Posts

Showing posts from November, 2017

ಲಲಿತಾ ತ್ರಿಶತೀ ( ಏಕಾರಾದಿನಾಮ ) - 3. ಓಂ ಏಕಾನೇಕಾಕ್ಷರಾಕೃತಯೇ ನಮಃ

ಏಕ, ಮತ್ತು ಅನೇಕವಾದ ಅಕ್ಷರಗಳು ಅಜ್ಞಾನವಿಶೇಷಗಳು ಈಶ್ವರ ರೂಪವಾದ ಚೈತನ್ಯ ಪ್ರತಿ ಬಿಂಬಕ್ಕೆ ಉಪಾಧಿಯಾಗಿರುವ ಶುದ್ಧ ಸತ್ತ್ವ ಪ್ರಧಾನವಾದ ಅಜ್ಞಾನವು ಏಕಾಕ್ಷರವು, ಜೀವ ಪ್ರತಿಬಿಂಬೋಪಾಧಿ ರೂಪವಾಗಿರುವ ಮಲಿನ ಸತ್ತ್ವ ಪ್ರಧಾನವಾದ ಅಜ್ಞಾನಗಳು ಅನೇಕಾಕ್ಷ್ರಗಳು. "ಮಾಯಾ ಚಾವಿದ್ಯಾ ಚ ಸ್ವಯಮೇವ ಭವತಿ" ಎಂದು ಶ್ರುತಿಯಿಂದ ಜೀವೇಶ್ವ್ರ ಪ್ರತಿಬಿಂಬೋಪಾಧಿಗಳ ಭೇದವು ವ್ಯಕ್ತವಾಗುವುದು. ಇವು ಮಾಯಾ ಶಬ್ದದಿಂದ ಕರೆಯಲ್ಪಡುವುವೂ ಪ್ರಕೃತಿ ರೂಪಗಳೂ ಆಗಿವೆ. ಮಾಯಾಂತು ಪ್ರಕೃತಿಂ ಎಂಬ ಶ್ರುತಿಯು ಈ ಅರ್ಥದಲ್ಲಿ ಪ್ರಮಾಣವಾಗಿರುವುದು. ಆ ಅಕ್ಷರವೆಂಬ ಅಜ್ಞಾನಗಳಲ್ಲಿ ಚೈತನ್ಯವು ಪ್ರತಿಬಿಂಬ ಅಥವಾ ಅವಚ್ಛಿನ್ನ ರೂಪವನ್ನು ಹೊಂದುವುದು. ಗಡಿಗೆಯಲ್ಲಿರುವ ನೀರಿನಲ್ಲಿ ಆಕಾಶವು ಪ್ರತಿ ಬಿಂಬರೂಪ ಅಥವಾ ಅವಚ್ಛಿನ್ನರೂಪಗಳಿಂದ ಇರುವುದು. ಅದರಂತೆ ಇರುವ ಚೈತನ್ಯವುಳ್ಳವಳು ಅಥವಾ ಪ್ರಣವ ಮುಂತಾದುದು ಏಕಾಕ್ಷರವು. ಅಕಾರ ಮೊದಲುಗೊಂಡು ಕ್ಷಕಾರ ಪರ್ಯಂತವಿರುವ ವರ್ಣಗಳು ಅನೇಕಾಕ್ಷರಗಳು ಅಂತಹ ಎಲ್ಲ ವರ್ಣಗಳು ಸ್ವರೂಪವಾಗಿ ಉಳ್ಳವಳೂ "ಅಕಾರಾದಿ ಕ್ಷಕಾರಾಂತಾ ಮಾತೃಕೇತ್ಯಭಿಧೀಯತೇ" ಎಂಬ ವಚನದಿಂದ ವರ್ಣಗಳೆಲ್ಲವೂ ಮಾತೃಕಾ ರೂಪವಾದ್ದರಿಂದ ಮಾತೃಕಾಕಾರವುಳ್ಳವಳೂ ಎಂದು ಅರ್ಥವು ಅಥವಾ "ಏ" + "ಕ" ಎಂಬ ಎರಡು ವರ್ಣಗಳು, ಮಿಕ್ಕ ಅನೇಕಾಕ್ಷರಗಳು ಸೇರಿ ಹದಿನೈದು ವರ್ಣಸ್ವರೂಪವಾದ ಮಂತ್ರದ ಆಕೃತಿಯುಳ್ಳವಳು. ಅಥವಾ ಏಕಭೂತವಾಗಿ ಅ

ಧಾತ್ರೀಹವನದ ವೈಶಿಷ್ಟ್ಯ

Image
   ಅಭ್ಯುದಯಕ್ಕಾಗಿ ಮಾನವನು ಪ್ರಕೃತಿಮಾತೆಗೆ ಸಲ್ಲಿಸುವ ಧಾತ್ರೀಹವನವು ಕಾರ್ತಿಕಮಾಸದಲ್ಲಿ ಆಚರಿಸಲ್ಪಡುತ್ತದೆ. ಈ ಸಮಯವನ್ನು 'ಕೌಮುದೀ ಮಹೋತ್ಸವ' ಕಾಲವೆಂದೂ ಕರೆಯುತ್ತಾರೆ. ಕು - ಎಂದರೆ ಭೂಮಿ, ಮುದ್ - ಎಂದರೆ ಸಂತೋಷ. ಪೈರು-ಫಸಲುಗಳು ಕೈಗೆ ಬಂದಾಗ ಉತ್ತು ಬಿತ್ತಿದ ರೈತನು ಹಿಗ್ಗಿನ ಬುಗ್ಗೆಯಾಗಿ ಕಾರ್ತಿಕದೀಪವನ್ನು ಬೆಳಗಿ ಹಬ್ಬಗಳನ್ನು ಆಚರಿಸುತ್ತಾನೆ. ದೀಪಾವಳಿ, ಬಲಿಪಾಡ್ಯಮಿ, ತುಳಸೀಹುಣ್ಣಿಮೆ - ಇವೇ ಆ ಹಬ್ಬಗಳು.     ಪುಣ್ಯತಮವಾದ ಕಾರ್ತಿಕಮಾಸದಲ್ಲಿ ಅಭಕ್ಷ್ಯಭಕ್ಷಣ, ಅಪೇಯಪಾನ ಮುಂತಾದ ದೋಷಗಳ ನಿವಾರಣೆಗಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ಮತ್ತು ಭೂಮಿಯನ್ನು ಅಗೆಯುವದು, ಕಡಿಯುವದು, ತುಳಿಯುವದೇ ಮುಂತಾದ ನಿರಂತರವಾದ ಹಿಂಸೆಯನ್ನು ಸಹಿಸಿಕೊಂಡು ನಮಗೆ ಸುಜಲ-ಸುಫಲಗಳನ್ನಿತ್ತು ರಕ್ಷಿಸಿ ಸಸ್ಯ ಶ್ಯಾಮಲೆಯಾಗಿ ಕಂಗೊಳಿಸುವ ಭೂಮಾತೆಯಲ್ಲಿ ಕ್ಷಮಾಯಾಚನೆಗಾಗಿ, ಹಾಗೂ ಕಾರ್ತಿಕದಾಮೋದರನ ಪ್ರೀತಿಗಾಗಿ ಸಮಸ್ತ ಪ್ರಕೃತಿಯ ಸಂಕೇತವಾದ ನೆಲ್ಲಿಯಮರದ ಬುಡದಲ್ಲಿ ಮಾಡುವ ಪೂಜಾ-ಹೋಮಗಳೇ ಧಾತ್ರಿಹವನವೆನಿಸುವದು. ಭೂಮಾತೆದಯಾಪಾಲಿಸಿದ ಪೈರನ್ನು ನಾವು ಉಪಯೋಗಿಸುವ ಮುಂಚೆ "ಕೆರೆಯ ನೀರನ್ನು ಕೆರೆಗೆ ಚೆಲ್ಲಿ" ಎಂಬ ದಾಸವಾಣಿಯಂತೆ ಅಲ್ಪಭಾಗವನ್ನಾದ್ರೂ ಭಗವಂತನಿಗೆ ಅರ್ಪಿಸಿ ಕೃತಾರ್ಥರಾಗುವ ಸಂದರ್ಭವೇ ಈ ಧಾತ್ರಿಯ ಆರಾಧನೆಯಾಗಿದೆ. ಅಲ್ಲದೆ ಪೈರನ್ನು ಕೊಯ್ಯುವ, ಕುಟ್ಟುವ, ಒಕ್ಕಲಿಕ್ಕುವ, ಬೇಯಿಸುವ, ಅರೆಯುವದೇ ಮುಂತಾದ ಕಾರ್ಯ