಇದೊಂದು ಮಹಾತತ್ತ್ವವು. ಇದನ್ನು ಸುಮ್ಮನೆ ನಂಬಿಕೊಂಡಿರುವದಕ್ಕೂ ಅರಿತುಕೊಳ್ಳುವದಕ್ಕೂ ಹೆಚ್ಚು ಕಡಿಮೆಯಿದೆ. ಸಮಿಪದ ಕಾಡಿನಲ್ಲಿ ಒಂದು ಹುಲಿಯಿದೆ - ಎಂದು ಆ ಊರಿನವರಿಗೆಲ್ಲ ನಂಬಿಕೆಯಿರಬಹುದು, ಆದರೆ ಕಾಡಿನಲ್ಲಿ ಕಟ್ಟಿಗೆಯನ್ನು ತರುವದಕ್ಕೆಂದು ಹೋದವನೊಬ್ಬನು ದೂರದಲ್ಲಿ ಹುಲಿಯನ್ನು ಕಂಡರೆ ಅವನಿಗೆ ಅದರ ಅರಿವೂ ಆಗುವದು. ಹೀಗೆಯೇ ಪರಮೇಶ್ವರನನ್ನು ನಂಬುವದಕ್ಕೂ ಆತನ ಸ್ವರೂಪವನ್ನು ಅರಿತುಕೊಳ್ಳುವದಕ್ಕೂ ವ್ಯತ್ಯಾಸವಿದೆ.     ನಂಬಿಕೆಯು ಅರಿವಲ್ಲವಾದರೂ ಅರಿವನ್ನು ಸಂಪಾದಿಸಿಕೊಳ್ಳುವದಕ್ಕೆ ಅದು ಒಂದು ದೊಡ್ಡ ಸಾಧನವಾಗಿರುತ್ತದೆ. ಯಾವನಿಗೆ ಭಗವಂತನ ಇರುವಿಕೆಯಲ್ಲಿ ನಂಬಿಕೆಯಿಲ್ಲವೋ ಯಾವನಿಗೆ ಭಗವಂತನಿಂದ ಪುರುಷಾರ್ಥಪ್ರಾಪ್ತಿಯಾಗುವದೆಂಬ ವಿಶ್ವಾಸವಿಲ್ಲವೋ ಅವನಿಗೆ ಭಗವಂತನನ್ನು ಅರಿತುಕೊಳ್ಳುವದು ಎಂದಿಗೂ ಸಾಧ್ಯವಿಲ್ಲ. ಅವನು ಎಂದೆಂದಿಗೂ ಭಗವಂತನನ್ನು ಅರಿಯುವದಕ್ಕೆ ಪ್ರಯತ್ನಮಾಡುವ ಸಂಭವವೂ ಇಲ್ಲ. ಆದ್ದರಿಂದ ಭಗವಂತನ ಇರುವಿಕೆಯಲ್ಲಿಯೂ ಆತನ