Posts

Showing posts from October, 2017

ಲಲಿತಾ ತ್ರಿಶತೀ ( ಏಕಾರಾದಿನಾಮ ) - 2. ಓಂ ಏಕಾಕ್ಷರ್ಯೈ ನಮಃ

ಮುಖ್ಯವಾದ ಅಕ್ಷರ ಅಥವಾ ಮಾಯೆಯೆಂಬ ಉಪಾಧಿಯುಳ್ಳವಳು. ಮಾಯೆಯು ಈಶ್ವ್ರನಿಗೆ ಉಪಾಧಿಯಾಗಿ ಪ್ರತಿಬಿಂಬದಲ್ಲಿ ಸರ್ವಜ್ಞತ್ವ ಮುಂತಾದ ವಿಶೇಷಗಳನ್ನು ಉಂಟುಮಾಡುವುದು. ಅಂತಹ ಮಾಯೆಯು ಆತ್ಮ ಜ್ಞಾನದಿಂದ ಮುಕ್ತಿಯು ಲಭಿಸುವವರೆಗೂ ನಾಶವಾಗದಿರುವುದರಿಂದ ಕೂಟಸ್ಥವೆಂಬ ಅರ್ಥವನ್ನು ಬೋಧಿಸುವ ಅಕ್ಷ್ರ ಶಬ್ದದಿಂದ ಕರೆಯಲ್ಪಡುವುದು ಅಥವಾ ಓಂಕಾರವೆಂಬ ಏಕಾಕ್ಷರವುಳ್ಳವಳು ಸಕಲ ಶಬ್ದಗಳಿಗೂ ಶಬ್ದಗಳ ಮೂಲಕ ಅರ್ಥಗಳಿಗೂ ಪ್ರಕೃತಿಯು ಓಂಕಾರವು ಇದನ್ನು ಪ್ರತ್ಯೇಕವಾಗಿ ಅವಲಂಬಿಸಿ ಪರ-ಅಪರ ಬ್ರಹ್ಮವಸ್ತುವನ್ನು ಉಪಾಸನೆ ಮಾಡಿ ಪರಾಪರ ಬ್ರಹ್ಮತಾದಾತ್ಮ್ಯವನ್ನು ಹೊಂದಬಹುದು. ಆದ್ದರಿಂದ ದೇವಿಯು ಶಬ್ದಬ್ರಹ್ಮರೂಪವಾದ ಪ್ರಣವಾಕ್ಷರವುಳ್ಳವಳು ಅಥವಾ, ಅಖಂಡಾನಂದ ಚೈತನ್ಯರೂಪನಾದ, ಅನಶ್ವರನಾದ ಪರಮೇಶ್ವ್ರನು ಅರ್ಧ ಶರೀರ ಭಾಗದಲ್ಲಿರುವಳು ಅಥವಾ ಮಾಯಾಬೀಜ ಮುಂತಾದ ವರ್ಣಗಳನ್ನು ಉಪಾಸನಾ ಪ್ರತೀಕವನ್ನಾಗಿ ಹೊಂದಿರುವವಳು ಅಥವಾ ಅಖಂಡಾಕಾರವಾದ ವೃತ್ತಿಯಲ್ಲಿ ಚೈತನ್ಯವು ಪ್ರತಿಬಿಂಬಿಸುವುದರಿಂದ ಅಂತಹ ವೃತ್ತಿವ್ಯಾಪ್ತಿ ಮಾತ್ರ ವಿವಕ್ಷೆಯಿಂದ ಅಕ್ಷರ ಪದದ ಅರ್ಥವಾದ ಚೈತನ್ಯಕ್ಕೆ ವಿಷಯಳಾಗುವವಳು. "ಅಥಪರಾ ಯಯಾ ತದಕ್ಷ್ರಮಧಿಗಮ್ಯತೇ" ಎಂಬ ಶ್ರುತಿಯು ವೃತ್ತಿ ವ್ಯಾಪ್ತಿಯನ್ನು ಅಕ್ಷರ ರೂಪ ಪರಬ್ರಹ್ಮ ವಸ್ತುವಿನಲ್ಲಿ ವರ್ಣಿಸುವುದು. ಸುಗುಣ ಬ್ರಹ್ಮ ವಸ್ತುವಿನಲ್ಲಿರುವ ವಿಶೇಷಣ ಧರ್ಮಗಳು ನಿರ್ಗುಣ ಬ್ರಹ್ಮ ವಸ್ತುವಿನಲ್ಲಿಯೂ ಕಲ್ಪಿತವಾಗಿ ಸಂಸಕ್ತವಾಗುವುವು ಎಂಬುದನ

ಲಲಿತಾ ತ್ರಿಶತೀ (ಏಕಾರಾದಿನಾಮ) - 1. ಓಂ ಏಕಾರರೂಪಾಯೈ ನಮಃ

Image
ಮಂತ್ರದಲ್ಲಿ ದ್ವಿತೀಯಾಕ್ಷರವಾಗಿದ್ದು ಮಂತ್ರ ಶರೀರಳಾದ ದೇವಿಯನ್ನು ಭೋಧಿಸುವುದರಿಂದ ದೇವಿಯು ಏಕಾರವೆಂಬ ರೂಪವುಳ್ಳವಳು. ಏಕಾರಃ ರೂಪಂ ಯಸ್ಯಾಃ ಎಂದು ವಿಗ್ರಹವು

ಲಲಿತಾ ತ್ರಿಶತೀ -20 ಓಂ ಕರ್ಮಫಲಪ್ರದಾಯೈ ನಮಃ

Image
ಕಾಲಾಂತರದಲ್ಲಿ ಉಂಟಾಗುವ ಫಲಗಳಿಂದ ಕೂಡಿದ ಸತ್ಕರ್ಮಗಳ ಫಲವನ್ನು ಅನುಗ್ರಹಿಸುವಳು. ಅದೃಷ್ಟವು ಕರ್ಮಫಲವನ್ನು ಕೊಡುವುದೆಂದು ಕರ್ಮ ಮಿಮಾಂಸಾ ಶಾಸ್ತ್ರಕಾರ್ರ ಸಿದ್ಧಾಂತವು. ಅದು ಸಮಂಜಸವಾಗಲಾರದು. ಅಚೇತನವೂ ಜಡವೂ ಆದ ಅದೃಷ್ಟಕ್ಕೆ ಚೇತನ ಧರ್ಮವಾದ ಕರ್ಮಫಲದಾನ ಶಕ್ತಿಯು ಸಂಭವಿಸುವುದಿಲ್ಲ. ಶಾಸ್ತ್ರ ಪ್ರಮಿತವಾದ ಕರ್ಮಗಳು ಫಲವನ್ನು ಅವಶ್ಯವಾಗಿ ಕೊಡಬೇಕಾದುದರಿಂದ ಕರ್ಮಾಧ್ಯಕ್ಷಳಾದ ಪರದೇವತೆಯನ್ನು ಅಪೇಕ್ಷಿಸುವುದು. ಪರದೇವತೆಯು ಕರ್ಮಫಲವನ್ನು ಕೊಡುವುದೆಂಬುದನ್ನು  "ಕರ್ಮಾಧ್ಯಕ್ಷಃ"  "ಮಯೈವ ವಿಹಿತಾನ್ ಹಿ ತಾನ್" "ಫಲಮತ ಉಪಪತ್ತೇಃ" ಎಂಬ ಶ್ರುತಿ, ಸ್ಮೃತಿ, ನ್ಯಾಯಗಳು ಸಾರಿ ಹೇಳುವುವು ಆದ್ದರಿಂದ ದೇವಿಯು ಕರ್ಮ ಫಲ ಪ್ರದಾನ ಮಾಡುವವಳು. ಕರ್ಮಣಾಂ ಫಲಂ ಪ್ರದದಾತಿ ಎಂದು ವಿಗ್ರಹವು. ( ಮುಂದುವರೆಯುವುದು...)